Bengaluru : ವೈಯರ್ನಿಂದ ಕತ್ತು ಬಿಗಿದು ಲಿವ್ ಇನ್ ಗೆಳತಿಯ ಹತ್ಯೆ.

Bengaluru ನಗರದ ವರ್ತೂರು ಪ್ರದೇಶದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಯುವತಿಯನ್ನು ವೈಯರ್ನಿಂದ ಕತ್ತು ಬಿಗಿದು ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ಕೊಡಗು ಮೂಲದ 23 ವರ್ಷದ ರಂಜಿತಾ ಕೊಲೆಯಾದ ಯುವತಿ ಎಂದು ಗುರುತಿಸಲಾಗಿದೆ.
READ THIS : ಸಿಲಿಂಡರ್ ವ್ಯತ್ಯಯ ಬೆನ್ನಲ್ಲೆ ಅಡುಗೆ ಎಣ್ಣೆ ಅಂಗಡಿಗಳೂ ಬಂದ್!

ಕೊಲೆಯಲ್ಲಿ ಅಂತ್ಯ ಕಂಡ ಸಂಬಂಧ
ಆರೋಪಿ ಅಯ್ಯಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಯ್ಯಪ್ಪ ಮತ್ತು ರಂಜಿತಾ ಕೆಲ ವರ್ಷಗಳಿಂದ ಲಿವ್-ಇನ್ ರಿಲೇಶನ್ಶಿಪ್ನಲ್ಲಿದ್ದರು. ಅಯ್ಯಪ್ಪನಿಗೆ ಈ ಮೊದಲೇ ಮದುವೆಯಾಗಿತ್ತು. ಆದರೆ ಮದುವೆಯಾಗಿರುವ ವಿಷಯ ಯುವತಿಗೆ ತಿಳಿದಿರಲಿಲ್ಲ. ಇದೀಗ ಈ ವಿಚಾರ ತಿಳಿದು ಇಬ್ಬರ ಮಧ್ಯೆ ಗಲಾಟೆ ಶುರುವಾಗಿತ್ತು. ಗಲಾಟೆ ತಾರಕಕ್ಕೇರಿ ಆರೋಪಿ ವೈಯರ್ನಿಂದ ಯುವತಿಯ ಕತ್ತು ಬಿಗಿದು ಕೊಲೆ ಮಾಡಿದ್ದಾನೆ.

ಆರೋಪಿ ಬಂಧನ
ಸದ್ಯ ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
MUST WATCH : ಸಿದ್ದು ಪರ ಶಾಸಕ SURESH GOWDA ಬ್ಯಾಟಿಂಗ್ – ಕೈ ನಾಯಕರಿಗೆ ಹೆಂಗೆ ಚಾಟಿ ಬೀಸಿದ್ರು ನೋಡಿ




