
ತುಮಕೂರು ನಗರ ಸ್ಮಾರ್ಟ್ ಸಿಟಿ ಆಗಿ ಏನೋ ಅಭಿವೃದ್ದಿ ಹೊಂದುತ್ತಿದೆ. ಆದ್ರೆ ಅದ್ಯಾಕೋ ಅಧಿಕಾರಿಗಳ ನಿರ್ಲಕ್ಷ್ಯವೋ ಏನೋ..ಸ್ಮಾರ್ಟ್ ಸಿಟಿ ತುಮಕೂರಲ್ಲಿ ಸಮಸ್ಯೆಗಳ ಸಂಖ್ಯೆ ಕೊನೆಯಾಗ್ತಾ ಇಲ್ಲ. ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಡಿಯಲ್ಲಿ ನಗರದಲ್ಲಿರುವ ಪಾರ್ಕ್ ಗಳ ಅಭಿವೃದ್ಧಿಗೆ ಮುಂದಾಗಿದ್ದವು. ಆದ್ರೆ ಪಾಲಿಕೆಯಿಂದ ನಿರ್ಮಾಣ ಮಾಡಿದ್ದ ಕೆಲವು ಪಾರ್ಕ್ಗಳು ಸರಿಯಾದ ನಿರ್ವಹಣೆ ಇಲ್ಲದೆ, ಸಾರ್ವಜನಿಕರ ಉಪಯೋಗಕ್ಕೆ ಬಾರದೆ, ವಿಷಜಂತುಗಳ ವಾಸಸ್ಥಾನವಾಗಿ ಮಾರ್ಪಟ್ಟು, ಅಲ್ಲಿ ವಾಸಿಸುವ ಜನರು ಭಯದಿಂದಲೇ ಬದುಕುವಾಂತಾಗಿದೆ. ಅತ್ತ ಪಾರ್ಕ್ ಗಳ ಅಭಿವೃದ್ಧಿಗೆ ಖರ್ಚು ಮಾಡಿದ ಹಣ ಇದೀಗ ಪೋಲಾಗಿದ್ದು, ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ, ಮೆಳೆಕೋಟೆಯಲ್ಲಿರುವ ಕಲ್ಪತರು ಬಡಾವಣೆಯಲ್ಲಿ ಸುಮಾರು 2 ಪಾರ್ಕ್ಗಳಿದ್ದು, ಹೇಮಾವತಿ ಬಡಾವಣೆಯಲ್ಲಿ ಒಂದು ಪಾರ್ಕ್ ಇದೆ. ಆದ್ರೆ ಈ ಮೂರು ಪಾರ್ಕ್ ಗಳ ಸ್ಥಿತಿ ಒಂದೊಂದು ಒಂದು ತರನಾಗಿದೆ.
ಮೆಳೆಕೋಟೆಯಲ್ಲಿರುವ ಮೂರು ಪಾರ್ಕ್ ಗಳಲ್ಲಿ ಒಂದು ಪಾರ್ಕಿನ ಕಥೆ ಕೇಳಿದ್ರೆ ನೀವು ಶಾಕಾಗೋದು ಗ್ಯಾರೆಂಟಿ. ಯಾಕೇ ಅಂತೀರಾ ಈ ಸ್ಟೋರಿ ನೋವಿ. ಎಸ್. ಮೆಳೆಕೋಟೆಯ 11ನೇ ವಾರ್ಡಿನ ಕಲ್ಪತರು ಬಡಾವಣೆಯಲ್ಲಿ ನಿರ್ಮಿಸಿರುವ ಪಾರ್ಕ್ಗಳು ಪಾಳು ಬಿದ್ದಿದ್ದು, ಗಿಡಗೆಂಟೆಗಳು ಬೆಳೆದು ಪಾಳು ಬಿದ್ದು ಕೊಂಪೆಯಂತಾಗಿವೆ. ಇಲ್ಲಿ ಇದೇ ಇರುವ ಒಂದು ಪಾರ್ಕ್ ನ ಪಕ್ಕದಲ್ಲಿಯೇ ವಾಸವಾಗಿರುವ ಒಂದು ಕುಟುಂಬದ ಜನರು ತಮ್ಮ ಮನೆಯಿಂದ ಪಾರ್ಕ್ ಒಳಗೆ ಬರಲು ಜಾಗವನ್ನು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪಾರ್ಕ್ ನ ಗೇಟ್ ಕಿತ್ತು ಹೋಗಿದ್ದರೆ. ಅದನ್ನು ತಮ್ಮ ಮನೆಯ ಬಳಿಯೇ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಆ ಪಾರ್ಕ್ ತಮ್ಮದೆ ಅನ್ನೋ ರೀತಿಯಲ್ಲಿ ಬಾಳೆಗಿಡ, ವಿವಿಧ ತರಕಾರಿ ಗಿಡಗಳು ಹಾಗೇ ಕೂರಲು