Gadag : ಥೂ ಇವನೆಂಥಾ ಮಗ ಇರ್ಬೇಕು? – ತಂದೆಯನ್ನೇ ಕೊಂದೇ ಬಿಟ್ಟ.

ಆಸ್ತಿ ವಿಚಾರಕ್ಕೆ ತಂದೆ ಮಗನ ನಡುವೆ ಗಲಾಟೆ ಶುರುವಾಗಿ ಮಗನೇ ತಂದೆಯನ್ನ Murder ಮಾಡಿರುವ ಘಟನೆ Gadag ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋವನಾಳ ಗ್ರಾಮದಲ್ಲಿ ನಡೆದಿದೆ. ಶಂಕರಗೌಡ ದ್ಯಾವನಗೌಡ ಎಂಬುವರನ್ನ ಅವರ ಮಗ ಪ್ರಭು ಶಂಕರಗೌಡ ದ್ಯಾವನಗೌಡ ಕೊಲೆ ಮಾಡಿದ್ದಾನೆ.

ಮರ್ಮಾಂಗ ಭಾಗಕ್ಕೆ ಹೊಡೆದು ಹತ್ಯೆ
ಎರಡು ಎಕರೆ ಜಮೀನು ವಿಚಾರವಾಗಿ ತಂದೆ ಮಗನ ನಡುವೆ ಆಗಾಗ ಗಲಾಟೆ ನಡೆಯುತ್ತಿದ್ದು, ಕಳೆದ ರಾತ್ರಿ ಇಬ್ಬರೂ ಮಧ್ಯ ಸೇವಿಸಿದ್ದ ಕಾರಣ ಗಲಾಟೆ ತಾರಕಕ್ಕೇರಿ, ಮಗ ತಂದೆಯ ತಲೆ ಹಾಗೂ ಮರ್ಮಾಂಗ ಭಾಗಕ್ಕೆ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಆರೋಪಿ ನೇರವಾಗಿ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಇದನ್ನು ಓದಿ : ಮಾನಸಿಕ ಖಿನ್ನತೆಯಿಂದ ಮನೋವೈದ್ಯ Suicide

ಪ್ರಕರಣ ದಾಖಲು – Gadag
ಸದ್ಯ ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹಾಗೂ ಡಿವೈಎಸ್ಪಿ ಮುರ್ತುಜಾ ಖಾದ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ತಡರಾತ್ರಿ ಕಿಡಿಗೇಡಿಗಳ ಅಟ್ಟಹಾಸ ಮನೆ ಭಸ್ಮ, ತಾಯಿ-ಮಕ್ಕಳು ಬಚಾವ್




