Dina Bhavishaya : ಇಂದು ಹೋಳಿ ಹುಣ್ಣಿಮೆ, ಮೇಷದಿಂದ ಮೀನ ರಾಶಿಗಳ ಫಲಾಫಲ ಹೀಗಿದೆ..

Dina Bhavishaya : 2026 ಮಾರ್ಚ್ 3 ರ ಮಂಗಳವಾರ ಫಾಲ್ಗುಣ ಪೂರ್ಣಿಮಾದಂದು, ಹೋಳಿ ಹಬ್ಬವನ್ನು ಆಚರಿಸಲಾಗುವುದು. ಈ ದಿನ ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ.
ಹಾಗೆ ಈ ದಿನ ಶುಭ ಗ್ರಹದ ಪ್ರಭಾವ ಮತ್ತು ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಯಾವ ರಾಶಿಗೆ ಶುಭವಾದರೆ..? ಯಾವ ರಾಶಿಯವರಿಗೆ ಅಶುಭವಾಗಲಿದೆ..? ಇಂದು 12 ರಾಶಿಗಳ ಫಲಾಫಲ ಹೀಗಿದೆ..
ಮೇಷ ರಾಶಿ
ಇಂದು ನಿಮಗೆ ಅತ್ಯಂತ ಅನುಕೂಲಕರ ದಿನವಾಗಿಲ್ಲ. ಯಾರಿಗೂ ಸುಲಭವಾಗಿ ಮಾತು ಅಥವಾ ವಾಗ್ದಾನ ನೀಡುವುದನ್ನು ತಪ್ಪಿಸುವುದು ಒಳಿತು. ಒಳ್ಳೆಯದನ್ನು ಮಾಡಲು ಮುಂದಾದರೂ ಕೆಲವರು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ.
ಆದ್ದರಿಂದ ಜಾಗ್ರತೆಯಿಂದ ನಡೆದುಕೊಂಡರೆ ನಷ್ಟ ತಪ್ಪಿಸಬಹುದು.
ವೃಷಭ ರಾಶಿ
ಇಂದು ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರಿಗೆ ಹೊಸ ಜವಾಬ್ದಾರಿಗಳು ನೀಡಲಾಗಬಹುದು. ಮನೆ ಸಂಬಂಧಿತ ಸಮಸ್ಯೆಗಳು ಕೂಡ ಹೆಚ್ಚಾಗಬಹುದು.
ಈ ಸಮಯದಲ್ಲಿ ತಾಳ್ಮೆಯಿಂದ ನಡೆದುಕೊಂಡು, ಅನುಭವಿಗಳ ಸಲಹೆ ಪಡೆದರೆ ಉತ್ತಮ ಫಲ ದೊರೆಯಲಿದೆ.
ಮಿಥುನ ರಾಶಿ
ಇಂದು ನಾಯಕತ್ವ ವಹಿಸುವ ಉತ್ತಮ ಅವಕಾಶ ಸಿಗಬಹುದು. ಅಚಾನಕ್ ಪ್ರೀತಿಪಾತ್ರರನ್ನು ಭೇಟಿಯಾಗುವ ಸಾಧ್ಯತೆ ಇದ್ದು, ಅವರಿಂದ ಸಹಾಯವೂ ದೊರೆಯಬಹುದು.
ಕೆಲ ಸಮಸ್ಯೆಗಳು ಎದುರಾದರೂ ನೀವು ಧೈರ್ಯವಾಗಿ ಎದುರಿಸಿ ಜಯ ಸಾಧಿಸುವಿರಿ.
ಕಟಕ ರಾಶಿ
ಇಂದು ಆವೇಶಕ್ಕೆ ಒಳಗಾದರೆ ದೊಡ್ಡ ತಪ್ಪು ಮಾಡುವ ಸಾಧ್ಯತೆ ಇದೆ. ಕೆಲಸದ ಕ್ಷೇತ್ರದಲ್ಲಿ ಸಮಸ್ಯೆಗಳು ಎದುರಾಗಬಹುದು.
ಆದ್ದರಿಂದ ಶಾಂತ ಮನಸ್ಸಿನಿಂದ ನಡೆದುಕೊಂಡು, ಇತರರ ಬಗ್ಗೆ ಸಕಾರಾತ್ಮಕ ಆಲೋಚನೆಗಳನ್ನು ಹೊಂದಿದರೆ ದಿನ ಸುಗಮವಾಗಿರುತ್ತದೆ.
ಸಿಂಹ ರಾಶಿ
ಇಂದು ನಿಮ್ಮ ಸುತ್ತಲಿನ ವಾತಾವರಣದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಸುತ್ತಮುತ್ತ ನಡೆಯುವ ವಿಚಾರಗಳನ್ನು ಗಮನಿಸುವುದು ಅಗತ್ಯ. ವಿಶೇಷವಾಗಿ ವ್ಯಾಪಾರ ಮತ್ತು ವ್ಯವಹಾರದಲ್ಲಿ ವಿರೋಧಿಗಳ ಚಲನವಲನಗಳ ಮೇಲೆ ಕಣ್ಣಿಟ್ಟರೆ ಸಮಸ್ಯೆಗಳನ್ನು ತಪ್ಪಿಸಬಹುದು.
ಕನ್ಯಾ ರಾಶಿ
ಇಂದು ಪ್ರೀತಿಯ ವಿಷಯದಲ್ಲಿ ಯಾರಾದರೂ ಪ್ರೇಮ ನಿವೇದನೆ ಮಾಡಿದರೆ ತ್ವರಿತ ನಿರ್ಧಾರಕ್ಕೆ ಬಾರದಿರಿ. ಚೆನ್ನಾಗಿ ಯೋಚಿಸಿ ಮುಂದೆ ಸಾಗುವುದು ಉತ್ತಮ, ಏಕೆಂದರೆ ಕೆಲವರು ಸ್ವಾರ್ಥದ ಉದ್ದೇಶ ಹೊಂದಿರಬಹುದು. ಕೆಲಸದ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಅಗತ್ಯವಾಗಬಹುದು; ಅವು ನಿಮಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಂಬಲ ಮತ್ತು ಲಾಭ ತರುತ್ತವೆ.
