Rashmika-Vijay – ʻವಿರೋಶ್ʼ ಕಲ್ಯಾಣ – ಸತಿಪತಿಯಾದ ವಿಜಯ್, ರಶ್ಮಿಕಾ!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಹೆಸರಾಂತ ನಟ ವಿಜಯ್ ದೇವರಕೊಂಡ ವಿವಾಹವು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದಿದೆ. ಬೆಳಗ್ಗೆ 8 ಗಂಟೆಗೆ ನಡೆದ ಶುಭ ಮುಹೂರ್ತದಲ್ಲಿ ವಿರೋಶ್ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದೆ. ಕುಟುಂಬಸ್ಥರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

ಹಲವು ವರ್ಷಗಳಿಂದ ಪ್ರೀತಿ
ಹಲವು ವರ್ಷಗಳಿಂದ ಪ್ರೀತಿ ಸುದ್ದಿಗಳಲ್ಲಿ ಕಾಣಿಸಿಕೊಂಡಿದ್ದ ಈ ಜೋಡಿ, ಇತ್ತೀಚೆಗೆ ಕದ್ದುಮುಚ್ಚಿ ನಿಶ್ಚಿತಾರ್ಥ ಮಾಡಿಕೊಂಡಿತ್ತು ಎನ್ನಲಾಗಿತ್ತು. ಇದೀಗ ಅದೇ ಸರಳತೆ ಮತ್ತು ಗೌಪ್ಯತೆಯೊಂದಿಗೆ ಮದುವೆಯನ್ನೂ ನೆರವೇರಿಸಿರುವುದು ವಿಶೇಷ.
ಮೂರು ದಿನಗಳ ವೈಭವ
ಕಳೆದ ಮೂರು ದಿನಗಳಿಂದ ಹಳದಿ, ಮೆಹಂದಿ, ಸಂಗೀತ ಸೇರಿದಂತೆ ವಿವಿಧ ಶಾಸ್ತ್ರಗಳು ವಿಜೃಂಭಣೆಯಿಂದ ನಡೆದಿವೆ. ಆಂಧ್ರದ ದೇವರಕೊಂಡ ಮನೆತನದ ಸಂಪ್ರದಾಯದಂತೆ ಮುಂಜಾನೆ ವಿವಾಹ ನೆರವೇರಿದರೆ, ಕೊಡವ ಸಮುದಾಯದ ಸಂಪ್ರದಾಯಕ್ಕೂ ಗೌರವ ಸೂಚಿಸಿ ಸಂಜೆ ರಶ್ಮಿಕಾ ಕುಟುಂಬದ ವಿಧಿ ವಿಧಾನಗಳ ಪ್ರಕಾರ ಮತ್ತೊಮ್ಮೆ ಮದುವೆ ಶಾಸ್ತ್ರಗಳು ನಡೆಯಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನು ಓದಿ : ಗುಡ್ನ್ಯೂಸ್ – ಭಾರತೀಯ ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ
ಗಣ್ಯರ ಉಪಸ್ಥಿತಿ
ಮದುವೆಗೆ ಕೆಲವರಿಗೆ ಮಾತ್ರ ಆಹ್ವಾನ ನೀಡಿ ಅದ್ಧೂರಿಯಾಗಿಯೇ Rashmika ಮತ್ತು ವಿಜಯ್ ಮದುವೆಯಾಗಿದ್ದಾರೆ.
ಮೂರು ದಿನಗಳ ಕಾಲ ನಡೆಯುತ್ತಿರುವ ಅದ್ಧೂರಿ ಮದುವೆಗೆ ಈಗಾಗ್ಲೇ ರವಿತೇಜ, ಸಂದೀಪ್ ರೆಡ್ಡಿ ವಂಗಾ, ಆಶಿಕಾ ರಂಗನಾಥ್ ಹಾಗೂ ರಶ್ಮಿಕಾ ಗೆಳತಿಯರು ಉಪಸ್ಥಿತರಿದ್ದಾರೆ.
ಇನ್ನು ಮಾರ್ಚ್4 ರಂದು ಆರತಕ್ಷತೆ ನಡೆಯಲಿದ್ದು, ಸ್ಯಾಂಡಲ್ವುಡ್ನಿಂದ ಶಿವರಾಜ್ಕುಮಾರ್, ಗಣೇಶ್, ಧ್ರುವ ಸರ್ಜಾ, ಯಶ್ ಹಾಗೂ ಕಿಚ್ಚ ಸುದೀಪ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಡೆಸ್ಟಿನೇಷನ್ ವೆಡ್ಡಿಂಗ್ ವಿಶೇಷತೆ
ಡೆಸ್ಟಿನೇಷನ್ ವೆಡ್ಡಿಂಗ್ನಲ್ಲಿ ಲಿಮಿಟೆಡ್ ಗೆಸ್ಟ್… ಸೆಲೆಕ್ಟೆಡ್ ಫುಡ್… ಫುಲ್ಲೀಪ್ಲ್ಯಾನ್ಡ್ ಮಾಡಿ ಈ ಜೋಡಿ ಮದುವೆಯಾಗಿದೆ. ಇಬ್ಬರೂ ತಮ್ಮ ಕನಸಿನಂತೆ ಸತಿಪತಿಯಾಗಿದ್ದಾರೆ. ಈ ಮೂಲಕ ತೆರೆಯ ಹಿಂದೆ ನಿರ್ದೇಶಕನ ಕಲ್ಪನೆಯಲ್ಲಾದ ಜೋಡಿಯನ್ನ ವಿಧಿಯೂ ಸೇರಿಸಿಯಾಗಿದೆ.
ಕಳೆದ ಮೂರು ದಿನಗಳಿಂದ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದು ಶಾಸ್ತ್ರದ ಸಣ್ಣ ಸಣ್ಣ ಝಲಕ್ನ್ನ ಎರಡೂ ಕುಟುಂಬಗಳು ಹಂಚಿಕೊಳ್ಳುತ್ತಿವೆ.
ಒಟ್ಟಾರೆಯಾಗಿ ರಶ್ಮಿಕಾ ಮದುವೆ ಈ ವರ್ಷದ ಬಲು ಚರ್ಚಿತ ಹಾಗೂ ಅದ್ಧೂರಿ ಮದುವೆಯಾಗಿ ಹೊರಹೊಮ್ಮಿದೆ.

ಇದನ್ನು ನೋಡಿ : FLIPKART ಗ್ರಾಹಕನಿಗೆ ಕಂಪನಿಯಿಂದ ಮಹಾಮೋಸ- ಬುಕ್ ಮಾಡಿದ್ದೇ ಒಂದು ಆರ್ಡರ್ ಬಂದಿರೋದೇ ಮತ್ತೊಂದು..!




