Bengaluru ದಲ್ಲಿ 50 ಸಾವಿರ ರೂಪಾಯಿ ಮಾಮೂಲಿ ಹಣಕ್ಕಾಗಿ ಮೆಕ್ಯಾನಿಕ್ ರಶೀದ್ ಪಾಷಾ ಅವರನ್ನು ಮಕ್ಕಳ ಎದುರಲ್ಲೇ ಕಿಡಿಗೇಡಿಗಳು ಹತ್ಯೆ ಮಾಡಿದ್ದಾರೆ…

Bengaluru ನಗರದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಕೇವಲ 50 ಸಾವಿರ ರೂಪಾಯಿ ಮಾಮೂಲಿ ಹಣಕ್ಕಾಗಿ ಕಿಡಿಗೇಡಿಗಳು ವ್ಯಕ್ತಿಯೊಬ್ಬರನ್ನು ಮಕ್ಕಳ ಎದುರಲ್ಲೇ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ನಗರದಲ್ಲಿ ಭಯ ಮತ್ತು ಆತಂಕವನ್ನು ಉಂಟುಮಾಡಿದೆ.
ಈ ಭೀಕರ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ರಶೀದ್ ಪಾಷಾ (45) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಿಂದ ಮೆಕ್ಯಾನಿಕ್ ಆಗಿದ್ದರು.
ಮೂರು ಮಂದಿ ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
MIUST READ : Bengaluru ಕರಗ ಶಕ್ತ್ಯೋತ್ಸವ 2026 – ಮೈಸೂರು ದಸರಾ ಶೈಲಿಯಲ್ಲಿ ಅದ್ಧೂರಿ ಆಚರಣೆ

50 ಸಾವಿರ ರೂ. ಮಾಮೂಲಿ ಕೇಳಿದ ಕಿಡಿಗೇಡಿಗಳು
ಮಾಹಿತಿಯ ಪ್ರಕಾರ, ರಶೀದ್ ತಮ್ಮ ಅಂಗಡಿಗೆ ಹೊಸ ಮೋಲ್ಡ್ ಅಳವಡಿಸಿದ್ದರು. ಈ ವೇಳೆ ಸ್ಥಳೀಯ ಕೆಲ ಕಿಡಿಗೇಡಿಗಳು ಭಾನುವಾರ ಬೆಳಗ್ಗೆ ಅಂಗಡಿಗೆ ಬಂದು ಐವತ್ತು ಸಾವಿರ ರೂಪಾಯಿ ಮಾಮೂಲಿ ಹಣ ನೀಡುವಂತೆ ಒತ್ತಾಯಿಸಿದ್ದರು.
ಆದರೆ ರಶೀದ್ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದಿದೆ.
ಈ ವಿಚಾರವನ್ನು ಮನಸ್ಸಿಗೆ ಹಾಕಿಕೊಂಡ ಆರೋಪಿಗಳು ರಾತ್ರಿ ಸುಮಾರು 8.30ರ ವೇಳೆಗೆ ಮತ್ತೆ ಮೂವರ ಗುಂಪಾಗಿ ಅಂಗಡಿಗೆ ಬಂದಿದ್ದಾರೆ.
ಅದಾದ ಬಳಿಕ ರಶೀದ್ ಅವರ ಇಬ್ಬರು ಮಕ್ಕಳ ಎದುರಲ್ಲೇ ಬ್ಯಾಟ್ ಮತ್ತು ಬೊಂಬುಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ.

ಸ್ಥಳದಲ್ಲೇ ಮೆಕ್ಯಾನಿಕ್ ಸಾವು
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ರಶೀದ್ ಪಾಷಾ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಈ ಪ್ರಕರಣದ ಮಾಹಿತಿ ತಿಳಿದ ಕೂಡಲೇ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಕೇ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಸ್ತುತ ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
MUST WATCH : ತಿಪಟೂರಿನಲ್ಲಿ ಬೋನಿಗೆ ಬಿದ್ದ ಚಿರತೆ – ಸೆರೆ ಸಿಕ್ಕರು ಜನರಿಗೆ ತಪ್ಪದ ಸಂಕಷ್ಟ | TIPTUR NEWS |




