IPL 2026 : ಐಪಿಎಲ್ 2026ರಲ್ಲಿ ಆರ್ಸಿಬಿ ತನ್ನ ಮೂರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಪಂದ್ಯ ಸಮಯ, ಸ್ಥಳ ಮತ್ತು ಪ್ರಸಾರ ವಿವರಗಳನ್ನು ಇಲ್ಲಿ ತಿಳಿಯಿರಿ..

IPL 2026 ನಲ್ಲಿ ಹಾಲಿ ಚಾಂಪಿಯನ್ RCB ಇದುವರೆಗೆ ಆಡಿರುವ ಮೊದಲ ಎರಡು ಪಂದ್ಯಗಳನ್ನು ಗೆದ್ದು ಭರ್ಜರಿ ಆರಂಭ ಮಾಡಿದೆ.
ಮೊದಲ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ಹೊಂದಿರುವ Sunrisers Hyderabad ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಆರ್ಸಿಬಿ, ನಂತರ ನಡೆದ ಎರಡನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್.Chennai Super Kings ತಂಡವನ್ನೂ ಸೋಲಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ.
ಈ ಎರಡು ಗೆಲುವುಗಳೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆರ್ಸಿಬಿ ಈಗ ತನ್ನ ಮೂರನೇ ಪಂದ್ಯಕ್ಕಾಗಿ ಸಜ್ಜಾಗಿದೆ.

ಆರ್ಸಿಬಿ vs ರಾಜಸ್ಥಾನ್ ಪಂದ್ಯ – ದಿನಾಂಕ, ಸಮಯ ಮತ್ತು ಸ್ಥಳ
ಈಗ ಆರ್ಸಿಬಿ ತನ್ನ ಹ್ಯಾಟ್ರಿಕ್ ಗೆಲುವಿಗಾಗಿ ಮತ್ತೊಂದು ಬಲಿಷ್ಠ ತಂಡವಾದ
Rajasthan Royals ವಿರುದ್ಧ ಕಣಕ್ಕಿಳಿಯಲಿದೆ.
- ಪಂದ್ಯ: ಆರ್ಸಿಬಿ vs ರಾಜಸ್ಥಾನ್
- ದಿನಾಂಕ: ಏಪ್ರಿಲ್ 10, 2026
- ಸಮಯ: ಸಂಜೆ 7:30 (ಟಾಸ್ – ಸಂಜೆ 7:00)
- ಸ್ಥಳ: Barsapara Cricket Stadium
ಈ ಪಂದ್ಯವು ಐಪಿಎಲ್ 2026ರ 16ನೇ ಪಂದ್ಯವಾಗಿದ್ದು, ಎರಡೂ ತಂಡಗಳಿಗೂ ಮಹತ್ವದ ಪಂದ್ಯವಾಗಲಿದೆ.

ಪಂದ್ಯವನ್ನು ಟಿವಿ ಮತ್ತು ಮೊಬೈಲ್ನಲ್ಲಿ ವೀಕ್ಷಿಸುವುದು ಹೇಗೆ?
ಕ್ರಿಕೆಟ್ ಅಭಿಮಾನಿಗಳು ಈ ರೋಚಕ ಪಂದ್ಯವನ್ನು ವಿವಿಧ ಮಾಧ್ಯಮಗಳ ಮೂಲಕ ವೀಕ್ಷಿಸಬಹುದು.ಆರ್ಸಿಬಿ ಮತ್ತು ರಾಜಸ್ಥಾನ್ ನಡುವಿನ ಪಂದ್ಯವನ್ನು Star Sports ನೆಟ್ವರ್ಕ್ನಲ್ಲಿ ನೇರಪ್ರಸಾರವಾಗಿ ವೀಕ್ಷಿಸಬಹುದು.ಮೊಬೈಲ್ ಬಳಕೆದಾರರು ಈ ಪಂದ್ಯವನ್ನು JioHotstar ಅಪ್ಲಿಕೇಶನ್ ಮೂಲಕ ಲೈವ್ ವೀಕ್ಷಿಸಬಹುದು.

ರಾಜಸ್ಥಾನ್ ರಾಯಲ್ಸ್ ಪ್ರಮುಖ ಆಟಗಾರರ ಪಟ್ಟಿ
ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಸಂದೀಪ್ ಶರ್ಮಾ, ರವಿ ಬಿಷ್ಣೋಯ್, ತುಷಾರ್ ದೇಶಪಾಂಡೆ, ಆಡಮ್ ಮಿಲ್ನೆ, ದಸುನ್ ಶನಕ, ಕುಲದೀಪ್ ಸೇನ್ ಸೇರಿದಂತೆ ಹಲವು ಆಟಗಾರರು ತಂಡದಲ್ಲಿದ್ದಾರೆ.

ಆರ್ಸಿಬಿ ಪೂರ್ಣ ತಂಡ – ಪ್ರಮುಖ ಆಟಗಾರರು
RCB ತಂಡದ ಪ್ರಮುಖ ಆಟಗಾರರು , ರಜತ್ ಪಾಟಿದಾರ್, Virat Kohli, ದೇವದತ್ತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ವೆಂಕಟೇಶ್ ಅಯ್ಯರ್, ಜೋಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ ಸೇರಿದಂತೆ ಹಲವು ಆಟಗಾರರು ತಂಡದಲ್ಲಿದ್ದಾರೆ.




