ರಾಜ್ಯಸಭೆ ಚುನಾವಣೆ ಹಿನ್ನೆಲೆ ಒಡಿಶಾ ಕಾಂಗ್ರೆಸ್ ಶಾಸಕರು ರಾಮನಗರದ ಬಿಡದಿ ರೆಸಾರ್ಟ್ನಲ್ಲಿ ತಂಗಿದ್ದು, ಇದೀಗ Mysuru ಪ್ರವಾಸ ಕೈಗೊಂಡಿದ್ದಾರೆ…

ರಾಜ್ಯಸಭೆ ಚುನಾವಣೆಯ ಹಿನ್ನಲೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿ ರೆಸಾರ್ಟ್ನಲ್ಲಿ ತಂಗಿರುವ ಒಡಿಶಾ ಕಾಂಗ್ರೆಸ್ ಶಾಸಕರು ಇದೀಗ Mysuru ಪ್ರವಾಸ ಕೈಗೊಂಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಈ ಪ್ರವಾಸ ಆಯೋಜಿಸಲಾಗಿದೆ.
15ಕ್ಕೂ ಹೆಚ್ಚು ನಾಯಕರು ಪ್ರವಾಸದಲ್ಲಿ ಭಾಗ
ಮೈಸೂರಿನ ಪ್ರವಾಸಕ್ಕೆ ಸುಮಾರು 8 ಮಂದಿ ಕಾಂಗ್ರೆಸ್ ಶಾಸಕರು, ಜೊತೆಗೆ ಪಿಸಿಸಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಸೇರಿ 15ಕ್ಕೂ ಹೆಚ್ಚು ನಾಯಕರು ತೆರಳಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಅವರು ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲಿದ್ದು, ಇಂದು ಸಂಜೆವರೆಗೂ ಪ್ರವಾಸ ಮುಂದುವರಿಯಲಿದೆ.
MUST READ : Dina Bhavishya : ದಿನ ಭವಿಷ್ಯ 14 ಮಾರ್ಚ್ 2026..

ರಾಜ್ಯಸಭೆ ಚುನಾವಣೆಯ ಹಿನ್ನೆಲೆ
ಮುಂದಿನ ಮಾರ್ಚ್ 16ರಂದು ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ 10 ರಾಜ್ಯಗಳ ಶಾಸಕರು ಮತದಾನ ಮಾಡಲಿದ್ದಾರೆ.
ಇದಲ್ಲದೆ, ಒಡಿಶಾದಲ್ಲಿ ನಾಲ್ಕು ರಾಜ್ಯಸಭಾ ಸದಸ್ಯರನ್ನು ಶಾಸಕರು ಆಯ್ಕೆ ಮಾಡಲಿದ್ದಾರೆ. ಆದರೆ ನಾಲ್ಕನೇ ಸ್ಥಾನಕ್ಕೆ ಯಾವುದೇ ಪಕ್ಷದ ಬಳಿ ಸ್ಪಷ್ಟ ಸಂಖ್ಯಾಬಲ ಇಲ್ಲದಿರುವುದು ರಾಜಕೀಯ ಕುತೂಹಲ ಹೆಚ್ಚಿಸಿದೆ.

ಅಡ್ಡ ಮತದಾನ ತಡೆಯಲು ರೆಸಾರ್ಟ್ ರಾಜಕೀಯ
ಚುನಾವಣೆಯಲ್ಲಿ Cross Voting ತಡೆಯುವ ಉದ್ದೇಶದಿಂದ ಒಡಿಶಾ ಕಾಂಗ್ರೆಸ್ ಶಾಸಕರನ್ನು ರಾಮನಗರದ ಬಿಡದಿಯ ವಂಡರ್ಲಾ ರೆಸಾರ್ಟ್ಗೆ ಕರೆತರಲಾಗಿದೆ.
ಈ ನಡುವೆ ಆಡಳಿತಾರೂಢ ಬಿಜೆಪಿ ‘ಆಪರೇಷನ್ ಕಮಲ’ ಮೂಲಕ ಅಡ್ಡ ಮತದಾನಕ್ಕೆ ಯತ್ನಿಸಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕಾಗಿ ಬಿಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿಯಿಂದ ಖ್ಯಾತ ಮೂತ್ರಪಿಂಡ ತಜ್ಞ ದತ್ತೇಶ್ವರ ಹೋಟಾ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.
ಇದಕ್ಕೆ ವಿರುದ್ಧವಾಗಿ ಪ್ರಖ್ಯಾತ ಹೋಟೆಲ್ ಉದ್ಯಮಿ ಹಾಗೂ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರು ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ.
ದಿಲೀಪ್ ರೇ ಕಣದಲ್ಲಿರುವುದು ಕಾಂಗ್ರೆಸ್ಗೆ ಆತಂಕವನ್ನು ಹೆಚ್ಚಿಸಿದೆ. ಕಾರಣ, 2002ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಡಿ ಪಕ್ಷದ ಸುಮಾರು ಒಂದು ಡಜನ್ ಶಾಸಕರು ಅಡ್ಡ ಮತದಾನ ಮಾಡಿದ್ದರು.
ಈ ಬಾರಿ ದಿಲೀಪ್ ರೇ ಗೆಲ್ಲಲು ಕನಿಷ್ಠ 8 ಮತಗಳ ಅಗತ್ಯವಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಒಡಿಶಾ ರಾಜಕೀಯದಲ್ಲಿ ರಾಜ್ಯಸಭೆ ಚುನಾವಣೆ ಇನ್ನಷ್ಟು ರೋಚಕ ಹಂತ ತಲುಪಿದೆ.
MUST WATCH : “ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್..! GOLD RATE ಕೇಳಿ ಜನ ಫುಲ್ ಖುಷ್”




