Tumakuru : ಆಕಸ್ಮಿಕ ಬೆಂಕಿಗೆ ಕಾರ್ಮಿಕನ ಮನೆ ಸುಟ್ಟು ಭಸ್ಮ.

Tumakuru ಮಹಾನಗರ ಪಾಲಿಕೆಯಲ್ಲಿ ಹಲವು ವರ್ಷಗಳಿಂದ ಪೌರಕಾರ್ಮಿಕನಾಗಿ ಕಾರ್ಯನಿರ್ವಹಿಸ್ತಾ ಇರೋ ಅಯ್ಯಪ್ಪ ಎಂಬುವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಗೆಗೆ ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ದಾರುಣ ಘಟನೆ ನಗರದ ನಜರಾಬಾದಿನ ಎರಡನೇ ಕ್ರಾಸ್ನಲ್ಲಿ ನಡೆದಿದೆ.
ಹರಸಾಹಸ ಪಟ್ಟಯ ಬೆಂಕಿ ನಂದಿಸುವಲ್ಲಿ ಯಶಸ್ವಿ
ತುಮಕೂರು ನಗರದ ಬನಶಂಕರಿಯ ಹಿಂಭಾಗದ ನಜರಾಬಾದ್ನ ಎರಡನೇ ಕ್ರಾಸ್ನಲ್ಲಿ ವಾಸವಿರುವ ಅಯ್ಯಪ್ಪ ಎಂಬುವರ ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದಿನಸಿ ಪದಾರ್ಥಗಳು ಬೆಂಕಿಗೆ ಆಹುತಿಯಾಗಿದೆ.
READ THIS : ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಯುವತಿ ಸಾವು
ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಹರಸಾಹಸ ಪಟ್ಟಯ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ರು. ಆದ್ರೆ ಬೆಂಕಿ ದುರಂತದಲ್ಲಿ ಮನೆಯಲ್ಲಿದ್ದ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಇತ್ತ ಅವಘಡ ಸಂಭವಿಸಿದಾಗ ಮನೆಯಲ್ಲಿ ಯಾರು ಇಲ್ಲದ ಪರಿಣಾಮ, ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.

ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮ
ಸುಮಾರು 20 ವರ್ಷಗಳಿಂದ ಈ ಮನೆಯಲ್ಲಿ ವಾಸವಿದ್ದೇವೆ. ಆದ್ರೆ ಏಕಾಏಕಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಷ್ಟು ವರ್ಷದಿಂದ ದುಡಿದು ಸಂಗ್ರಹಿಸಿಟ್ಟಿದ್ದ ಸುಮಾರು 30 ಸಾವಿರ ರೂಪಾಯಿ ಹಣವೂ ಬೆಂಕಿಯಲ್ಲಿ ಸುಟ್ಟು ಹೋಗಿದೆ. ಅಲ್ದೇ ಮನೆಯಲ್ಲಿದ್ದ ಎಲ್ಲಾ ಸಾಮಾನುಗಳು ನಾಶವಾಗಿದ್ದು, ಹಾಕಿಕೊಳ್ಳಲು ಬಟ್ಟೆಯೂ ಇಲ್ಲದ ಪರಿಸ್ಥಿತಿ ಉಂಟಾಗಿದೆ ಎಂದು ಪೌರಕಾರ್ಮಿಕ ಅಯ್ಯಪ್ಪ ಕಣ್ಣೀರಿಟ್ಟರು. ಕೂಡಲೇ ಸರ್ಕಾರ ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ನೆರವು ನೀಡಬೇಕೆಂದು ಮನವಿ ಮಾಡಿದರು.
ಬಡ ಕಾರ್ಮಿಕನ ಬದುಕು ಮೂರಾಬಟ್ಟೆ
ಇನ್ನು ವಿಷಯ ತಿಳಿದ ತಕ್ಷಣ ಶಾಸಕ ಜ್ಯೋತಿ ಗಣೇಶ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದ್ರು. ಬೆಂಕಿ ಅವಘಡದಿಂದ ಬಡ ಕಾರ್ಮಿಕನ ಬದುಕು ಮೂರಾಬಟ್ಟೆಯಾಗಿದ್ದು, ತುಮಕೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಶೀಘ್ರವಾಗಿ ಸ್ಪಂದಿಸಿ ಅಗತ್ಯ ನೆರವು ನೀಡಬೇಕಿದೆ.

MUST WATCH : ಕಲ್ಲಂಗಡಿ ಸಾಗಿಸ್ತಿದ್ದ ಕ್ಯಾಂಟರ್ ಪಲ್ಟಿ ಕಲ್ಲಂಗಡಿಗೆ ಮುಗಿಬಿದ್ದ ಜನರು