ಕುರ್ಚಿ ಹಾಕಿಕೊಂಡು, ಚಿಕ್ಕದೊಂದು ಗೂಡನ್ನು ಕೂಡ ಕಟ್ಟಿಕೊಂಡಿದ್ದಾರೆ. ತಮ್ಮ ಮನೆಯಿಂದ ಸುಗಮವಾಗಿ ಇಳಿಯಲು ಮೆಟ್ಟಿಲುಗಳನ್ನು ಕೂಡ ಕಟ್ಟಿಸಿಕೊಂಡಿದ್ದಾರೆ. ಪಾಲಿಕೆಯ ಅಧಿಕಾರಿಗಳೇ ಎಲ್ಲಿದ್ದೀರಿ ಇಂತಹ ಘಟನೆ ನಿಮ್ಮ ಕಣ್ಣಿಗೆ ಬಿದ್ದಿದ್ದಿಯೋ ಇಲ್ಲ. ಬಿದ್ದಿದ್ದಿರು ಜಾಣ ಕುರುಡುತನ ತೋರಿಸುತ್ತಿದ್ದೀರೋ… ಮೊದಲು ಈ ಪಾರ್ಕ್ ನತ್ತ ಮುಖಾಮಾಡಿ, ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಬಿಡಿಸಿಕೊಂಡು ಆ ಪಾರ್ಕ್ನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಅವಕಾಶ ಕಲ್ಪಸಿಕೊಡಿ.
ಅತ್ತ ಹೇಮಾವತಿ ಬಡಾವಣೆಯಲ್ಲಿ ಒಂದು ಪಾರ್ಕ್ ಇದ್ದು, ಇದರ ಸ್ಥಿತಿಯೂ ಕೂಡ ಗಬ್ಬೆದೆ. ಇನ್ನು ಪಾರ್ಕ್ ತುಂಬಾ ಅಸ್ವಚ್ಛತೆ ಇರುವುದರಿಂದ ಹಾಗೂ ಗಿಡಗಳು ಬೆಳೆದುಕೊಂಡಿವೆ. ಈ ಪಾರ್ಕ್ ನ ಮುಂಭಾಗದಲ್ಲಿ ಸ್ಥಳೀಯರು ಓಡಾಡುವುದಕ್ಕೂ ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರೊಳಗೆ ವಿಷ ಜಂತುಗಳು ಸೇರಿರಬಹುದು ಅಂತ ಜನ ಪಾರ್ಕ್ ಕಡೆಗೆ ಹೋಗೋದಕ್ಕೆ ಭಯಪಡುತ್ತಿದ್ದಾರಂತೆ. ಅಲ್ಧೆ ಸುತ್ತ ಮುತ್ತ ಇರುವ ಮನೆಗಳ ಹತ್ತಿರ ಪ್ರತಿನಿತ್ಯವೂ ಹಾವುಗಳು ಕಾಣಿಸಿಕೊಂಡಿದ್ದು, ಕತ್ತಲಾದರೆ ಹೊರಬರಲು ಮಕ್ಕಳು ಮರಿ ಭಯಪಡುತ್ತಿದ್ದಾರೆ. ಇನ್ನು ಈ ಮೆಳೆಕೋಟೆಯಲ್ಲಿಯೇ ಪಾರ್ಕ್ ಗಳ ಸುತ್ತ ಮುತ್ತ, ಕೆಲವು ಮೀಟರ್ ಅಂತರದಲ್ಲಿಯೇ ಹಲವು ಶಾಲೆಗಳು ಇವೆ. ಈ ಶಾಲಾ ಮಕ್ಕಳು ಓಡಾಡುವ ವೇಳೆ ಏನಾದ್ರೂ ತೊಂದರೆ ಆದ್ರೆ. ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.
ಇನ್ನಾದ್ರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಪಾರ್ಕ್ ಗಳ ನಿರ್ವಹಣೆ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಇವತ್ತು ಪಾರ್ಕ್ ಒತ್ತುವರಿ ಮಾಡಿಕೊಂಡು ತೋಟ ಮಾಡಿಕೊಂಡಿರುವವರು, ಮುಂದೊಂದು ದಿನ ಈ ಜಾಗ ನಮ್ಮದೆ ಎಂದು ಹೇಳುವುದರಲ್ಲಿ ಅನುಮಾನವೇ ಇಲ್ಲ.




