Shivamogga ಜಿಲ್ಲೆಯ ಹುಲಿಕಲ್ ಘಾಟ್ನಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟುಕರಕಲು..!!

Shivamogga ಜಿಲ್ಲೆಯ ಹುಲಿಕಲ್ ಘಾಟ್ನಲ್ಲಿ ಭಯಾನಕ ಬೆಂಕಿ ಅವಘಡ ಸಂಭವಿಸಿದ್ದು, ಖಾಸಗಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಕುಂದಾಪುರದಿಂದ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದ ಗಜಾನನ ಕಂಪನಿಯ ಶ್ರೀ ದುರ್ಗಾಂಬಾ ಬಸ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕೆಲವೇ ನಿಮಿಷಗಳಲ್ಲಿ ಅಗ್ನಿಕಾಂಡಕ್ಕೆ ತಿರುಗಿತು.
ಘಟನೆ ಚಂಡಿಕಾಂಬ ದೇವಸ್ಥಾನದ ಸಮೀಪದ ತಿರುವಿನಲ್ಲಿ ನಡೆದಿದೆ. ಬಸ್ ಇಂಜಿನ್ ಭಾಗದಿಂದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕರು ವಾಹನವನ್ನು ನಿಲ್ಲಿಸಿ ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಸಿದರು. ಬಸ್ನಲ್ಲಿ ಸುಮಾರು 36 ಪ್ರಯಾಣಿಕರು ಇದ್ದರೂ ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾದ ಬಸ್
ಬೆಂಕಿ ವೇಗವಾಗಿ ಹಬ್ಬಿ ಇಂಜಿನ್, ಸೀಟುಗಳು, ಟೈರ್ಗಳು ಸೇರಿದಂತೆ ಸಂಪೂರ್ಣ ಬಸ್ ಸುಟ್ಟುಹೋಗಿದೆ. ಬಸ್ನಲ್ಲಿ ಅಗ್ನಿಶಾಮಕ ಯಂತ್ರ ಇದ್ದರೂ ಬೆಂಕಿಯ ತೀವ್ರತೆಯಿಂದ ಅದನ್ನು ಬಳಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಇದನ್ನು ಓದಿ : ಪಾಕಿಸ್ತಾನದ ಶೋಯೆಬ್ ಮಲಿಕ್ ದಾಖಲೆ ಮುರಿದ Pandya
ಬೆಂಕಿಗೆ ಕಾರಣವೇನು?
ಪ್ರಾಥಮಿಕ ಮಾಹಿತಿಯ ಪ್ರಕಾರ ಇಂಜಿನ್ನಲ್ಲಿ ಎಣ್ಣೆ ಸೋರಿಕೆ ಅಥವಾ ಘಾಟ್ ಏರುವಾಗ ಇಂಜಿನ್ ಅತಿಯಾಗಿ ಬಿಸಿಯಾಗಿರುವುದು ಬೆಂಕಿಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ನಿಖರ ಕಾರಣ ತನಿಖೆಯ ಬಳಿಕ ತಿಳಿಯಲಿದೆ.
ಪೊಲೀಸ್ ತನಿಖೆ ಆರಂಭ
ಪ್ರಕರಣ ಸಂಬಂಧ ನಗರ ಪೊಲೀಸ್ ಠಾಣೆ ಹೊಸನಗರ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಿಳಿದ ತಕ್ಷಣ ಸಬ್ ಇನ್ಸ್ಪೆಕ್ಟರ್ ಶಿವಾನಂದ ಕೊಳಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇದನ್ನು ನೋಡಿ : DKS | ಶಾಸಕರ ಡಿನ್ನರ್ ಮೀಟಿಂಗ್ ಬಗ್ಗೆ ಡಿ.ಕೆ ಶಿವಕುಮಾರ್ ಏನಂದ್ರು ಗೊತ್ತಾ?




