ರಣವೀರ್ ಸಿಂಗ್ ಅಭಿನಯದ Dhurandhar 2 ದಿ ರಿವೆಂಜ್’ ಸಿನಿಮಾ ಬಿಡುಗಡೆಯಕ್ಕೂ ಮುನ್ನವೇ 100 ಕೋಟಿ ರೂ. ಸಂಗ್ರಹಿಸಿದೆ…

ಬಾಲಿವುಡ್ ಸ್ಟಾರ್ Ranveer Singh ಅಭಿನಯದ Dhurandhar 2: The Revenge ಸಿನಿಮಾ ಬಿಡುಗಡೆಯಿಗೂ ಮುನ್ನವೇ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡಿದೆ.
ಮುಂಗಡ ಟಿಕೆಟ್ ಮಾರಾಟ ಮತ್ತು ವಿದೇಶಿ ಪ್ರಿ-ಸೇಲ್ಸ್ ಮೂಲಕ ಚಿತ್ರ ಈಗಾಗಲೇ 100 ಕೋಟಿ ರೂ. ಕ್ಲಬ್ ಸೇರಿದೆ. ಇದರಿಂದ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಮೂಡಿದೆ.
MUST READ : Bengaluru ಕರಗ ಶಕ್ತ್ಯೋತ್ಸವ 2026 – ಮೈಸೂರು ದಸರಾ ಶೈಲಿಯಲ್ಲಿ ಅದ್ಧೂರಿ ಆಚರಣೆ

ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಬಿಡುಗಡೆ
ನಿರ್ದೇಶಕ Aditya Dhar ಅವರ ನಿರ್ದೇಶನದ ಈ ಬಹು ನಿರೀಕ್ಷಿತ ಸ್ಪೈ ಆಕ್ಷನ್ ಚಿತ್ರ ಮಾರ್ಚ್ 19ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಇದಕ್ಕೂ ಒಂದು ದಿನ ಮುಂಚಿತವಾಗಿ ಮಾರ್ಚ್ 18ರಂದು ಪ್ರೀಮಿಯರ್ ಶೋಗಳು ನಡೆಯಲಿವೆ.

ಮುಂಗಡ ಬುಕ್ಕಿಂಗ್ನಲ್ಲಿ ಭರ್ಜರಿ ದಾಖಲೆ
ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ಮುಂಗಡ ಬುಕ್ಕಿಂಗ್ ಕೂಡ ವೇಗವಾಗಿ ನಡೆಯುತ್ತಿದೆ.
- ಪೇಯ್ಡ್ ಪ್ರಿವ್ಯೂಸ್ ಮೂಲಕ – 37.11 ಕೋಟಿ ರೂ.
- ಮೊದಲ ದಿನದ ಮುಂಗಡ ಬುಕ್ಕಿಂಗ್ – 22.70 ಕೋಟಿ ರೂ.
- ದೇಶಾದ್ಯಂತ ಮಾರಾಟವಾದ ಟಿಕೆಟ್ – 6.1 ಲಕ್ಷಕ್ಕಿಂತ ಹೆಚ್ಚು
ಈ ಮೂಲಕ ಸಿನಿಮಾ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆಯುವ ನಿರೀಕ್ಷೆ ಇದೆ.

ವಿದೇಶಗಳಲ್ಲಿ ಭಾರಿ ಪ್ರಿ-ಸೇಲ್ಸ್
ಇನ್ನು ವಿದೇಶಿ ಮಾರುಕಟ್ಟೆಯಲ್ಲಿಯೂ ಚಿತ್ರದ ಬೇಡಿಕೆ ಹೆಚ್ಚಾಗಿದೆ. ಆರಂಭಿಕ ವಾರಾಂತ್ಯಕ್ಕೆ ಸುಮಾರು 60 ಕೋಟಿ ರೂ. ಪ್ರಿ-ಸೇಲ್ಸ್ ಆಗಿರುವುದಾಗಿ ವರದಿಯಾಗಿದೆ.
ಬ್ಲಾಕ್ ಸೀಟ್ ಸೇರಿಸಿ ಒಟ್ಟು ಸಂಗ್ರಹ ಸುಮಾರು 119.81 ಕೋಟಿ ರೂ. ತಲುಪಿದೆ ಎಂದು ವರದಿಗಳು ಸೂಚಿಸುತ್ತಿವೆ.

ಬಹು ಭಾಷೆಗಳಲ್ಲಿ ಬಿಡುಗಡೆ
Dhurandhar 2: The Revenge ಚಿತ್ರವು ದೇಶಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರ ಬಿಡುಗಡೆಯಾಗುವ ಭಾಷೆಗಳು:
- ಹಿಂದಿ
- ಮಲಯಾಳಂ
- ತಮಿಳು
- ತೆಲುಗು
- ಕನ್ನಡ
ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೇಲರ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆದಿದೆ.
MUST WATCH : ತಿಪಟೂರಿನಲ್ಲಿ ಬೋನಿಗೆ ಬಿದ್ದ ಚಿರತೆ – ಸೆರೆ ಸಿಕ್ಕರು ಜನರಿಗೆ ತಪ್ಪದ ಸಂಕಷ್ಟ | TIPTUR NEWS |




