Virat Kohli ಎಂದೆಂದಿಗೂ ಆರ್ಸಿಬಿಯ ಐಕಾನ್ ಆಗಿರುತ್ತಾರೆ; ಇದು ನಿವೃತ್ತಿಯ ಸುಳಿವೇ?

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸಿದ್ದಾರೆ, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸುಮಾರು ಎರಡು ದಶಕಗಳ ಅಚಲ ಸೇವೆಯ ನಂತರ ಅವರನ್ನು ಫ್ರಾಂಚೈಸಿಯ ಶಾಶ್ವತ ಐಕಾನ್ ಮತ್ತು ನಾಯಕ ಎಂದು ಕರೆದಿದ್ದಾರೆ.
ಇದು ನಿವೃತ್ತಿಯ ಸುಳಿವೇ?
ಅವರ ಈ ಹೇಳಿಕೆ ಐಪಿಎಲ್ 2026ರ ಆರಂಭಕ್ಕೂ ಮುನ್ನ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಈಗಾಗಲೇ ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿ ಹೇಳಿರುವ ವಿರಾಟ್ ಇದೀಗ ಐಪಿಎಲ್ಗೂನಿವೃತ್ತಿ ಹೇಳಲಿದ್ದಾರಾ ಎಂಬ ಆತಂಕ ಅಭಿಮಾನಿಗಳಿಗೆ ಕಾಡಲಾರಂಭಿಸಿದೆ.
ಇದನ್ನು ಓದಿ : Chikkaballapura| ಬೆಳ್ಳಂ ಬೆಳಗ್ಗೆ ಕೆರೆಯಲ್ಲಿ ತೇಲಿದ ವೃದ್ಧೆಯ ಶವ

ಕೊಹ್ಲಿಯೇ ಆರ್ಸಿಬಿ ಖರೀದಿ ಮಾಡಲಿದ್ದಾರೆ
ಆರ್ಸಿಬಿ ಮಾರಾಟ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮಾರ್ಚ್ ಮಧ್ಯಭಾಗಕ್ಕೆ ಹೊಸ ಮಾಲೀಕರು ಖಚಿತವಾಗಲಿದ್ದಾರೆ. ಡಿಯಾಜಿಯೋ ಕಂಪನಿಯು ಕೊನೇ ಹಂತದ ಬಿಡ್ಡಿಂಗ್ನಲ್ಲಿ ಪಾಲ್ಗೊಳ್ಳುವವರನ್ನು ಈಗಾಗಲೇ ಅಂತಿಮಗೊಳಿಸಿದೆ. ಇದರಿಂದ, Virat Kohli ಫ್ರಾಂಚೈಸಿಯನ್ನು ಖರೀದಿಸಬಹುದು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
Virat Kohli ಎಂದೆಂದಿಗೂ ಆರ್ಸಿಬಿಯ ಐಕಾನ್
ಬೊಬಾಟ್ ಅವರು ಪಾಡ್ಕ್ಯಾಸ್ಟ್ನಲ್ಲಿ, , “ವಿರಾಟ್ ಕೊಹ್ಲಿ ಶಾಶ್ವತವಾಗಿ ಆರ್ಸಿಬಿಯ ಐಕಾನ್ ಮತ್ತು ನಾಯಕ ನಾಗಿದ್ದಾರೆ. ಅವರ ಟ್ರ್ಯಾಕ್ ರೆಕಾರ್ಡ್ ಅದ್ಭುತವಾಗಿದೆ. ಕಳೆದ 18 ವರ್ಷಗಳಿಂದ ಅವರು ಒಂದೇ ಶರ್ಟ್ ಧರಿಸಿ ತಂಡವನ್ನು ಪ್ರತಿನಿಧಿಸಿದ್ದಾರೆ” ಎಂದು ಹೇಳಿದರು. ಅವರು ತಂಡದ ಭವಿಷ್ಯದ ನಿರ್ಧಾರ ಬಗ್ಗೆ ಸಾಕಷ್ಟು ಆಳವಾಗಿ ಯೋಚಿಸಿರುವುದಾಗಿ ಮತ್ತು ಕೊಹ್ಲಿಯ ಶ್ರದ್ಧೆ ಮತ್ತು ನಿಷ್ಠೆಯನ್ನು ಮೆಚ್ಚಿದ್ದಾರೆ.

ಐಪಿಎಲ್ ಆರಂಭವಾದಗಿನಿಂದ ಸತತ 18 ಋತುಗಳಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸಿರುವ ಕೊಹ್ಲಿ, ಆ ಫ್ರಾಂಚೈಸಿಗೆ ನಿಷ್ಠಾವಂತ ಆಟಗಾರನಾಗಿದ್ದಾರೆ.
ಇದನ್ನು ನೋಡಿ : ಶೌಚಾಲಯದಲ್ಲಿ ನವಜಾತ ಶಿಶು ಶವ ಮಗು ಜನನ ಮರೆಮಾಚಲು ಕೃತ್ಯ




