Liquor Sellers Protest : ಸರ್ಕಾರದ ವಿರುದ್ಧ ಸಿಡಿದೆದ್ದ ಮದ್ಯ ಮಾರಾಟಗಾರರು; ನಾಳೆ ಪ್ರತಿಭಟನೆಗೆ ಕರೆ! ಬಾರ್ ಓಪನ್ ಆಗಲ್ವಾ?

Liquor Sellers Protest : ಮದ್ಯ ಮಾರಾಟಗಾರರು ಸರ್ಕಾರದ ವಿರುದ್ದ ಸಿಡಿದೆದ್ದಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ನಾಳೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಕರ್ನಾಟಕ ಚಿಲ್ಲರೆ ಮದ್ಯ ಮಾರಟಗಾರರು ಸರ್ಕಾರ ಮತ್ತು ಅಬಕಾರಿ ಇಲಾಖೆಯ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೆಡರೇಷನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ಪ್ರತಿಭಟನೆಗೆ ಕರೆ
ತಮ್ಮ ವಿವಿಧ ಬೇಡಿಕೆಗಳನ್ನ ಈಡೇರಿಸದಿದ್ದರೆ ಹೋರಾಟಕ್ಕೆ ಇಳಿಯುವುದಗಿ ಘೋಷಿಸಿದ್ದಾರೆ. ಇನ್ನು ಮಾರ್ಚ್ 5, 2026 ರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೆ ಕರೆ ನೀಡಿದೆ. ಇದರಿಂದ ನಾಳೆ ಮದ್ಯ ಪ್ರಿಯರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಇದನ್ನು ಓದಿ : BPL ಫಲಾನುಭವಿಗಳಿಗೆ ಶಾಕಿಂಗ್ ನ್ಯೂಸ್! ಲಕ್ಷ-ಲಕ್ಷ ಕಾರ್ಡ್ಗಳು ರದ್ದು!
ಪ್ರತಿಭಟನೆಗೆ ಮುಖ್ಯ ಕಾರಣ ಏನು?
ನಾಳೆಯ ಈ ಪ್ರತಿಭಟನೆಯ ಮುಖ್ಯ ಕಾರಣ ಅಬಕಾರಿ ಇಲಾಖೆಯ ಕೆಲವು ನಿರ್ಧಾರಗಳು ಮತ್ತು ಕ್ರಮಗಳು. ಸಂಘಟನೆಯ ಪ್ರಕಾರ ಇಲಾಖೆಯು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ 579 ಮದ್ಯ ಮಾರಟ ಲೈಸೆನ್ಸ್ಗಳನ್ನ ಹರಾಜು ಮಾಡಲು ಶಿಫಾರಸು ಮಾಡಿದೆ. ಇವುಗಳಲ್ಲಿ ಚಿಲ್ಲರೆ ಮದ್ಯದಂಗಡಿಗಳು ಮತ್ತು ಬಾರ್ ಮತ್ತು ರೆಸ್ಟೋರೆಂಟ್ಗಳು ಸೇರಿವೆ. ಈ ಲೈಸೆನ್ಸ್ಗಳಿಗೆ ದೀರ್ಘಕಾಲದಿಂದ ನವೀಕರಣವಾಗದೆ ಅಥವಾ ಅಂಗಡಿಗಳು ತೆರೆಯದೇ ಇದ್ದರೂ, ಅವುಗಳನ್ನು ಹೊಸದಾಗಿ ಹರಾಜು ಹಾಕಿ ಹಣ ಸಂಗ್ರಹಿಸುವ ಯೋಜನೆ ಇದೆ ಎಂದು ಆರೋಪಿಸಲಾಗಿದೆ.
579 ಲೈಸೆನ್ಸ್ ಗಳು ಈಗಿರುವ ಮಾಲಿಕರದ್ದೇ!
ಮದ್ಯ ಮಾರಾಟಗಾರರರ ಪ್ರಕಾರ, ಈ 579 ಲೈಸೆನ್ಸ್ ಗಳು ಇರುವ ಮಾಲೀಕರಿಗೆ ಸೇರಿವೆ. ಅವುಗಳನ್ನು ಹರಾಜು ಮಾಡುವುದರಿಂದ ಹಳೆಯ ಮಾಲೀಕರಿಗೆ ದೊಡ್ಡ ನಷ್ಟವಾಗುತ್ತದೆ. ಇದಲ್ಲದೆ, ಇಲಾಖೆಯು ಭ್ರಷ್ಟಾಚಾರ, ಲಂಚ, ಪೊಲೀಸ್ ಹಸ್ತಕ್ಷೇಪ ಮತ್ತು ಹೆಚ್ಚಿನ ಫೀಸ್ ವಿರುದ್ದ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆಯ ಮುಖ್ಯ ಬೇಡಿಕೆಗಳು
- 579 ಸನ್ನದುಗಳ ಹರಾಜು ತಕ್ಷಣ ನಿಲ್ಲಿಸಿ
- ಅಬಕಾರಿ ಇಲಾಖೆಯ ಅಧಿಕಾರಗಳ ವಿರುದ್ದ ಕ್ರಮ ಕೈಗೊಳ್ಳಿ
- ಚಿಲ್ಲರೆ ಮದ್ಯ ಮಾರಾಟಗಾರರ ಬೇಡಿಕರಗಳ ಈಡೇರಿಸಿ
- ಸರ್ಕಾರ ಸುಳ್ಳು ಮಾಹಿತಿ ನೀಡಿ ಹರಾಜು ಮಾಡುವುದನ್ನು ನಿಲ್ಲಿಸಿ
ಇದನ್ನು ನೋಡಿ : PAVAGADA ಪಟ್ಟಣದಲ್ಲೂ TRAFFIC ಸಮಸ್ಯೆ – ರಸ್ತೆಬದಿ ಪಾರ್ಕಿಂಗ್ ಗೆ ಜನ ಹೈರಾಣು




