
ಯಾವ ಕಾಲಕ್ಕೆ ಏನು ಮಾಡಬೇಕೋ ಅದೇ ಮಾಡಬೇಕು.. ಚೆನ್ನಾಗಿ ಓದಿ, ಒಳ್ಳೆ ಕೆಲಸ ತಗೋಂಡು ಮನೆಯ ಜವಾದಾರಿ ತಗೋಬೇಕು ಅಂತಾ ಹೆತ್ತವರು ಕಷ್ಟ ಪಟ್ಟು ಮಕ್ಕಳನ್ನು ಚೆನ್ನಾಗಿರೋ ಕಾಲೇಜಿಗೆ ಸೇರಿಸ್ತಾರೆ… ಆದ್ರೆ ಕೆಲ ಮಕ್ಕಳೋ ಅಡ್ಡ ದಾರಿ ಹಿಡಿದು ಪ್ರೀತಿ ಪ್ರೇಮ ಅಂತಾ ಸುತ್ತಾಡ್ತಾರೆ,,, ಕೊನೆಗೆ ನಮ್ಮ ಪ್ರೀತಿಗೆ ಮನೆಯವರು ಒಪ್ಪಲ್ಲ ಅಂತಾ ಒಂದು ದಿನ ಓಡಿ ಹೋಗಿ ಮದುವೆ ಆಗ್ತಾರೆ,,, ಇನ್ನು ಕೆಲವರು ಆತ್ಮಹತ್ಯೆ ಹಾದಿಯನ್ನು ಹಿಡಿಯುತ್ತಾರೆ,,, ಕಷ್ಟ ಪಟ್ಟು 18 – 20 ವರ್ಷ ಸಾಕಿ ಸಲುಕಿದ ಮಕ್ಕಳು ಹೀಗೆ ಮಾಡಿದ್ರೆ ಹೆತ್ತವರ ಗೋಳು ಹೇಗಿರುತ್ತೆ… ಈಗ ಅಂತಹದ್ದೇ ಮನಕಲುಕುವ ಘಟನೆಗೆ ಸಾಕ್ಷಿಯಾಗಿರೋದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ..
ಹೀಗೆ ಫೋಟೋದಲ್ಲಿ ಕಾಣಿಸ್ತಾ ಇರೋ ಜೋಡಿ ಹೆಸರು ಸತೀಶ್ ಹಾಗೂ ಶ್ವೇತಾ ಅಂತಾ.. ಇವರಿಬ್ಬರು ಕಳೆದ ಕೆಲ ತಿಂಗಳಿನಿಂದ ನಿನಗೆ ನಾನು- ನನಗೆ ನೀನು ಅಂತಾ ಕೈ ಕೈ ಹಿಡಿದು ಸುತ್ತಾಡಿದ್ರು, ಇಬ್ಬರು ಚೆನ್ನಾಗಿ ಓದಿ, ಕೆಲಸಕ್ಕೆ ಸೇರಿ ಮನೆಯವರನ್ನು ನೋಡಿಕೊಳ್ಳೋ ಜವಬ್ದಾರಿ ಇಬ್ಬರ ಹೆಗಲ ಮೇಲಿತ್ತು. ಆದ್ರೆ ಇವರು ಪ್ರೀತಿ ಪ್ರೇಮ ಅಂತಾ ತಲೆ ಕೆಡಿಸಿಕೊಂಡು, ಇತ್ತ ಪ್ರೀತಿಯನ್ನು ಉಳಿಸಿಕೊಳ್ಳದೇ, ಹೆತ್ತವರ ಹೊಟ್ಟೆ ಉರಿಸುವಂತ ಕೆಲಸ ಮಾಡಿದ್ದಾರೆ. ಹೌದು ಇವರ ಪ್ರೀತಿಗೆ ಜಾತಿ ಅಡ್ಡ ಬಂತು, ಇವರ ಪ್ರೀತಿಯನ್ನು ಮನೆಯಲ್ಲಿ ಒಪ್ಪಲ್ಲ ಅಂತಾ ಬದುಕಿ ಬಾಳಬೇಕಾದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಮೃತ ಸತೀಶ್ ಗೆ ಜಸ್ಟ್ 18 ವರ್ಷ ಅಷ್ಟೇ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶೆಟ್ಟಿಗೆರೆಯ ನಿವಾಸಿಯಾಗಿದ್ರೆ, ಶ್ವೇತಾಗೆ ಕೇವಲ 17 ವರ್ಷ ವಯಸ್ಸು ಮಾತ್ರ ಆಗಿದ್ದು, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಪಣಮಾಕನಹಳ್ಳಿ ಗ್ರಾಮದವಳಾಗಿದ್ದು, ಇಬ್ಬರು ಪರಸ್ಪರ ಪ್ರೀತಿ ಮಾಡ್ತಾ ಇದ್ರು. ಶ್ವೇತಾ ಮಾಲೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡ್ತಾ ಇದ್ದು, ಆದ್ರೆ ಕಾಲೇಜಿಗೆ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಇತ್ತ ಸತೀಶ್ ಇತ್ತೀಚೆಗೆಷ್ಟೇ ಮಾಲೂರಿನಲ್ಲಿ ಐಟಿಐ ಮುಗಿಸಿ ಕೆಲಸಕ್ಕೆ ಹುಡುಕಾಟ ನಡೆಸುತ್ತಿದ್ದ ಎನ್ನಲಾಗಿದೆ. ಸತೀಶ್ ಹಾಗೂ ಶ್ವೇತಾ ಕಳೆದ ಕೆಲ ತಿಂಗಳಿಂದ ಇಬ್ಬರು ಒಬ್ಬರಿಗೊಬ್ಬರು ಬಿಟ್ಟಿರಲಾರಷ್ಟು ಪ್ರೀತಿ ಮಾಡ್ತಾ ಇದ್ರು. ಆದ್ರೆ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡ ಬಂದಿದ್ದು, ಇವರಿಬ್ಬರ ಪ್ರೀತಿಗೆ ಮನೆಯವರ ವಿರೋಧ ಇತ್ತಂತೆ,,, ಹೀಗಾಗಿ ಇಬ್ಬರು ಬೇಸತ್ತು ನಮ್ಮ ಪ್ರೀತಿ ಸಾವಿನಲ್ಲಿ ಆದ್ರು ಒಂದಾಗಲಿ ಅಂತಾ ನಿರ್ಧರಿಸಿ ನಿರ್ಜನ ಪ್ರದೇಶದಲ್ಲಿ ಒಬ್ಬರಿಗೊಬ್ಬರು ತಬ್ಬಿಕೊಂಡೇ ರೈಲಿಗೆ ತಲೆ ಕೊಟ್ಟಿ ಸಾವಿಗೆ ಶರಣಾಗಿದ್ದಾರೆ.
ಇನ್ನು ದುರಂತ ಅಂದ್ರೆ ಮೊನ್ನೆ ತಾನೆ ಸತೀಶ್ ಹುಟ್ಟುಞ ಹಬ್ಬ ಇದ್ದು, ಸ್ನೇಹಿತರೊಂದಿಗೆ ಅದ್ಧೂರಿಯಾಗಿ ಬರ್ತಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದ. ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಿ ಬರುವುದಾಗಿ ತನ್ನ ತಾಯಿ ಬಳಿ ಹೇಳಿ ಹೋದ ಸತೀಶ್, ತಾನು ಪ್ರೀತಿಸಿದ ಯುವತಿಯೊಂದಿಗೆ ಬ್ಯಾಟರಾಯನಹಳ್ಳಿಗೆ ಬಂದು ಇಬ್ಬರು ತಬ್ಬಿಕೊಂಡು ಚಲಿಸುತ್ತಿದ್ದ ರೈಲಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ರೈಲಿಗೆ ಸಿಲುಕಿದ ಇಬ್ಬರು ಅಪ್ರಾಪ್ತ ಪ್ರೇಮಿಗಳ ದೇಹ ಛಿದ್ರ ಛಿದ್ರವಾಗಿತ್ತು, ಮಕ್ಕಳು ಬೆಳೆದು, ಚೆನ್ನಾಗಿ ಓದಿ ಮನೆಗೆ ಆಧಾರ ಆಗ್ತಾರೆ ಅಂತಾ ಅಂದುಕೊಂಡವರು ಶವವಾಗಿ ಬಿದ್ದಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.
ಅದೇನೆ ಆಗಲಿ ಪ್ರೀತಿ ಮಾಡಬಾರದು ಮಾಡಿದರೆ ವಿಷವ ಕುಡಿಯಬಾರದು ಎಂಬ ಹಂಸಲೇಖ ಸಾಲಿನಂತೆ ಪ್ರೀತಿ ಮಾಡಿದ್ರೆ, ಅದನ್ನ ಹೆದರಿಸಿ ನಿಲ್ಲಬೇಕು ಹೀಗೆ ಸಾಯೋದಲ್ಲ.. ಆದ್ರೆ ಇವರಿಬ್ಬರು ಇನ್ನು ಓದೊ ಟೈಂನಲ್ಲಿ ಪ್ರೀತಿ ಪ್ರೇಮ ಅಂತಾ ತಮ್ಮ ಜೀವನವನ್ನು ಕಳೆದುಕೊಂಡಿದ್ದಲ್ಲದೇ, ಮನೆಯನ್ನೇ ಕತ್ತಲಾಗಿಸಿರೋದು ಮಾತ್ರ ದುರಂತ.. ಸದ್ಯ ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. ಅಲ್ದೇ ಅಪ್ರಾಪ್ತ ಪ್ರೇಮಿಗಳ ಆತ್ಮಹತ್ಯೆಗೆ ಕಾರಣ ತನಿಖೆ ಬಳಿಕ ಬಯಲಾಗಲಿದೆ .




