
KALABURAGI: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ನಿಂದ ಭೀಮಾ ನದಿಗೆ 3.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರ ಪರಿಣಾಮವಾಗಿ ನದಿಯ ನೀರು ಹಾಗರಗುಂಡಗಿ ಗ್ರಾಮದ ಕೃಷಿ ಭೂಮಿಗೆ ನುಗ್ಗಿ, ಹತ್ತಿ, ತೊಗರಿ ಸೇರಿದಂತೆ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ.
ಇನ್ನು ಈ ಪ್ರವಾಹದ ಹಿಂದೆ ಮಹಾರಾಷ್ಟ್ರದಲ್ಲಿ ಮುಂದುವರೆದ ಧಾರಾಕಾರ ಮಳೆ ಕಾರಣವಾಗಿದೆ. ಪರಿಣಾಮವಾಗಿ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಭೀಮಾ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬಂದಿದೆ. ಉಜ್ಜನಿ ಜಲಾಶಯದಿಂದ 50,000 ಕ್ಯೂಸೆಕ್ ನೀರು, ಸಿನಾ ಜಲಾಶಯದಿಂದ: 2.70 ಲಕ್ಷ ಕ್ಯೂಸೆಕ್ ನೀರು, ಭೋರಿ ಹಳ್ಳದಿಂದ: 3.20 ಲಕ್ಷ ಕ್ಯೂಸೆಕ್ ಬಂದಿದೆ.

ಈ ಪ್ರವಾಹದಿಂದ ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಯ ನದಿ ಪಾತ್ರದ ಗ್ರಾಮಗಳಿಗೆ ಆತಂಕ ಮನೆಮಾಡಿದೆ. ಅಲ್ದೇ ನದಿ ನೀರು ಜಮೀನಿಗೆ ನುಗ್ಗಿದ ಪರಿಣಾಮ ಬಹುಮಟ್ಟಿಗೆ ಬೆಳೆ ನಾಶವಾಗಿದ್ದು, ರೈತರು ತೀವ್ರ ಆರ್ಥಿಕ ನಷ್ಟದ ಅಂಚಿನಲ್ಲಿ ನಿಂತಿದ್ದಾರೆ. ಇದೇ ವೇಳೆ ಜಿಲ್ಲಾಡಳಿತ, ನದಿಯ ದಡ ಪ್ರದೇಶದ ಜನರಿಗೆ ನದಿ ಹತ್ತಿರಕ್ಕೆ ಹೋಗಬೇಡಿ ಎಂದು ಎಚ್ಚರಿಕೆ ನೀಡಿದೆ.




