The Kerala Story 2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಕುಸಿತ ಕಂಡಿದೆ. 30 ಕೋಟಿ ಬಜೆಟ್ನ ಚಿತ್ರ ಈವರೆಗೆ ಕೇವಲ 14 ಕೋಟಿ ಕಲೆಕ್ಷನ್. ದಿನವಾರು ಕಮಾಯಿ ಮತ್ತು ಸಂಪೂರ್ಣ ವಿವರ ಇಲ್ಲಿದೆ…

2023ರಲ್ಲಿ ಬಿಡುಗಡೆಯಾಗಿ ಭಾರೀ ಚರ್ಚೆ ಹುಟ್ಟುಹಾಕಿದ್ದ The Kerala Story ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಆದರೆ ಅದರ ಸೀಕ್ವೆಲ್ ಆಗಿ ಬಂದ The Kerala Story 2 ನಿರೀಕ್ಷಿತ ಮಟ್ಟದ ಕಲೆಕ್ಷನ್ ಗಳಿಸಲು ವಿಫಲವಾಗಿದೆ. ದಿನದಿಂದ ದಿನಕ್ಕೆ ಬಾಕ್ಸ್ ಆಫೀಸ್ ನಂಬರ್ ಕುಸಿಯುತ್ತಿರುವುದು ಗಮನಾರ್ಹ.
ವಿವಾದಗಳ ನಡುವೆಯೇ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ 2’ ಫೆಬ್ರವರಿ 27ರಂದು ಕೆಲವೇ ಕಡೆಗಳಲ್ಲಿ ಮಾತ್ರ ರಿಲೀಸ್ ಆಯಿತು.
- Day 1: ₹75 ಲಕ್ಷ
- Day 2 (ಫೆ.28): ₹4.65 ಕೋಟಿ
- Day 3 (ಮಾರ್ಚ್ 1): ₹4.75 ಕೋಟಿ
ಆರಂಭಿಕ ದಿನಗಳಲ್ಲಿ ಸ್ವಲ್ಪ ಚೇತರಿಕೆ ಕಂಡಿದ್ದರೂ, ನಂತರ ಕಲೆಕ್ಷನ್ ಕುಸಿತ ಆರಂಭವಾಯಿತು.
ಇದನ್ನು ಓದಿ : ಗ್ರಹಣ ಕಾಲದಲ್ಲೂ ತೆರೆದಿರುವ Srikalahasti ದೇವಾಲಯದ ವಿಶೇಷತೆ..!

ನಾಲ್ಕನೇ ದಿನದಿಂದ ಕುಸಿತ
- Day 4 (ಮಾರ್ಚ್ 2): ₹2.75 ಕೋಟಿ
- Day 5 (ಮಾರ್ಚ್ 3): ಮತ್ತಷ್ಟು ಕುಸಿತದ ಸೂಚನೆ
ದೇಶಾದ್ಯಂತ ಬಿಡುಗಡೆ ಆದರೂ, ಮುಂಬೈ ಹೊರತುಪಡಿಸಿ ಇತರೆ ನಗರಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ ಎಂಬ ವರದಿಗಳು ತಿಳಿಸುತ್ತಿವೆ. ವಿಶೇಷವಾಗಿ ಕೇರಳದಲ್ಲಿ ಚಿತ್ರಕ್ಕೆ ಪ್ರೇಕ್ಷಕರಿಂದ ನಿರೀಕ್ಷಿತ ಬೆಂಬಲ ದೊರೆತಿಲ್ಲ.
ವರದಿಗಳ ಪ್ರಕಾರ, ಸಿನಿಮಾದ ಒಟ್ಟು ಬಜೆಟ್ ಸುಮಾರು ₹30 ಕೋಟಿ.
ಈವರೆಗೆ ಅಂದಾಜು ₹14 ಕೋಟಿ ಮಾತ್ರ ಕಲೆಕ್ಷನ್ ಆಗಿದೆ. ಇದೇ ಟ್ರೆಂಡ್ ಮುಂದುವರಿದರೆ ಬಂಡವಾಳ ವಾಪಸ್ ಬರಲಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಚಿತ್ರತಂಡ ಮತ್ತು ಕಥಾವಸ್ತು
ಈ ಚಿತ್ರವನ್ನು Kamyakya Narayan Singh ನಿರ್ದೇಶನ ಮಾಡಿದ್ದು, Vipul Amrutlal Shah ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಉಲ್ಕಾ ಗುಪ್ತಾ, ಐಶ್ವರ್ಯಾ ಊಜಾ, ಅದಿತಿ ಭಾಟಿಯಾ ಮತ್ತು ಅರ್ಜುನ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಲವ್ ಜಿಹಾದ್ ಹಿನ್ನೆಲೆಯ ಕಥೆಯನ್ನು ಈ ಸೀಕ್ವೆಲ್ನಲ್ಲಿ ಮುಂದುವರಿಸಲಾಗಿದೆ.
ಇದನ್ನು ನೋಡಿ : ಕೆರೆಯಲ್ಲಿ ತೇಲಿದ ವೃದ್ಧೆಯ ಶ* – ಬೆಳ್ಳಂ ಬೆಳಗ್ಗೆ ಬೆಚ್ಚಿಬಿದ್ದ ಜನರು




