Bengaluru ಚಂದ್ರಾ ಲೇಔಟ್ನ ಭೈರವೇಶ್ವರ ನಗರದಲ್ಲಿ ನೀರಿನ ಬಕೆಟ್ನಲ್ಲಿ ಮುಳುಗಿ ಮಗು ಸಾವನ್ನಪ್ಪಿದ ಘಟನೆ ನಡೆದಿದೆ.

ಪ್ರಕರಣವು Bengaluru ಚಂದ್ರಾ ಲೇಔಟ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ಸಂಭವಿಸಿದ್ದು, ಮಗುವಿನ ದಾರುಣ ಸಾವನ್ನು ಕಂಡ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಅಗಸ್ತ್ಯ ಮೃತ ಮಗು ಎಂದು ಗುರುತಿಸಲಾಗಿದೆ. ಪ್ರತಿಭಾ (29) ಆತ್ಮಹತ್ಯೆ ಮಾಡಿಕೊಂಡ ತಾಯಿ. ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ತಾಯಿ ಮತ್ತು ಮಗು ಇಬ್ಬರೇ ಇದ್ದರು.
ಪ್ರತಿಭಾ ಮತ್ತು ಅವರ ಪತಿ ಮಹಂತೇಶ್ ಇಬ್ಬರೂ ವೃತ್ತಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಗಳಾಗಿದ್ದು, ಪ್ರತಿಭಾ ವರ್ಕ್ ಫ್ರಂ ಹೋಂ ಮಾಡುತ್ತಿದ್ದರು. ಪತಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಬಕೆಟ್ನಲ್ಲಿ ಮುಳುಗಿ ಮಗು ಸಾವು
ಪ್ರತಿಭಾ ಬಟ್ಟೆ ಒಣಹಾಕಿ ತರಲು ಟೆರೆಸ್ಗೆ ಹೋಗಿದ್ದಾಗ, ಮಗು ಆಟ ಆಡುತ್ತ ಬಚ್ಚಲು ಮನೆಗೆ ಹೋಗಿದೆ. ಈ ವೇಳೆ ನೀರಿನಿಂದ ತುಂಬಿದ್ದ ಬಕೆಟ್ನಲ್ಲಿ ಮಗು ಮುಳುಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಈ ಘಟನೆ ತಾಯಿಗೆ ಭಾರೀ ಆಘಾತ ಉಂಟುಮಾಡಿದ್ದು, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾತ್ರಿ ಮನೆಗೆ ವಾಪಸ್ ಬಂದ ಪತಿ ಮಹಂತೇಶ್, ಪತ್ನಿ ಬಾಗಿಲು ತೆಗೆಯದ ಕಾರಣ ತನ್ನ ಬಳಿ ಇದ್ದ ಕೀಲಿಯಿಂದ ಬಾಗಿಲು ತೆರೆಯಿದ್ದಾರೆ. ಒಳಗೆ ಹೋಗಿ ನೋಡಿದಾಗ ಪ್ರತಿಭಾ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.
ಮಗು ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿ ಇದ್ದು, ಪರಿಶೀಲಿಸಿದಾಗ ಮಗು ಕೂಡ ಮೃತಪಟ್ಟಿರುವುದು ದೃಢಪಟ್ಟಿದೆ.
MUST READ : Dina Bhavishya : ದಿನ ಭವಿಷ್ಯ 2 ಏಪ್ರಿಲ್ 2026..

ಡೆತ್ ನೋಟ್ ಪತ್ತೆ – ಘಟನೆಗೆ ಕಾರಣ ಬರೆದಿಟ್ಟ ತಾಯಿ
ಸ್ಥಳದಲ್ಲಿ ಪತ್ನಿ ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದೆ. ಜೊತೆಗೆ ಖಾಲಿಯಾಗಿದ್ದ 15 ಮಾತ್ರೆಗಳ ಶೀಟ್ ಕೂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೆತ್ ನೋಟ್ನಲ್ಲಿ,
ತಾನು ಬಟ್ಟೆ ತರಲು ಹೋಗಿದ್ದ ವೇಳೆ ಮಗು ಬಕೆಟ್ನಲ್ಲಿ ಮುಳುಗಿ ಸಾವನ್ನಪ್ಪಿದ ವಿಚಾರವನ್ನು ಉಲ್ಲೇಖಿಸಿ, “ನನ್ನ ಮಗುವಿನ ಸಾವಿಗೆ ನಾನೇ ಕಾರಣ” ಎಂದು ಬರೆದಿರುವುದು ತಿಳಿದುಬಂದಿದೆ.
ಮೊದಲು ಮಾತ್ರೆ ಸೇವಿಸಿ ಮತ್ತು ಕೈಗೆ ಗಾಯ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದರೂ, ನಂತರ ನೇಣಿಗೆ ಶರಣಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಪ್ರಕರಣ ದಾಖಲು – ಪೊಲೀಸರ ತನಿಖೆ
ಘಟನೆ ಸಂಬಂಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಈ ದುರ್ಘಟನೆ ಕುಟುಂಬ ಮತ್ತು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
MUST WATCH : 🔴LIVE | ರಂಗೇರಿದ ದಾವಣಗೆರೆ ದಕ್ಷಿಣ ಕ್ಷೇತ್ರ- ಗೆಲ್ಲೋ ಅಭ್ಯರ್ಥಿ ಯಾರು? | DAVANAGERE BY-ELECTION |