ತುಲಾ ರಾಶಿ
ಇಂದು ನಿಮ್ಮ ಮನಸ್ಸಿನ ಸಮಸ್ಯೆಗಳನ್ನು ಪ್ರೀತಿಪಾತ್ರರೊಂದಿಗೆ ಸ್ಪಷ್ಟವಾಗಿ ಹಂಚಿಕೊಳ್ಳುವುದು ಒಳಿತು. ಅವರೊಂದಿಗೆ ಉತ್ತಮ ಸಂವಹನ ಮತ್ತು ನಂಬಿಕೆಯನ್ನು ಬೆಳೆಸಲು ಪ್ರಯತ್ನಿಸಿದರೆ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
ವೃಶ್ಚಿಕ ರಾಶಿ
ಇಂದು ಹೊಸ ಕೆಲಸ ಹುಡುಕುವವರು ಅಥವಾ ಹೊಸ ವ್ಯವಹಾರ ಆರಂಭಿಸಲು ಯೋಚಿಸುವವರು ಸುತ್ತಮುತ್ತಲಿನವರ ಸಹಾಯ ಪಡೆಯುವುದು ಉತ್ತಮ. ಅವರ ಮಾರ್ಗದರ್ಶನದಿಂದ ಹೆಚ್ಚಿನ ಲಾಭ ಸಾಧ್ಯ. ನಿಮ್ಮ ಪ್ರಯತ್ನಗಳನ್ನು ಆರಂಭಿಸಲು ಇದು ಅನುಕೂಲಕರ ಸಮಯ.
ಧನು ರಾಶಿ
ಇಂದು ಕೆಲಸಗಳಲ್ಲಿ ಅವಸರ ಮಾಡುವ ಸಾಧ್ಯತೆ ಇದೆ. ಮಹತ್ವದ ಕಾರ್ಯಗಳನ್ನು ಪೂರ್ಣಗೊಳಿಸಲು ಕೆಲವು ಅಡೆತಡೆಗಳು ಎದುರಾಗಬಹುದು. ಹೊಸ ಅವಕಾಶಗಳು ಬಂದರೂ ಅವನ್ನು ಸಮರ್ಪಕವಾಗಿ ಬಳಸಲು ಸವಾಲುಗಳು ಎದುರಾಗಬಹುದು. ಆದ್ದರಿಂದ ಸಮಯ ಪಾಲನೆ ಮಾಡಿ, ಶಾಂತವಾಗಿ ಕೆಲಸ ಮಾಡಿದರೆ ಉತ್ತಮ ಫಲ ಸಿಗುತ್ತದೆ.
ಮಕರ ರಾಶಿ
ಇಂದು ಹಳೆಯ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಲು ಉತ್ತಮ ದಿನ. ದೇವರಲ್ಲಿ ಇಟ್ಟಿದ್ದ ಬೇಡಿಕೆಗಳು ಈಡೇರುವ ಸೂಚನೆಗಳಿವೆ. ಆದರೆ ಬಹುಕಾಲದಿಂದ ಪ್ರಯತ್ನಿಸುತ್ತಿರುವ ವಿಷಯಗಳಲ್ಲಿ ಮುಂದಿನ ದಿನಗಳಲ್ಲಿ ಕೆಲವು ಸಮಸ್ಯೆಗಳು ಮತ್ತು ಹೆಚ್ಚುವರಿ ಖರ್ಚುಗಳು ಎದುರಾಗುವ ಸಾಧ್ಯತೆ ಇರುವುದರಿಂದ ಜಾಗ್ರತೆ ಅಗತ್ಯ.
ಕುಂಭ ರಾಶಿ
ಇಂದು ನಿಮ್ಮ ದಿನಚರಿಯಲ್ಲಿ ಬಹುಕಾಲದ ನಂತರ ಪ್ರಮುಖ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಹೊಸ ಹುದ್ದೆ ಅಥವಾ ಪದವಿ ದೊರಕುವ ಸಾಧ್ಯತೆ ಇದೆ. ಅದನ್ನು ತಕ್ಷಣ ಸ್ವೀಕರಿಸುವ ಅವಕಾಶ ಸಿಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಪ್ರಗತಿಗೆ ಉತ್ತಮ ಅವಕಾಶಗಳು ತೆರೆದುಕೊಳ್ಳುತ್ತವೆ.
ಮೀನ ರಾಶಿ
ಇಂದು ಅಲಂಕಾರ ಮಾಡಿಕೊಂಡು ಸಭೆ ಅಥವಾ ಸಮಾರಂಭಕ್ಕೆ ತೆರಳುವ ಸಾಧ್ಯತೆ ಇದೆ. ಅನಗತ್ಯ ಓಡಾಟಗಳನ್ನು ತಪ್ಪಿಸುವುದು ಒಳಿತು. ಪ್ರಮುಖ ವ್ಯಕ್ತಿಗಳೊಂದಿಗೆ ವಾಗ್ವಾದವಾಗದಂತೆ ಎಚ್ಚರಿಕೆ ವಹಿಸಿ. ನಿಮ್ಮ ವ್ಯಕ್ತಿತ್ವದಿಂದ ಕೆಲವರನ್ನು ನಿಮ್ಮತ್ತ ಆಕರ್ಷಿಸುವಿರಿ.




