ಮತ್ತೆ ಕೇಳಿಬಂತು Anushka Shetty ಮದುವೆ ವಿಷಯ: ಈ ಬಾರಿ ಪ್ರಭಾಸ್ ಹೆಸರಿಲ್ಲ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ಬಣ್ಣದ ಲೋಕದಲ್ಲಿ ಸೂಪರ್ ಸಕ್ಸಸ್ ಕಂಡಿದ್ದಾರೆ. ಅನೇಕ ಸ್ಟಾರ್ ನಟರಿಗೆ ಜೋಡಿಯಾಗಿ ಮಿಂಚಿದ್ದಾರೆ. ಆದರೆ ನಿಜ ಜೀವನದಲ್ಲಿ ಅವರು ಸಿಂಗಲ್ ಆಗಿಯೇ ಉಳಿದುಕೊಂಡಿದ್ದಾರೆ. ಅವರ ಮದುವೆ ಬಗ್ಗೆ ಆಗಾಗ ಗಾಸಿಪ್ ಕೇಳಿಬರುತ್ತಿದೆ.
ಈ ಬಾರಿ ಪ್ರಭಾಸ್ ಹೆಸರಿಲ್ಲ
ಈಗ ಮತ್ತೊಮ್ಮೆ ಅವರ ಮದುವೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಳೆದ ಹಲವು ವರ್ಷಗಳಿಂದ ಅನುಷ್ಕಾ ಶೆಟ್ಟಿ ಅವರ ಹೆಸರು ನಟ ಪ್ರಭಾಸ್ ಜೊತೆ ತಳುಕು ಹಾಕಿಕೊಳ್ಳುತ್ತಲೇ ಇತ್ತು. ಆದರೆ ಈಗ ಬೇರೆ ವರನ ಬಗ್ಗೆ ಗಾಸಿಪ್ ಹಬ್ಬಿದೆ.

ಕನ್ನಡತಿ ಅನುಷ್ಕಾ ಶೆಟ್ಟಿ ಮದುವೆ ಉದ್ಯಮಿಯ ಜೊತೆ
ಮೂಲಗಳ ಪ್ರಕಾರ ಇದೇ ವರ್ಷ ಅನುಷ್ಕಾ ಶೆಟ್ಟಿ ಸಪ್ತಪದಿ ತುಳಿಯಲಿದ್ದಾರಂತೆ. ಅನುಷ್ಕಾ ಕೈ ಹಿಡಿಯಲಿರೋ ಹುಡುಗ ಉದ್ಯಮಿಯಾಗಿದ್ದು, ಅನುಷ್ಕಾ ಶೆಟ್ಟಿ ಕುಟುಂಬಕ್ಕೆ ತುಂಬಾ ಆಪ್ತರು ಎನ್ನಲಾಗ್ತಿದೆ. ಈ ವಿಚಾರ ಅನುಷ್ಕಾ ಅಭಿಮಾನಿಗಳಲ್ಲಿ ಖುಷಿ ತಂದಿದೆಯಾದ್ರೂ, ಪ್ರಭಾಸ್ ಜೊತೆಗಿನ ಮದುವೆ ವಿಚಾರ ಸುಳ್ಳಾಯ್ತಲ್ಲ ಎನ್ನುವ ಬೇಸರವೂ ಅಭಿಮಾನಿಗಳಲ್ಲಿದೆ.
READ THIS : 23ರ ಯುವತಿ ಜೊತೆ Live-In Relationship : ಕೊಡಗಿನಿಂದ ಕರೆತಂದು ಕೊಂದೇ ಬಿಟ್ನಾ ಪಾಪಿ?

2026 ರಲ್ಲಿ ಸಪ್ತಪದಿ ತುಳಿಯುವ ಸಾಧ್ಯತೆ
ಮೂಲಗಳ ಪ್ರಕಾರ, Anushka Shetty ಮತ್ತು ಈ ಉದ್ಯಮಿಯ ವಿವಾಹದ ಬಗ್ಗೆ ಕುಟುಂಬದ ಹಿರಿಯರ ಮಟ್ಟದಲ್ಲಿ ಈಗಾಗಲೇ ಮಾತುಕತೆಗಳು ಆರಂಭವಾಗಿವೆ ಎನ್ನಲಾಗಿದೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ, 2026ರಲ್ಲೇ ಅನುಷ್ಕಾ ಶೆಟ್ಟಿ ಅವರು ಸಪ್ತಪದಿ ತುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

MUST WATCH : ಕೊರಟಗೆರೆಯಲ್ಲಿ ಜನಸಂಪರ್ಕ ಸಭೆ – ಅಧಿಕಾರಿಗಳಿಗೆ DC ಖಡಕ್ WARNING..!




