ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ RCB ಮತ್ತು CSK ಪಂದ್ಯಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತರು ಅಭಿಮಾನಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.

RCB vs CSK : ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅಭಿಮಾನಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಐಪಿಎಲ್ ಟಿಕೆಟ್ ಇಲ್ಲದವರು ಕ್ರೀಡಾಂಗಣದ ಬಳಿ ಬರಬಾರದು. ಒಂದೊಮ್ಮೆ ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಇದೇ ವೇಳೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
MUST READ : ವರದಕ್ಷಿಣೆಗಾಗಿ ಪೆಟ್ರೋಲ್ ಸುರಿದು ಗರ್ಭಿಣಿ ಸೊಸೆಯನ್ನೇ ಕೊಂದ ಅತ್ತೆ- ಮಾವ

ಮೆಟ್ರೋ ಮತ್ತು ಬಿಎಂಟಿಸಿ ಬಳಸಲು ಅಭಿಮಾನಿಗಳಿಗೆ ಮನವಿ
ಹಿಂದಿನ ಪಂದ್ಯ ಸಂದರ್ಭದಲ್ಲಿ ಸುಮಾರು 32 ಸಾವಿರಕ್ಕೂ ಹೆಚ್ಚು ಜನರು ಮೆಟ್ರೋ ಸೇವೆಯನ್ನು ಬಳಸಿದ್ದರು ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಹೀಗಾಗಿ, ನಾಳೆಯ ಪಂದ್ಯಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮೆಟ್ರೋ ಮತ್ತು ಬಿಎಂಟಿಸಿ ಬಸ್ ಸೇವೆಯನ್ನು ಬಳಸುವಂತೆ ಮನವಿ ಮಾಡಲಾಗಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಸುರಕ್ಷಿತ ಪ್ರಯಾಣ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್ ಕಳ್ಳತನ ಪ್ರಕರಣಗಳ ಹಿನ್ನೆಲೆ: ಜಾಗರೂಕರಾಗಿರಿ
ಕಳೆದ ಪಂದ್ಯ ಸಮಯದಲ್ಲಿ ಹಲವರ ಮೊಬೈಲ್ಫೋನ್ ಕಳ್ಳತನವಾದ ಪ್ರಕರಣಗಳು ವರದಿಯಾಗಿದ್ದವು. ಈ ಸಂಬಂಧ ಹಲವರು ದೂರು ನೀಡಿದ್ದು, ಪೊಲೀಸರು 71 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದರು.
ಈ ಕೃತ್ಯದಲ್ಲಿ ಹೊರ ರಾಜ್ಯದಿಂದ ಬಂದ ಕೆಲವರು ಭಾಗಿಯಾಗಿರುವುದು ತಿಳಿದುಬಂದಿದೆ. ಆದ್ದರಿಂದ ಪಂದ್ಯ ವೇಳೆ ಸಾರ್ವಜನಿಕರು ತಮ್ಮ ಮೊಬೈಲ್ ಮತ್ತು ವೈಯಕ್ತಿಕ ವಸ್ತುಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸುವಂತೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ಮೆಟ್ರೋ ಸಂಚಾರ ಸಮಯ ವಿಸ್ತರಣೆ – ರಾತ್ರಿ 2 ಗಂಟೆಯವರೆಗೆ ಸೇವೆ
ನಾಳೆ ನಡೆಯಲಿರುವ ಐಪಿಎಲ್ ಪಂದ್ಯ ಹಿನ್ನೆಲೆ ಬೆಂಗಳೂರು ಮೆಟ್ರೋ (BMRCL) ಸಂಚಾರ ಸಮಯವನ್ನು ವಿಸ್ತರಿಸಲಾಗಿದೆ. ಅಭಿಮಾನಿಗಳಿಗೆ ಸುಲಭ ಮತ್ತು ಸುರಕ್ಷಿತ ಪ್ರಯಾಣ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ವಿಸ್ತರಿಸಲಾದ ಕೊನೆಯ ಮೆಟ್ರೋ ಸಮಯಗಳು:
- ವೈಟ್ಫೀಲ್ಡ್ (ಕಾಡುಗೋಡಿ) – ರಾತ್ರಿ 12:30
- ಚೆಲ್ಲಘಟ್ಟ – ರಾತ್ರಿ 12:45
- ರೇಷ್ಮೆ ಸಂಸ್ಥೆ / ಮಾದಾವರ – ರಾತ್ರಿ 12:45
- ಬೊಮ್ಮಸಂದ್ರ – ರಾತ್ರಿ 12:30
- ಆರ್.ವಿ. ರಸ್ತೆ – ರಾತ್ರಿ 2:00
- ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) – ಮಧ್ಯರಾತ್ರಿ 1:30ಕ್ಕೆ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು
MUST WATCH : ಏ.8ಕ್ಕೆ ತುಮಕೂರಿನಲ್ಲಿ ಜನಸಂಪರ್ಕ ಸಭೆ – ಅಧಿಕಾರಿಗಳಿಗೆ DC ಏನ್ ಸೂಚನೆ ಕೊಟ್ರು? | TUMAKURU NEWS |




