Bengaluru Karaga : ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ದಿನಾಂಕ ನಿಗದಿ.

Bengaluru Karaga : ವಿಶ್ವದಲ್ಲೇ ಖ್ಯಾತಿಯಾಗಿರುವ ಬೆಂಗಳೂರಿನ ಕರಗ ಉತ್ಸವಕ್ಕೆ ಕೊನೆಗೂ ದಿನಾಂಕ ಪಿಕ್ಸ್ ಆಗಿದೆ. ಏಪ್ರಿಲ್ 1 ರಿಂದ ಕರಗ ಉತ್ಸವ ನಡೆಸಲು ಮುಜರಾಯಿ ಇಲಾಖೆಯು, ಧರ್ಮರಾಯ ಸ್ವಾಮಿ ದೇವಾಲಯದ ನೂತನ ವ್ವವಸ್ಥಾಪನಾ ಸಮಿತಿ ಸಭೆಯಲ್ಲಿ ನಿರ್ಧರಿಸಿದೆ.

ಮೈಸೂರು ದಸರಾ ಮಾದರಿಯಲ್ಲೇ ಬೆಂಗಳೂರು ಕರಗ!
ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಬೆಂಗಳೂರು ಕರಗ ಏಪ್ರಿಲ್ 1 ರಿಂದ ನಡೆಯಲಿದೆ. 11 ದಿನಗಳ ಕಾಲ ನಡೆಯುವ ಕರಗ ಅದ್ದೂರಿ ಉತ್ಸವಕ್ಕೆ ಮಾರ್ಚ್ 24 ರಂದು ಧ್ವಜರೋಹಣ ಮೂಲಕ ಚಾಲನೆ ನೀಡಲಾಗುತ್ತದೆ. ಮಾರ್ಚ್ 30 ರಂದು ಹಸಿ ಕರಗ ನಡೆಯಲಿದೆ. ಅದ್ರಲ್ಲೂ ಈ ಬಾರಿ ಮೈಸೂರು ದಸರಾ ಮಾದರಿಯಲ್ಲೇ ಕರಗ ಮಹೋತ್ಸವಕ್ಕೆ ಪ್ಲಾನ್ ರೂಪಸುತ್ತಿದ್ದೇವೆ ಎಂದು ಸಚಿವ ರಾಮಲಿಂಗರೆಡ್ಡಿ ಹೇಳಿದ್ದಾರೆ.
ಇದನ್ನು ಓದಿ : ಪಾಕಿಸ್ತಾನದ ಶೋಯೆಬ್ ಮಲಿಕ್ ದಾಖಲೆ ಮುರಿದ Pandya

16ನೇ ಬಾರಿ ಕರಗ ಹೊರಲಿದ್ದಾರೆ ಜ್ಙಾನೇಂದ್ರ ಸ್ವಾಮಿ
ಇನ್ನು ಏಪ್ರಿಲ್ 1ರಂದು ನಡೆಯಲಿರುವ ಬೆಂಗಳೂರು ಕರಗ ಉತ್ಸವಕ್ಕೆ ಎ.ಜ್ಞಾನೇಂದ್ರ ಸ್ವಾಮಿ ಕರಗ ಹೊರಲಿದ್ದಾರೆ. ಕಳೆದ ವರ್ಷ 15ನೇ ಬಾರಿ ಯಶಸ್ವಿಯಾಗಿ ಕರಗ ಹೊತ್ತಿದ್ದ ಜ್ಞಾನೇಂದ್ರ ಸ್ವಾಮಿ, ಈ ಸಲ 16ನೇ ಬಾರಿಗೆ ಕರಗ ಹೊರಲಿದ್ದಾರೆ.
ಇದನ್ನು ನೋಡಿ : DKS | ಶಾಸಕರ ಡಿನ್ನರ್ ಮೀಟಿಂಗ್ ಬಗ್ಗೆ ಡಿ.ಕೆ ಶಿವಕುಮಾರ್ ಏನಂದ್ರು ಗೊತ್ತಾ?




