ಯಶ್ ಅಭಿನಯದ Toxic ಸಿನಿಮಾದ ಮೊದಲ ಹಾಡು ಬಿಡುಗಡೆಗೂ ಮುನ್ನ ಕಿಯಾರಾ ಅಡ್ವಾಣಿ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ…

Toxic ಸಿನಿಮಾದ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಯಶ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರಕ್ಕೆ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ.
ಮೊದಲ ಹಾಡು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿತ್ರದ ಕಲಾವಿದರು ಹಾಗೂ ಪಾತ್ರಗಳ ಕುರಿತು ಹೊಸ ಚರ್ಚೆಗಳು ಶುರುವಾಗಿದೆ.
ಕಿಯಾರಾ ಅಡ್ವಾಣಿ ಪಾತ್ರದ ಬಗ್ಗೆ ಭಾರೀ ಚರ್ಚೆ
ಚಿತ್ರದಲ್ಲಿ ನಟಿಸಿರುವ ಕಿಯಾರಾ ಅಡ್ವಾಣಿ ಅವರ ಪಾತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ವಿಶೇಷವಾಗಿ ಅವರು ಅಂಧ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಹೆಚ್ಚು ವೈರಲ್ ಆಗಿದೆ.

ಇದಕ್ಕೆ ಕಾರಣ ಚಿತ್ರದಿಂದ ಬಿಡುಗಡೆಯಾದ ಪೋಸ್ಟರ್ಗಳು. ಒಂದು ಪೋಸ್ಟರ್ನಲ್ಲಿ ಯಶ್ ಅವರು ಕಿಯಾರಾರನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದ್ದು, ನಾಯಕಿ ದೃಷ್ಟಿಹೀನಳಾಗಿರಬಹುದು ಎಂಬ ಅಭಿಮಾನಿಗಳ ವಿಶ್ಲೇಷಣೆ ಹೆಚ್ಚಾಗಿದೆ.
ಆದರೆ, ಚಿತ್ರದ ಮೊದಲ ಹಾಡು ಬಿಡುಗಡೆಯಾದ ಬಳಿಕ ಈ ವದಂತಿಗಳಿಗೆ ಸ್ಪಷ್ಟ ಉತ್ತರ ಸಿಗುವ ಸಾಧ್ಯತೆ ಇದೆ.
15 ಕೋಟಿ ಸಂಭಾವನೆ ಪಡೆದ್ರಾ ಕಿಯಾರಾ?
ಬಾಲಿವುಡ್ನ ದುಬಾರಿ ನಟಿಯರಲ್ಲಿ ಒಬ್ಬರಾಗಿರುವ ಕಿಯಾರಾ ಅಡ್ವಾಣಿ ಈ ಚಿತ್ರಕ್ಕಾಗಿ ಭಾರೀ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಹಿಂದೆ War 2 ಸಿನಿಮಾಕ್ಕಾಗಿ ಸುಮಾರು 13 ಕೋಟಿ ರೂ. ಪಡೆದಿದ್ದ ಅವರು, ಇದೀಗ ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರು ನಟಿಸಲು ಬರೋಬ್ಬರಿ 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಇದನ್ನು ಓದಿ : ಪಾಕಿಸ್ತಾನದ ಶೋಯೆಬ್ ಮಲಿಕ್ ದಾಖಲೆ ಮುರಿದ Pandya

ಈ ಸಿನಿಮಾದಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದಲ್ಲದೆ ಸುದೇವ್ ನಾಯರ್ ಹಾಗೂ ಬಾಲಾಜಿ ಮನೋಹರ್ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಭರ್ಜರಿ ನಿರ್ಮಾಣ – ರವಿ ಬಸ್ರೂರು ಸಂಗೀತ
ಚಿತ್ರವನ್ನು KVN Productions ಮತ್ತು Monster Mind Creations ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ನಿರ್ಮಾಪಕರಾಗಿ ವೆಂಕಟ್ ಕೆ. ನಾರಾಯಣ ಹಾಗೂ ಯಶ್ ಕಾರ್ಯನಿರ್ವಹಿಸಿದ್ದಾರೆ.

ಚಿತ್ರಕ್ಕೆ ಸಂಗೀತ ಹಾಗೂ ಹಿನ್ನೆಲೆ ಸಂಗೀತವನ್ನು ರವಿ ಬಸ್ರೂರು ಸಂಯೋಜಿಸಿದ್ದಾರೆ.
ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ
ಮೊದಲ ಹಾಡಿನ ಬಿಡುಗಡೆ ಬಳಿಕ ಕಥೆ ಹಾಗೂ ಪಾತ್ರಗಳ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರುವ ನಿರೀಕ್ಷೆ ಇದೆ. ವಿಶೇಷವಾಗಿ ಕಿಯಾರಾ ಅಡ್ವಾಣಿ ಪಾತ್ರದ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ಇದೇ ಹಾಡು ಉತ್ತರ ನೀಡುವ ಸಾಧ್ಯತೆ ಇದೆ.
ಇದನ್ನು ನೋಡಿ : DKS | ಶಾಸಕರ ಡಿನ್ನರ್ ಮೀಟಿಂಗ್ ಬಗ್ಗೆ ಡಿ.ಕೆ ಶಿವಕುಮಾರ್ ಏನಂದ್ರು ಗೊತ್ತಾ?




