T20 World Cup Final ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಸಂಜೆ 7ಕ್ಕೆ ಪಂದ್ಯ. ಭಾರತ ಮೂರನೇ ಕಿರೀಟದ ಕನಸು ಕಂಡರೆ, ನ್ಯೂಜಿಲೆಂಡ್ ಚೊಚ್ಚಲ ಟ್ರೋಫಿಗೆ ಕಾದಿದೆ…

T20 World Cup Final ಪಂದ್ಯಕ್ಕೆ ಕೌಂಟ್ಡೌನ್ ಆರಂಭವಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ಭಾರತ ಮೂರನೇ ಬಾರಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಲು ತವಕದಲ್ಲಿದೆ.
ಇದೇ ವೇಳೆ ಟೀಂ ಇಂಡಿಯಾ ಗೆಲುವಿಗಾಗಿ ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳು ಪೂಜೆ ಹಾಗೂ ಪ್ರಾರ್ಥನೆಗಳನ್ನು ಮಾಡುತ್ತಿದ್ದಾರೆ.

17 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಆಗಿದ್ದ ಭಾರತ
ಟಿ20 ವಿಶ್ವಕಪ್ ಮೊದಲ ಟೂರ್ನಿಯಲ್ಲೇ 2007ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿತ್ತು. ನಂತರ ಹಲವು ವರ್ಷಗಳ ಕಾಲ ಭಾರತಕ್ಕೆ ಮತ್ತೆ ಕಿರೀಟ ಸಿಕ್ಕಿರಲಿಲ್ಲ.
ಆದರೆ 2024ರಲ್ಲಿ 17 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಆಗಿ ಭಾರತ ಎರಡನೇ ಬಾರಿ ಟ್ರೋಫಿಯನ್ನು ಗೆದ್ದಿತ್ತು. ಇದೀಗ ಮತ್ತೊಮ್ಮೆ ಫೈನಲ್ ತಲುಪಿರುವ ಟೀಂ ಇಂಡಿಯಾ ಮೂರನೇ ಕಿರೀಟದತ್ತ ಕಣ್ಣಿಟ್ಟಿದೆ.

ನ್ಯೂಜಿಲೆಂಡ್ಗೆ ಚೊಚ್ಚಲ ಕಪ್ ಕನಸು
ಇನ್ನೊಂದೆಡೆ, ನ್ಯೂಜಿಲೆಂಡ್ ತಂಡ ಹಾಲಿ ಚಾಂಪಿಯನ್ ಭಾರತವನ್ನು ಸೋಲಿಸಿ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಕನಸಿನಲ್ಲಿ ಇದೆ.
ವಿಶೇಷವೆಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮೂರು ಬಾರಿ ಮುಖಾಮುಖಿಯಾಗಿದ್ದು, ಎಲ್ಲಾ ಪಂದ್ಯಗಳಲ್ಲೂ ಕಿವೀಸ್ ತಂಡವೇ ಗೆದ್ದಿದೆ.

ಅಹಮದಾಬಾದ್ನಲ್ಲಿ ನಡೆಯುವ ಫೈನಲ್ ಪಂದ್ಯ
10ನೇ ಆವೃತ್ತಿಯ ಟಿ20 ವಿಶ್ವಕಪ್ ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯ ಇಂದು ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಕ್ರಿಕೆಟ್ ಲೋಕದ ಗಮನ ಈಗ ಈ ಮಹತ್ವದ ಪಂದ್ಯಕ್ಕೆ ಕೇಂದ್ರೀಕೃತವಾಗಿದೆ.

ಟಿ20 ವಿಶ್ವಕಪ್ನಲ್ಲಿ ಭಾರತದ ಪಯಣ
ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಸಾಧನೆ ಹೀಗಿದೆ:
- 2007 – ಎಂಎಸ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್
- 2009 – ಸೂಪರ್ 8 ಹಂತದಲ್ಲೇ ಹೊರಗುಳಿಯಿತು
- 2010 – ಸೂಪರ್ 8 ಹಂತದಲ್ಲೇ ಹೊರಗುಳಿಯಿತು
- 2012 – ಸೂಪರ್ 8 ಹಂತದಲ್ಲೇ ಹೊರಗುಳಿಯಿತು
- 2014 – ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಸೋತು ರನ್ನರ್-ಅಪ್
- 2016 – ಸೆಮಿಫೈನಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು
- 2021 – ಸೂಪರ್ 12 ಹಂತದಲ್ಲೇ ಹೊರಗುಳಿಯಿತು
- 2022 – ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು
ಮತ್ತೆ ಇತಿಹಾಸ ನಿರ್ಮಿಸುವತ್ತ ಟೀಂ ಇಂಡಿಯಾ
ಈಗ ಮತ್ತೊಮ್ಮೆ ಟಿ20 ವಿಶ್ವಕಪ್ ಫೈನಲ್ ತಲುಪಿರುವ ಭಾರತ ತಂಡ ಮೂರನೇ ಕಿರೀಟ ಗೆದ್ದು ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಆದರೆ ಬಲಿಷ್ಠ ನ್ಯೂಜಿಲೆಂಡ್ ಎದುರಾಳಿಯಾಗಿರುವುದರಿಂದ ಫೈನಲ್ ಪಂದ್ಯ ರೋಚಕವಾಗಲಿದೆ.
MUST WATCH : ನಿಮ್ಮ ಮನೆ ಸುರಕ್ಷಿತವಾಗಿ ಇರ್ಬೇಕಾ..?- ದೀರ್ಘಕಾಲಿಕ ಬಾಳಿಕೆಗೆ SUNVIK TMT , BARS & BRICKS ಬಳಸಿ




