Hassan ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸುರನಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಕಾರು ಡಿಕ್ಕಿ ಹೊಡೆಸಿ ಭೀಕರ ಹತ್ಯೆ. ಮನು (27) ಸ್ಥಳದಲ್ಲೇ ಮೃತ, ಮೂವರಿಗೆ ಗಾಯ.

Hassan ಭೀಕರ ಮರ್ಡರ್ ಪ್ರಕರಣವು ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. ಕ್ಷುಲ್ಲಕ ವಿಚಾರವೇ ಯುವಕನ ಜೀವ ಕಸಿದುಕೊಂಡಿದ್ದು, ಹಾಸನ ಜಿಲ್ಲೆಯ Holenarasipura ತಾಲ್ಲೂಕಿನ ಸುರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮೃತ ಯುವಕನನ್ನು ಮನು (27) ಎಂದು ಗುರುತಿಸಲಾಗಿದೆ.
ತಡರಾತ್ರಿ ಸುಮಾರು 12 ಗಂಟೆ ವೇಳೆಗೆ ಮನು, ಅಭಿಷೇಕ್, ರಾಕೇಶ್ ಮತ್ತು ಕುಶಾಲ್ ರಸ್ತೆ ಪಕ್ಕದಲ್ಲಿ ನಿಂತು ಮಾತನಾಡುತ್ತಿದ್ದರು. ಇದೇ ವೇಳೆ KA-01-MF-2883 ನಂಬರ್ನ ಕಾರಿನಲ್ಲಿ ಅಪರಿಚಿತ ವ್ಯಕ್ತಿ ಅತಿ ವೇಗದಲ್ಲಿ ಆಗಮಿಸಿದ್ದಾನೆ.
ಇದನ್ನು ಓದಿ : ಚಂದ್ರಗ್ರಹಣದ ದಿನವೂ Male Mahadeshwara ದರ್ಶನಕ್ಕೆ ಅವಕಾಶ..!!

ಅದನ್ನು ಗಮನಿಸಿದ ಯುವಕರು, “ನಿಧಾನವಾಗಿ ಕಾರು ಓಡಿಸು” ಎಂದು ಚಾಲಕನಿಗೆ ತಿಳಿಸಿದ್ದಾರೆ. ಆದರೆ ಈ ಮಾತಿಗೆ ಕೋಪಗೊಂಡ ಚಾಲಕ, ಸ್ವಲ್ಪ ದೂರ ಹೋಗಿ ಕಾರನ್ನು ತಿರುಗಿಸಿಕೊಂಡು ಬಂದು, ಮಾತನಾಡುತ್ತ ನಿಂತಿದ್ದವರ ಮೇಲೆಯೇ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಡಿಕ್ಕಿಯ ತೀವ್ರತೆಗೆ ಮನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಇನ್ನೂ ಮೂವರು ಯುವಕರು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳು ಮತ್ತು ಮೃತರು ಪರಸ್ಪರ ಸಂಬಂಧಿಕರು ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.ಈ ಘಟನೆ ಹಾಸನ ಜಿಲ್ಲೆಯಲ್ಲಿ ಆತಂಕವನ್ನು ಉಂಟುಮಾಡಿದೆ.
ಇದನ್ನು ನೋಡಿ : ಟೀಚರ್ ಬೈದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹ* ಮಾಡಿಕೊಂಡಳಾ..?




