Women’s Day : ಸಮಾಜದ ಶಕ್ತಿಯಾಗಿರುವ ಮಹಿಳೆಯರ ಮಹತ್ವವೇನು?

Women’s Day : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಚರಣೆಯನ್ನು ಆಚರಿಸಲಾಗುತ್ತಿದೆ. ಮಹಿಳೆಯರ ಪ್ರತಿನಿತ್ಯದ ಕಠಿಣ ಪರಿಶ್ರಮ, ತ್ಯಾಗ ಎಲ್ಲವನ್ನು ತನ್ನ ಜೀವನದಲ್ಲಿ ನಿಭಾಯಿಸುತ್ತಾ ಹೋಗ್ತಾಳೆ.
ಸಾಕಷ್ಟು ಕೆಲಸಗಳನ್ನು ನಿಭಾಯಿಸುತ್ತಾಳೆ
ಮಹಿಳೆಯರ ಸಾಧನೆಗಳನ್ನು ಗೌರವಿಸಲು, ಮನೆ ಮತ್ತು ಸಮಾಜಕ್ಕೆ ಅಕೆ ನೀಡಿರುಕ ಕೊಡುಗೆಗೆಳನ್ನು ಸ್ಮರಿಸಲು, ಒಬ್ಬ ತಾಯಿಯಾಗಿ, ಮಗಳಾಗಿ, ಹೆಂಡತಿಯಾಗಿ ಸಾಕಷ್ಟು ಕೆಲಸಗಳನ್ನು ನಿಭಾಯಿಸುತ್ತಾಳೆ. ಈ ಎಲ್ಲ ವಿಷಯವಾಗಿ ಆಕೆಯನ್ನು ಗೌರವಿಸಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಚಾರಣೆಯನ್ನು ಆಚರಿಸಲಾಗುತ್ತದೆ.

READ THIS : Ramanagara ದಲ್ಲಿ ಭೀಕರ ರಸ್ತೆ ಅಪಘಾತ ಮೂವರು ಸಾವು..!!
ಮಹಿಳೆಯರ ಮಹತ್ವ
ಕುಟುಂಬದ ಬೆನ್ನಲುಬು
ಮಹಿಳೆಯರು ಕುಟುಂಬದ ಮುಖ್ಯ ಆಧಾರವಾಗಿದ್ದಾರೆ. ತನ್ನ ಕುಟುಂಬದಲ್ಲಿ, ಹೆಂಡತಿ,ತಾಯಿ, ಮಗಳು ಎಂಬ ವಿವಿಧ ಪಾತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಳೆ.
ಶಿಕ್ಷಣ ಮತ್ತು ಸಂಸ್ಕಾರ
ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡುತ್ತಾರೆ. ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಒಂದು ಕುಟುಂಬವೇ ಶಿಕ್ಷಣ ಪಡೆಯುತ್ತದೆ ಎಂಬ ಮಾತು ಎಲ್ಲರನ್ನು ಒಗ್ಗೂಡಿಸುತ್ತದೆ.
ಸಮಾಜದ ಅಭಿವೃದ್ದಿ
ಮಹಿಳೆಯರು ವೈದೈಕೀಯ, ಶಿಕ್ಷಣ, ವಿಜ್ಞಾನ, ರಾಜಕೀಯ, ಕ್ರೀಡೆ ಸೇರಿದಂತೆ ನಾನ ಸಾಧನೆಯನ್ನು ಮಾಡಿ ಸಮಾಜದ ಅಭಿವೃದ್ದಿಗೆ ಸಹಕರಿಸುತ್ತಿದ್ದಾರೆ.
ಆರ್ಥಿಕ ಅಭಿವೃದ್ದಿ
ಇಂದಿನ ಕಾಲದಲ್ಲಿ ಮಹಿಳೆಯರು ಉದ್ಯೋಗ,ವ್ಯವಹಾರ, ಮತ್ತು ವಿವಿಧ ವೃತ್ತಿಗಳ ಮೂಲಕ ದೇಶದ ಆರ್ಥಿಕತೆಯ ಬೆಳವಣಿಗೆಗೆ ಸಹಾಯ ಮಾಡುತ್ತಿದ್ದಾರೆ.
ಪ್ರೇರಣೆ ಮತ್ತು ಶಕ್ತಿ
ಮಹಿಳೆಯರು ಸಹನಶೀಲತೆ, ಧೈರ್ಯ ಮತ್ತು ಶಕ್ತಿಯ ಪ್ರತಿಕಾರವಾಗಿದ್ದಾರೆ. ಅವರು ಸಮಾಜಕ್ಕೆ ಪ್ರೇರಣೆಯಾಗಿ ನಿಲ್ಲುತ್ತಾರೆ.

ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಪುರುಷರಿಗೆ ಸರಿ ಸಮಾನಳಾಗಿ ಬೆಳೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಸಾಕಷ್ಟು ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿರುವ ಎಲ್ಲಾ ಮಹಿಳೆಯರಿಗೆ, ಮಹಿಳಾ ದಿನಾಚರಣೆಯ ಶುಭಾಷಯಗಳು.
MUST WATCH : ಗಂಡ ಸತ್ತು ಹಸೆಮಣೆ ಏರಿದ್ದ ಪತ್ನಿಯ ಕಥೆ- ಐನಾತಿಯ ಸ್ಟೋರಿ ಕೇಳಿ ಪೊಲೀಸರೇ ಶಾಕ್




