The Kerala Story 2 ಸಿನಿಮಾ ವಿವಾದಗಳ ನಡುವೆಯೇ ಬಿಡುಗಡೆಯಾಗಿ ವೀಕೆಂಡ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ…

ದಿ ಕೇರಳ ಸ್ಟೋರಿ 2 ಸಿನಿಮಾ ಸಾಕಷ್ಟು ವಿವಾದಗಳ ನಡುವೆ ಬಿಡುಗಡೆಯಾಗಿ ಇದೀಗ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಲವ್ ಜಿಹಾದ್ ಕಥಾಹಂದರ ಹಿನ್ನೆಲೆ ಸಿನಿಮಾ ಕೋರ್ಟ್ ಪ್ರಕರಣಗಳನ್ನು ಎದುರಿಸಿತ್ತು.
ಆದರೂ ಎಲ್ಲಾ ಅಡೆತಡೆಗಳನ್ನು ಮೀರಿ ಚಿತ್ರ ತೆರೆಗೆ ಬಂದು ಪ್ರೇಕ್ಷಕರ ಗಮನ ಸೆಳೆದಿದೆ.
ಚಿತ್ರದ ಬಿಡುಗಡೆಗೆ ಮೊದಲು ಕೇರಳ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಮರು ವಿಚಾರಣೆ ನಡೆಸಿ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲಾಯಿತು. ಅದರ ನಂತರ ಶುಕ್ರವಾರ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಯಿತು.
ಇದನ್ನು ಓದಿ : ಏಪ್ರಿಲ್ 1ರಿಂದ ಬೆಂಗಳೂರು ಐತಿಹಾಸಿಕ ಕರಗ ಮಹೋತ್ಸವ

ಮೊದಲ ದಿನ ಕೇವಲ 75 ಲಕ್ಷ; ನಂತರ ವೀಕೆಂಡ್ ಸದ್ದು
ಬಿಡುಗಡೆಯಾದ ಮೊದಲ ದಿನ ಸಿನಿಮಾ ಕೇವಲ 75 ಲಕ್ಷ ರೂಪಾಯಿ ಗಳಿಕೆ ಮಾಡಿತ್ತು. ಇದರಿಂದ ಚಿತ್ರದ ಆರಂಭ ನಿಧಾನವಾಗಿತ್ತು ಎನ್ನಲಾಯಿತು. ಆದರೆ ಶನಿವಾರ ಹಾಗೂ ಭಾನುವಾರ ಚಿತ್ರ ಭರ್ಜರಿ ಪ್ರದರ್ಶನ ಕಂಡಿತು.
ಶನಿವಾರ ಸುಮಾರು 4.65 ಕೋಟಿ ರೂಪಾಯಿ ಮತ್ತು ಭಾನುವಾರ ಸುಮಾರು 5 ಕೋಟಿ ರೂಪಾಯಿ ಗಳಿಕೆ ಮಾಡಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ.
ಸ್ಟಾರ್ ಕಾಸ್ಟ್ ಮತ್ತು ನಿರ್ದೇಶನ
ಈ ಸಿನಿಮಾದಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಮತ್ತು ಐಶ್ವರ್ಯಾ ಓಝಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರವನ್ನು ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶಿಸಿದ್ದು, ನಿರ್ಮಾಪಕರಾಗಿ ವಿಪುಲ್ ಅಮೃತ್ಲಾಲ್ ಶಾ ಕಾರ್ಯನಿರ್ವಹಿಸಿದ್ದಾರೆ.

ಲವ್ ಜಿಹಾದ್ ಕಥೆ ಮತ್ತೆ ವಿವಾದಕ್ಕೆ ಕಾರಣ
ಈ ಚಿತ್ರದಲ್ಲಿ ಲವ್ ಜಿಹಾದ್ ಕುರಿತ ಕಥೆಯನ್ನು ತೋರಿಸಲಾಗಿದ್ದು, ಅದೇ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಬಿಡುಗಡೆಯಾದ ದಿ ಕೇರಳ ಸ್ಟೋರಿ ಸಿನಿಮಾ ಕೂಡ ಇದೇ ವಿಷಯದ ಕಾರಣದಿಂದ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಕೆಲವು ರಾಜ್ಯಗಳಲ್ಲಿ ಬ್ಯಾನ್ ಮಾಡಲು ಪ್ರಯತ್ನಗಳಾದರೂ ಸಿನಿಮಾ ಯಶಸ್ಸು ಕಂಡಿತ್ತು.
ವೀಕೆಂಡ್ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ ‘ದಿ ಕೇರಳ ಸ್ಟೋರಿ 2’ ಮುಂದಿನ ದಿನಗಳಲ್ಲಿ ಇನ್ನಷ್ಟು ಕಲೆಕ್ಷನ್ ಮಾಡುತ್ತದೆಯೇ ಎಂಬುದನ್ನು ಸಿನಿ ವಲಯ ಕಾತರದಿಂದ ಕಾದು ನೋಡುತ್ತಿದೆ.
ಇದನ್ನು ನೋಡಿ : SECOND PUC EXAM ಆರಂಭ – ತುಮಕೂರಲ್ಲಿ ವಿದ್ಯಾರ್ಥಿಗಳ ಜೋಶ್ ಹೇಗಿದೆ ಗೊತ್ತಾ




