Chikkaballapura : ಕೆರೆಯಲ್ಲಿ ವೃದ್ದೆಯ ಶವ ಪತ್ತೆ – ಮೃತದೇಹ ಕಂಡು ಬೆಚ್ಚಿಬಿದ್ದ ಸ್ಥಳೀಯರು.

Chikkaballapura : ವೃದ್ಧೆಯೊಬ್ಬರು ಕಳೆದ ಐದು ದಿನಗಳಿಂದ ಕಾಣೆಯಾಗಿದ್ದು, ಇದೀಗ ಕಲ್ಲಪಲ್ಲಿಯ ದೊಡ್ಡಕೆರೆಯಲ್ಲಿ ವೃದ್ಧೆಯ ಶವ ಪತ್ತೆಯಾಗಿದ್ದು ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ.
ಅನುಮಾನ್ಪದ ಸಾವು
ಮೃತ ಮಹಿಳೆಯನ್ನು ಕಲ್ಲಪಲ್ಲಿ ಗ್ರಾಮದ ನಿವಾಸಿ ಮುನಿಲಕ್ಷ್ಮಮ್ಮ ಎಂದು ಗುರುತಿಸಲಾಗಿದೆ. ಕಲ್ಲಪಲ್ಲಿ ಗ್ರಾಮದ ಮುನ್ನಿ ಲಕ್ಷ್ಮಮ್ಮ ಎಂಬ ವೃದ್ಧೆಯ ಅನುಮಾನ್ಪದವಾಗಿ ಸಾವನ್ನಪ್ಪಿದ್ದು, ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.

ಇದನ್ನು ಓದಿ : ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ ಭರ್ಜರಿ ರಜೆ, ನಿಮ್ಮ ಕೆಲಸಗಳಿದ್ದರೆ ಮೊದಲೇ ಪ್ಲಾನ್ ಮಾಡಿ
ಕೆರೆಯಲ್ಲಿ ತೇಲಿದ ವೃದ್ಧೆಯ ಶವ
ಕಲ್ಲಪಲ್ಲಿ ಗ್ರಾಮದ ಮುನಿಲಕ್ಷ್ಮಮ್ಮ ಮನೆಯಿಂದ ನಾಪತ್ತೆಯಾಗಿದ್ದು. ಕಳೆದ ಐದು ದಿನಗಳಿಂದ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಟ ಶುರು ಮಾಡಿದ್ರು. ಆದರೆ ಎಲ್ಲಿಯೂ ಅವರ ಸುಳಿವು ಸಿಗದಿರೋದ್ರಿಂದ ಇಂದು ಪೊಲೀಸ್ ಠಾಣೆಗೆ ದೂರು ನೀಡಲು ಕುಟುಂಬಸಾಥರು ನಿರ್ಧರಿಸಿದ್ದರು.
ಅಷ್ಟರಲ್ಲಿ ಮುನಿಲಕ್ಷ್ಮಮ್ಮ ಶವ ಕೆರೆಯಲ್ಲಿ ತೇಲುತ್ತಿದ್ದು, ಕುಟುಂಬಸ್ಥರಿಗೆ ಆಘಾತ ಎದುರಾಗಿತ್ತು. ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಡಿವೈಎಸ್ಪಿ ಮುರಳೀಧರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆ ಮಾಡಿ ಬಿಸಾಡಿದ್ದಾರಾ..?
ಇನ್ನು ಸುಮಾರು 20 ಅಡಿ ಆಳವಿರುವ ಕಲ್ಲಪಲ್ಲಿ ಕೆರೆಯಲ್ಲಿ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಯಾರಾದ್ರು ಕೊಲೆ ಮಾಡಿ ಬಿಸಾಡಿದ್ದಾರಾ..? ಅಥವಾ ಕಾಲು ಜಾರಿ ಕೆರೆಗೆ ಬಿದ್ದಿದ್ದಾರಾ ಎಂಬ ಅನುಮಾನ ಎದ್ದಿದೆ. ಸದ್ಯ ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ಇದನ್ನು ನೋಡಿ : AUSTRALIA ದೇಶದ ಕಂಪನಿಗಳು ತುಮಕೂರಿನಲ್ಲಿ ಹೂಡಿಕೆ ಮಾಡ್ತಾರಾ..?




