ರಾಜ್ಯದಲ್ಲಿ SSLC ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಶಿಕ್ಷಣ ಇಲಾಖೆ ಎಸ್ಎಸ್ಎಲ್ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಮುಂದಾಗಿದೆ.

SSLC ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ. ಇನ್ನು ಮುಂದೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು 625 ಅಂಕಗಳ ಬದಲಾಗಿ 525 ಅಂಕಗಳಿಗೆ ನಡೆಸಲಾಗುತ್ತದೆ ಎಂದು ಶಿಕ್ಷಣ ಸಚಿವಮಧು ಬಂಗಾರಪ್ಪ ತಿಳಿಸಿದ್ದಾರೆ.
625ರಿಂದ 525 ಅಂಕಕ್ಕೆ ಇಳಿಕೆ
ಮಾಧ್ಯಮಗಳ ಜೊತೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ವರ್ಷದಿಂದ ರಾಜ್ಯದ ಪಠ್ಯಕ್ರಮದಲ್ಲಿ ತೃತೀಯ ಭಾಷೆ ಕಡ್ಡಾಯವಲ್ಲ. ವಿದ್ಯಾರ್ಥಿಗಳು ತೃತೀಯ ಭಾಷೆ ಪರೀಕ್ಷೆ ಬರೆಯುತ್ತಾರೆ. ಆದರೆ ಆ ಭಾಷೆಯ 100 ಅಂಕ ಪರಿಗಣೆ ಮಾಡುವುದಿಲ್ಲ ಎಂದು ತಿಳಿಸಿದರು.
MUST WATCH : 14 ಗ್ರಾ.ಪಂಚಾಯ್ತಿಗಳು ಪಾಲಿಕೆ ಸೇರ್ಪಡೆ ಇಲ್ಲ- ಅಭಿವೃದ್ಧಿ ಕನಸು ಕಾಣುತ್ತಿದ್ದವರಿಗೆ ಶಾಕ್..!

ಹೊಸ ನಿಯಮಗಳು ಈ ವರ್ಷದ ಪರೀಕ್ಷೆಯಿಂದಲೇ ಜಾರಿ
ತೃತೀಯ ಭಾಷೆಗೆ ಅಂಕಗಳ ಬದಲಾಗಿ ಎಬಿಸಿಡಿ ಆಧಾರದ ಮೇಲೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಈ ವಿಷಯದಲ್ಲಿ ಪಾಸ್ ಅಥವಾ ಫೇಲ್ ಎಂಬ ವ್ಯವಸ್ಥೆ ಇರುವುದಿಲ್ಲ. ಹಿಂದಿ ಭಾಷೆಯನ್ನೂ ಕಡ್ಡಾಯವಲ್ಲ ಎಂದು ಅವರು ತಿಳಿಸಿದರು. ಈ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯನವರು ಒಪ್ಪಿದ್ದಾರೆ ಎಂದು ಹೇಳಿದರು. ಈ ಹೊಸ ನಿಯಮಗಳು ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಿಂದಲೇ ಜಾರಿಗೆ ಬರಲಿದ್ದು, ಇಂದು ಸಂಜೆ ಒಳಗೆ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಸಚಿವರು ಹೇಳಿದರು.
ಕನ್ನಡ ವಿಷಯಕ್ಕೆ ಧಕ್ಕೆ ಆಗದಂತೆ ಕ್ರಮ
ಈ ವೇಳೆ ಉರ್ದು ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ತೃತೀಯ ಭಾಷೆಯನ್ನಾಗಿ ಓದಿಸಲಾಗುತ್ತದೆ. ಇಲ್ಲಿ ಕನ್ನಡ ಇರುವುದಿಲ್ಲವೇ ಎಂಬ ಪ್ರಶ್ನೆಗೆ, ಇದಕ್ಕೆ ಒಂದು ನಿಯಮವನ್ನು ನಾವು ಮಾಡುತ್ತೇವೆ. ಕನ್ನಡ ವಿಷಯಕ್ಕೆ ಧಕ್ಕೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
READ THIS : ಗೃಹಸಚಿವರ ಒಡೆತನದ ಮೆಡಿಕಲ್ ಕಾಲೇಜಿಗೆ ಬಾಂಬ್ ಬೆದರಿಕೆ!





