ನಟಿ Ashika Ranganath ಅವರ ಹೊಸ ಗ್ಲಾಮ್ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ…

ಕನ್ನಡ ಚಿತ್ರರಂಗದ ಜನಪ್ರಿಯ ನಟಿ Ashika Ranganath ಅವರು ತಮ್ಮ ಹೊಸ ಫೋಟೋಶೂಟ್ ಮೂಲಕ ಮತ್ತೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸಿನಿಮಾಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಆಶಿಕಾ, ತಮ್ಮ ಅಭಿಮಾನಿಗಳಿಗಾಗಿ ಸಮಯ ಕಾಲಕ್ಕೆ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರ ಹೊಸ ಗ್ಲಾಮ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ರೆಟ್ರೋ ಥೀಮ್ನಲ್ಲಿ ಯುವರಾಣಿಯ ಲುಕ್
ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳಲ್ಲಿ ಆಶಿಕಾ ರಂಗನಾಥ್ ಅವರು ಯುವರಾಣಿಯಂತೆ ಕಂಗೊಳಿಸುವ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶೇಷವಾಗಿ ಕೈಯಲ್ಲಿ ಹಿಡಿದಿರುವ ಗುಲಾಬಿ ಹೂವು ಮತ್ತು ಅವರ ಕ್ಲಾಸಿಕ್ ಸ್ಟೈಲ್ ಅಭಿಮಾನಿಗಳ ಗಮನ ಸೆಳೆದಿದೆ. ಈ ಫೋಟೋಶೂಟ್ನಲ್ಲಿ ಅವರ ಗ್ಲಾಮ್ ಲುಕ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
READ THIS : Karnataka Budget : ಜಲಸಂಪನ್ಮೂಲ ಇಲಾಖೆ 2026-27 ಯೋಜನೆಗಳು..!!

ಫೋಟೋ ವೈರಲ್
ಆಶಿಕಾ ರಂಗನಾಥ್ ಅವರು ಈ ಫೋಟೋಗಳನ್ನು ಹಂಚಿಕೊಂಡ ಕೆಲವೇ ಸಮಯದಲ್ಲಿ ಲಕ್ಷಾಂತರ ವೀವ್ಸ್ ಮತ್ತು ಲೈಕ್ಸ್ ಪಡೆದುಕೊಂಡಿವೆ.
ಅವರ ಅಭಿಮಾನಿಗಳು ಕಾಮೆಂಟ್ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, “ಯುವರಾಣಿ ಲುಕ್ ಸೂಪರ್”, “ಕ್ಲಾಸಿಕ್ ಬ್ಯೂಟಿ” ಎಂದು ಪ್ರಶಂಸಿಸುತ್ತಿದ್ದಾರೆ.

ಇತ್ತೀಚಿನ ಕಾರ್ಯಕ್ರಮಗಳಲ್ಲಿ ಆಶಿಕಾ ಹಾಜರಿ
ಇತ್ತೀಚೆಗೆ ಆಶಿಕಾ ರಂಗನಾಥ್ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ನಟಿ ರಶ್ಮಿಕಾ ಮಂದಣ್ಣ ಅವರ ಅರಿಶಿಣ ಶಾಸ್ತ್ರ ಮತ್ತು ಆರತಕ್ಷತೆ ಕಾರ್ಯಕ್ರಮ , ನಟ ದುಶ್ಯಂತ್ ಅವರ ವಿವಾಹ ಸಮಾರಂಭ ಈ ಕಾರ್ಯಕ್ರಮಗಳಲ್ಲಿ ಅವರ ಹಾಜರಿ ಅಭಿಮಾನಿಗಳ ಗಮನ ಸೆಳೆದಿತ್ತು.

ಇದರ ನಡುವೆ ಆಶಿಕಾ ರಂಗನಾಥ್ ಅವರು ಹಲವು ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ಬ್ಯುಸಿಯಾಗಿದ್ದಾರೆ.
ಕನ್ನಡದ ಜೊತೆಗೆ ಇತರ ಭಾಷೆಗಳ ಸಿನಿಮಾಗಳಲ್ಲಿಯೂ ಅವರಿಗೆ ಉತ್ತಮ ಬೇಡಿಕೆ ಇದೆ. ಹೀಗಾಗಿ ಪರಭಾಷೆಗಳಲ್ಲಿ ಕೂಡ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
MUST WATCH : ನಾಳೆ ದಾಖಲೆಯ ಬಜೆಟ್ ಮಂಡಿಸಲಿರೋ ಸಿದ್ದು- ರಾಜ್ಯದ ಜನರಿಗೆ ಸಿದ್ದು ಏನ್ ಗಿಫ್ಟ್ ಕೊಡ್ತಾರೆ..!




