Chinnaswamy Stadium ನಲ್ಲಿ ರಾಹುಲ್ ದ್ರಾವಿಡ್-ಅನಿಲ್ ಕುಂಬ್ಳೆ ಸ್ಟ್ಯಾಂಡ್ : KSCA ಅಧಿಕೃತ ಅನಾವರಣ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ರಾಜ್ಯದ ಕ್ರಿಕೆಟ್ ಅಭಿಮಾನಿಗಳಿಗೆ ಹೆಮ್ಮೆಯ ಕ್ಷಣವೊಂದು ಸಿಕ್ಕಿದೆ. Chinnaswamy Stadium ನಲ್ಲಿ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರನ್ನು ಸ್ಟೇಡಿಯಂ ಎಂಡ್ಗಳಿಗೆ ಅನಿಲ್ ಕುಂಬ್ಳೆ ಎಂಡ್ ಮತ್ತು ರಾಹುಲ್ ದ್ರಾವಿಡ್ ಎಂಡ್ ಎಂಬ ಹೆಸರಿನಲ್ಲಿ ನಾಮಕರಣ ಮಾಡಿ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.

READ THIS : ಬಿಸಿಲಿನ ಬೇಗೆಯಿಂದ ಕಂಗೆಟ್ಟವರಿಗೆ ಗುಡ್ನ್ಯೂಸ್ – ನಾಳೆಯಿಂದ ಭರ್ಜರಿ ಮಳೆ
ವಿಶ್ವ ಮಟ್ಟದಲ್ಲಿ ಭಾರತಕ್ಕೆ ಗೌರವ
ಇನ್ನು ಈ ಮಹತ್ವದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದ KSCA ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರ ನೇತೃತ್ವದ ಎಲ್ಲಾ ಪದಾಧಿಕಾರಿಗಳ ಪರಿಶ್ರಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಭಾರತದ ಅತ್ಯಂತ ಯಶಸ್ವಿ ಸ್ಪಿನ್ನರ್ಗಳಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್ ಇಬ್ಬರೂ ತಮ್ಮ ಆಟದ ಮೂಲಕ ವಿಶ್ವ ಮಟ್ಟದಲ್ಲಿ ಭಾರತಕ್ಕೆ ಗೌರವ ತಂದಿದ್ದಾರೆ.

ಅಭಿಮಾನಿಗಳು ಸಂತಸ
ಇದೀಗ ಅವರ ಹೆಸರನ್ನು ಸ್ಟೇಡಿಯಂನಲ್ಲಿ ಶಾಶ್ವತವಾಗಿ ಅಚ್ಚಳಿಯದಂತೆ ಉಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ವಿಶೇಷ ಕ್ಷಣವನ್ನು ಕಂಡು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
MUST WATCH : ಬಾಗಲಕೋಟೆಯಲ್ಲಿ ರಂಗೇರಿದ ಉಪಚುನಾವಣೆ -BJP, CONGRESS ನಡುವೆ ತೀವ್ರ ವಾಗ್ವಾದ




