
ಸ್ಮಾರ್ಟ್ ಸಿಟಿ ಅಂತ ಕರೆಸಿಕೊಳ್ಳುವ ತುಮಕೂರು ಇದೀಗ ಗಾರ್ಬೇಜ್ ಸಿಟಿಯಾಗಿ ಮಾರ್ಪಾಡಾಗುತ್ತಿದೆ. ನಗರದಾದ್ಯಂತ ಎಲ್ಲೆಂದರಲ್ಲಿ ಕಸದ ರಾಶಿ ರಾಶಿ ಬೀಳುತ್ತಿದೆ. ತುಮಕೂರಿನ ಕಸದ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ನಗರದ 11 ನೇ ವಾರ್ಡಿನ ರಾಜೇವ್ಗಾಂಧಿ ನಗರದಲ್ಲಿ ರಾಶಿ ರಾಶಿಯಾಗಿ ಕಸ ಬಿದ್ದಿದ್ದು, ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದ್ರು ಕ್ಯಾರೆ ಎನ್ನುತ್ತಿಲ್ಲವಂತೆ. ಅಲ್ದೇ ದಿನದಿಂದ ದಿನಕ್ಕೆ ಈ ಪ್ರದೇಶವು ನಾಯಿ–ಹಂದಿಗಳ ವಾಸಸ್ಥಾನವಾಗಿ ಮಾರ್ಪಡುತ್ತಿದೆ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿನ ರಸ್ತೆಗಳು “ಸ್ಮಾರ್ಟ್ ಸಿಟಿ” ಬದಲಿಗೆ “ಕಸದ ಸಿಟಿ” ಆಗುತ್ತಿದೆ. ಹೀಗಾಗಿ ಸಾರ್ವಜನಿಕರು ಪಾಲಿಕೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ರಾಜೇವ್ ಗಾಂಧಿನಗರದ ನಿವಾಸಿಗಳು ಕಸದ ಸಮಸ್ಯೆಯ ಕುರಿತು ಹಲವು ಬಾರಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದ್ರು ಕೂಡ ಯಾರೂ ತಲೆಕೆಡಿಸಿಕೊಳ್ತಿಲ್ಲವಂತೆ, ಅಲ್ದೇ ಈ ಎರಿಯಾ ಬಿಟ್ಟು ಬೇರೆ ಕಡೆ ಮಾತ್ರ ಕಸ ಎತ್ತುತ್ತಿದ್ದು, ದಿನನಿತ್ಯ ಕಸ ಹಾಕಿಸಿಕೊಳ್ಳಲು ವಾಹನ ಸಹ ಈ ಕಡೆ ಸುಳಿಯೋದಿಲ್ಲ ಅಂತ ಶಾಸಕರು, ಹಾಗೂ ಪಾಲಿಕೆ ವಿರುದ್ದ ಅಕ್ರೋಶ ಹೊರಹಾಕ್ತಿದ್ದಾರೆ. ಇನ್ನು ಕಸದ ರಾಶಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದ್ರಿಂದ ಮಕ್ಕಳಿಂದ ಹಿಡಿದು ವೃದ್ಧರ ತನಕ ಆರೋಗ್ಯದ ಭೀತಿ ಎದುರಾಗಿದೆ. ಅವರಿಗೆ ಬೇಕಾದಾಗ ಬಂದು ಕಸ ಎತ್ತಿಕೊಂಡು ಹೋಗುತ್ತಾರೆ ಅಂತ ಸ್ಥಳೀಯರು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಈ ಏರಿಯಾದಲ್ಲಿ ಕಸದ ಸಮಸ್ಯೆ ಜೊತೆಗೆ ಸಂಜೆಯಾದ್ರೂ ಸಾಕು ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಯಲ್ಲಿ ಮಕ್ಕಳ ಮೇಲೆ ಏಕಾಏಕಿ ಎರುಗುತ್ತಿವೆ. ಇದ್ರಿಂದ ರಸ್ತೆಯಲ್ಲಿ ಓಡಾಡಲು ಭಯವಂತಾಗುತ್ತೇ, ಅಲ್ದೇ. ಸಂಜೆ 6 ಗಂಟೆಯೊಳಗೆ ನಾವು ಮನೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದ್ಕಡೆ ಅಧಿಕಾರಿಗಳು ಅವರಿಗೆ ಬೇಕಾದ ಕಡೆ ಮಾತ್ರ ಸ್ವಚ್ಚತಾ ಕಾರ್ಯ ಮಾಡ್ತಾರೆ. ಆದ್ರೆ ಈ ಬಗ್ಗೆ ಯಾವ ಅಧಿಕಾರಿಗಳು ತಲೆ ಕಡೆಸಿಕೊಳ್ತಿಲ್ಲ. ಇಲ್ಲಿ ಇರೋ ಅಂತಹವರು ಎಲ್ಲಾ ಕೂಲಿ ಮಾಡಿಕೊಂಡು ಬದುಕುತ್ತಿರುವವರು. ನಮ್ಮ ಕಷ್ಟ ಯಾರಿಗೆ ಹೆಳೋಣ, ದುಡಿಯೋ ದುಡ್ಡೆಲ್ಲ ಆಸ್ಪತ್ರೆಗೆ ಈಡಬೇಕಾದ ಪರಿಸ್ತಿತಿ ನಿರ್ಮಾಣವಾಗಿದೆ ಎನ್ನುತ್ತಿದ್ದಾರೆ.ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು, ಕಸದ ಸಮಸ್ಯೆಗೆ ಮುಕ್ತಿ ನೀಡುತ್ತಾ ಕಾದುನೋಡಬೇಕಿದೆ




