ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಒಡೆತನದ ಮೆಡಿಕಲ್ ಕಾಲೇಜಿಗೆ Bomb Threat ಹಾಕಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ. ಬೇಗೂರು ಸಮೀಪ ಇರುವ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಅಪರಿಚಿತ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಬೆದರಿಕೆ ಹಿನ್ನೆಲೆಯಲ್ಲಿ ಕಾಲೇಜು ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭದ್ರತಾ ಕ್ರಮಗಳನ್ನು ಕಠಿಣಗೊಳಿಸಲಾಗಿದೆ.
ಕಾಲೇಜು ಆವರಣದ ಇಂಚಿಂಚೂ ಪರಿಶೀಲನೆ
ಬೆದರಿಕೆ ಮಾಹಿತಿ ದೊರಕುತ್ತಿದ್ದಂತೆ ಪೊಲೀಸರು, ಬಾಂಬ್ ಸ್ಕ್ವಾಡ್ ಹಾಗೂ ಡಾಗ್ ಸ್ಕ್ವಾಡ್ ತಂಡಗಳು ತಕ್ಷಣ ಕಾಲೇಜಿಗೆ ಧಾವಿಸಿ ಶೋಧ ಕಾರ್ಯ ಆರಂಭಿಸಿವೆ. ಕಾಲೇಜಿನ ಪ್ರತಿಯೊಂದು ಕಟ್ಟಡ, ತರಗತಿ ಕೊಠಡಿ, ಪ್ರಯೋಗಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ನಿಖರವಾಗಿ ಪರಿಶೀಲಿಸಲಾಗುತ್ತಿದೆ. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗದಿದ್ದರೂ, ಪೊಲೀಸರು ಯಾವುದೇ ಅಪಾಯವನ್ನು ತೆಗೆದುಕೊಳ್ಳದೆ ಸಂಪೂರ್ಣ ಪರಿಶೀಲನೆ ಮುಂದುವರಿಸಿದ್ದಾರೆ.
ಗೃಹಸಚಿವರ ಒಡೆತನದ ಮೆಡಿಕಲ್ ಕಾಲೇಜಿಗೆ ಬಾಂಬ್ ಬೆದರಿಕೆ
ಈ ಸಿದ್ದಾರ್ಥ ಕಾಲೇಜು ಕರ್ನಾಟಕ ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಒಡೆತನದಲ್ಲಿದೆ. ಇನ್ನು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಎಸ್ಪಿ ಚಂದ್ರಕಾಂತ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
READ THIS : Pavagada|ಅನುದಾನ ದುರುಪಯೋಗ ಆರೋಪ – PDO ಅಮಾನತು

ಇದೇ ಕಾಲೇಜಿನಲ್ಲಿ ನೆನ್ನೆ ಒಂದು ಗಂಭೀರ ಘಟನೆ
ಈ ಬಾಂಬ್ ಬೆದರಿಕೆ ಬಂದಿದ್ದು ಸಾಮಾನ್ಯವಲ್ಲ. ಇದೇ ಕಾಲೇಜಿನಲ್ಲಿ ಇತ್ತೀಚೆಗೆ ನಿನ್ನೆ ಒಂದು ಗಂಭೀರ ಘಟನೆ ನಡೆದಿತ್ತು. ಮೈಕ್ರೋಬಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿನಿಯೋಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಕ್ರೋಶಗೊಂಡು ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣದ ಸಂಬಂಧ ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಇದು ಸುಳ್ಳು ಬೆದರಿಕೆನಾ?
ಬಾಂಬ್ ಬೆದರಿಕೆ ಈ ಹಿಂದಿನ ಘಟನೆಗೆ ಸಂಬಂಧ ಹೊಂದಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದ್ದರೂ, ಈ ಬಗ್ಗೆ ಪೊಲೀಸರು ಇನ್ನೂ ಸ್ಪಷ್ಟ ಮಾಹಿತಿ ನೀಡಿಲ್ಲ.
ಇದು ಸುಳ್ಳು ಬೆದರಿಕೆಯಾಗಿರಬಹುದು ಎಂಬ ಶಂಕೆಯಿದ್ದರೂ, ಭದ್ರತೆ ದೃಷ್ಟಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹಲವು ಶಿಕ್ಷಣ ಸಂಸ್ಥೆಗಳಿಗೆ Bomb Threat
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಹಲವು ಶಿಕ್ಷಣ ಸಂಸ್ಥೆಗಳಿಗೆ Bomb Threats ಗಳು ಬಂದಿದ್ದು, ಅವುಗಳಲ್ಲಿ ಬಹುತೇಕವು ಸುಳ್ಳು ಎಂದು ಪತ್ತೆಯಾಗಿದೆ.
ಆದರೂ ಪ್ರತಿಯೊಂದು ಬೆದರಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುತ್ತಿದ್ದಾರೆ.
MUST WATCH : ಒಂದೇ ಸೂರಿನಡಿ ಸಿಗ್ತಿವೆ HOME APPLIANCES-ಭರ್ಜರಿ DISCOUNT ಜೊತೆಗೆ ಆಕರ್ಷಕ OFFER..!




