ಬೆಂಗಳೂರಿನ Banashankari ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಪ್ರಸಾದ ವ್ಯವಸ್ಥೆ ಸ್ಥಗಿತಗೊಳ್ಳುವ ಸಾಧ್ಯತೆ…

ಇರಾನ್ ಯುದ್ಧದ ಪರಿಣಾಮ ಇದೀಗ ದೇವಸ್ಥಾನಗಳ ಮೇಲೂ ಬೀಳಲು ಆರಂಭವಾಗಿದೆ. LPG Cylinder ಕೊರತೆಯಿಂದಾಗಿ ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ಪ್ರಸಾದ ಸಿದ್ಧಪಡಿಸುವಲ್ಲಿ ತೊಂದರೆ ಎದುರಾಗಿದೆ.
ಪ್ರತಿದಿನ ಸಾವಿರಾರು ಭಕ್ತರಿಗೆ ಪ್ರಸಾದ ನೀಡುವ ಬನಶಂಕರಿ ದೇವಸ್ಥಾನದಲ್ಲಿ ಗ್ಯಾಸ್ ಕೊರತೆ ಉಂಟಾಗಿದೆ. ಯುದ್ಧದ ಹಿನ್ನೆಲೆ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳು ಸಿಗದೇ ಇರುವುದರಿಂದ ದೇವಸ್ಥಾನ ಆಡಳಿತವು ಸಂಕಷ್ಟಕ್ಕೆ ಸಿಲುಕಿದೆ.
ದೇವಸ್ಥಾನ ಮೂಲಗಳ ಪ್ರಕಾರ, ಪ್ರಸಾದ ತಯಾರಿಗಾಗಿ ಪ್ರತಿದಿನ ಒಂದುರಿಂದ ಎರಡು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳು ಅಗತ್ಯವಿರುತ್ತವೆ. ಆದರೆ ಪ್ರಸ್ತುತ ದೇವಸ್ಥಾನದ ಬಳಿ ಕೇವಲ ನಾಲ್ಕು ಸಿಲಿಂಡರ್ಗಳು ಮಾತ್ರ ಉಳಿದಿವೆ.
MUST READ : Dina Bhavishya : ದಿನ ಭವಿಷ್ಯ 11 ಮಾರ್ಚ್ 2026..

ಪ್ರತಿದಿನ ಸಾವಿರಾರು ಭಕ್ತರಿಗೆ ಪ್ರಸಾದ
ಸಾಮಾನ್ಯ ದಿನಗಳಲ್ಲಿ ಸುಮಾರು 3 ಸಾವಿರದಿಂದ 4 ಸಾವಿರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ. ಆದರೆ ಮಂಗಳವಾರ ಮತ್ತು ಶುಕ್ರವಾರ ಭಕ್ತರ ಸಂಖ್ಯೆ ಹೆಚ್ಚಾಗಿ 4 ರಿಂದ 5 ಸಾವಿರದವರೆಗೆ ತಲುಪುತ್ತದೆ.
ಬೆಳಿಗ್ಗೆ ಭಕ್ತರಿಗೆ ಪೊಂಗಲ್, ಪುಳಿಯೊಗರೆ ಮತ್ತು ರೈಸ್ ಬಾತ್ ಪ್ರಸಾದವಾಗಿ ನೀಡಲಾಗುತ್ತದೆ. ಮಧ್ಯಾಹ್ನ ಅನ್ನ–ಸಾಂಬಾರ್ ವಿತರಣೆ ಮಾಡಲಾಗುತ್ತದೆ. ಸಂಜೆ ಸಮಯದಲ್ಲಿಯೂ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ.

ಶುಕ್ರವಾರದಿಂದ ಪ್ರಸಾದ ವಿತರಣೆ ನಿಲ್ಲುವ ಸಾಧ್ಯತೆ
ದೇವಸ್ಥಾನ ಆಡಳಿತದ ಮಾಹಿತಿ ಪ್ರಕಾರ, ಪ್ರಸ್ತುತ ಇರುವ ಗ್ಯಾಸ್ ಸಿಲಿಂಡರ್ಗಳಿಂದ ಇಂದು ಮತ್ತು ನಾಳೆ ಸಂಜೆವರೆಗೆ ಮಾತ್ರ ಪ್ರಸಾದ ತಯಾರಿ ಸಾಧ್ಯ.
ಇದಾದ ಬಳಿಕ ಹೊಸ ಸಿಲಿಂಡರ್ಗಳು ಸಿಗದಿದ್ದರೆ ಶುಕ್ರವಾರದಿಂದ ಭಕ್ತರಿಗೆ ಪ್ರಸಾದ ವಿತರಣೆ ತಾತ್ಕಾಲಿಕವಾಗಿ ನಿಲ್ಲಿಸುವ ಪರಿಸ್ಥಿತಿ ಎದುರಾಗಬಹುದು ಎಂದು ದೇವಸ್ಥಾನ ತಿಳಿಸಿದೆ.
ಬನಶಂಕರಿ ಅಮ್ಮನವರ ಪ್ರಸಾದಕ್ಕೆ ಸಾವಿರಾರು ಭಕ್ತರು ಪ್ರತಿದಿನ ದೇವಸ್ಥಾನಕ್ಕೆ ಬರುತ್ತಾರೆ. ಆದ್ದರಿಂದ ಗ್ಯಾಸ್ ಕೊರತೆಯಿಂದ ಪ್ರಸಾದ ವಿತರಣೆ ನಿಲ್ಲುವ ಸಾಧ್ಯತೆ ಭಕ್ತರಲ್ಲಿ ಆತಂಕವನ್ನುಂಟು ಮಾಡಿದೆ.
MUST WATCH : ತುಮಕೂರಿನಲ್ಲಿ ಹಾಡಹಗಲೇ ಜನರ ಮುಂದೆಯೇ ಚಾಕು ಇರಿತ- ಹಳೆ ದ್ವೇಷದಿಂದಲೇ ಕೊ* ಶಂಕೆ? | TUMAKURU NEWS |




