Gadag ಜಿಲ್ಲೆಯ ಕಣಗಿನಾಳ ರಸ್ತೆಯ ಬಳಿ ಅಕ್ರಮ ಗಣಿಗಾರಿಕೆಯಿಂದ ಉಂಟಾದ ಹೊಂಡದಲ್ಲಿ ಸ್ನಾನಕ್ಕೆ ಇಳಿದ ನರ್ಸಿಂಗ್ ವಿದ್ಯಾರ್ಥಿ ಆದಿತ್ಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ…

Gadag ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ದುರ್ಘಟನೆ ಸಂಭವಿಸಿದ್ದು, ಹೊಂಡದ ನೀರಿನಲ್ಲಿ ಮುಳುಗಿ ನರ್ಸಿಂಗ್ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ಗದಗ ಜಿಲ್ಲೆಯ ಕಣಗಿನಾಳ ರಸ್ತೆಯ ಬಳಿ ನಡೆದಿದೆ.
ಸ್ನಾನಕ್ಕೆ ಇಳಿದ ವೇಳೆ ನೀರಿನಲ್ಲಿ ಮುಳುಗಿ ಸಾವು
ಮಾಹಿತಿ ಪ್ರಕಾರ, ಬೆಳಗಾವಿ ಮೂಲದ ಆದಿತ್ಯ ಎಂಬ ನರ್ಸಿಂಗ್ ವಿದ್ಯಾರ್ಥಿ ಸ್ನಾನಕ್ಕೆಂದು ಹೊಂಡದಲ್ಲಿ ಇಳಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನಿನ್ನೆ ಹೋಳಿ ಹಬ್ಬದ ಸಂಭ್ರಮದ ಬಳಿಕ ಸ್ನಾನ ಮಾಡಲು ಅವರು ಆರುರಿಂದ ಏಳು ಮಂದಿ ಸ್ನೇಹಿತರೊಂದಿಗೆ ಈ ಸ್ಥಳಕ್ಕೆ ತೆರಳಿದ್ದರು.
MUST READ : ವಿದ್ಯುತ್ ಶಾಕ್ ತಗುಲಿ ಲೈನ್ ಮ್ಯಾನ್ ಸಾವು – BESCOM ನಿರ್ಲಕ್ಷ್ಯ ಆರೋಪ

30 ರಿಂದ 40 ಅಡಿ ಆಳದ ಗಣಿಗಾರಿಕೆ ಹೊಂಡ
ಸ್ಥಳೀಯರ ಪ್ರಕಾರ, ಆ ಪ್ರದೇಶದಲ್ಲಿ ಅಕ್ರಮವಾಗಿ 30 ರಿಂದ 40 ಅಡಿ ಆಳದ ಹೊಂಡಗಳನ್ನು ತೆಗೆದು ಗಣಿಗಾರಿಕೆ ನಡೆಸಲಾಗುತ್ತಿತ್ತು. ಇದೇ ಹೊಂಡದಲ್ಲಿ ನೀರು ತುಂಬಿಕೊಂಡಿದ್ದರಿಂದ ವಿದ್ಯಾರ್ಥಿ ಸ್ನಾನಕ್ಕೆ ಇಳಿದ ವೇಳೆ ಅಪಘಾತ ಸಂಭವಿಸಿದೆ.
ಮೃತ ಆದಿತ್ಯ ಅವರು ಬಿಎಸ್ಸಿ ನರ್ಸಿಂಗ್ ಅಂತಿಮ ವರ್ಷವನ್ನು ಪೂರ್ಣಗೊಳಿಸಿದ್ದರು ಎಂದು ತಿಳಿದುಬಂದಿದೆ.

ಈ ಘಟನೆಯ ಬಳಿಕ ಸ್ಥಳೀಯರು ಗಣಿ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮ ಗಣಿಗಾರಿಕೆಯನ್ನು ನಿಯಂತ್ರಿಸದ ಗಣಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಇದಕ್ಕೆ ಹೊಣೆಗಾರರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
MUST WATCH : ನಿಮ್ಮ ಮನೆ ಸುರಕ್ಷಿತವಾಗಿ ಇರ್ಬೇಕಾ..?- ದೀರ್ಘಕಾಲಿಕ ಬಾಳಿಕೆಗೆ SUNVIK TMT , BARS & BRICKS ಬಳಸಿ

