Power Cut : ದೊಡ್ಡ ಅವಧಿಯ ವಿದ್ಯುತ್ ವ್ಯತ್ಯಯ ಅನುಭವಿಸಲಿದೆ ತುಮಕೂರು – ಪ್ರವಾಸಿಗರಿಗೆ ಬಿಗ್ ಪ್ರಾಬ್ಲಮ್!

Power Cut : ಬೆಂಗಳೂರು ಆಯ್ತು, ಈಗ ಪಕ್ಕದ ತುಮಕೂರಿಗೂ ಕರೆಂಟ್ ಕಣ್ಣಾಮುಚ್ಚಾಲೆ ಶುರುವಾಗಿದೆ. ನಗರದ ಬೆಸ್ಕಾಂ ಗ್ರಾಮೀಣ ಉಪವಿಭಾಗ-2ರ ವ್ಯಾಪ್ತಿಯಲ್ಲಿ ಅಗತ್ಯ ತಾಂತ್ರಿಕ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಫೆಬ್ರವರಿ 25ರ ಬುಧವಾರದಂದು ಈ ಭಾಗದ ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಪವರ್ ಕಟ್?
ಹೆಬ್ಬೂರು ಉಪವಿಭಾಗದ ವ್ಯಾಪ್ತಿಯಲ್ಲಿ ಲಿಂಕ್ ಲೈನ್ ಕಾಮಗಾರಿಗಳನ್ನ ಕೈಗೆತ್ತಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಮುನ್ನೆಚ್ಚಾರಿಕಾ ಕ್ರಮವಾಗಿ ಫಬ್ರವರಿ 25ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ವರೆಗೆ ಸತತ 8 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳಲಿದೆ. ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿದು ಬಂದಿದೆ.

ಇದನ್ನು ಓದಿ : ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ದಾಳಿ – 1 ಟನ್ ನಿಷೇಧಿತ ಪ್ಲಾಸ್ಟಿಕ್ ಜಪ್ತಿ
ಯಾವ ಯಾವ ಪ್ರದೇಶಗಳಲ್ಲಿ ಪವರ್ ಕಟ್ ?
ಹೆಬ್ಬೂರು, ಸಿರಿವರ, ಬೊಮ್ಮನಹಳ್ಳಿ, ಗೋವಿಂದರಾಜಪುರ, ಪಟ್ಟೇಗೌಡನಹಳ್ಳಿ, ಪುರದ ಕಟ್ಟೆ ಕಾವಲ್ರಾಗಿಮುದ್ನಹಳ್ಳಿ ಮತ್ತು ರಾಯಪುರ, ಬಳ್ಳಗೆರೆ, ಬಳ್ಳಗೆರೆ ಕಾವಲ್, ಚೋಳಪುರ, ಕಲ್ಯಾಣ ಪುರ, ಕಂಬಳಪುರ, ಕಾರಣಕುಪ್ಪೆ, ವಡೇರಪುರ ಮತ್ತು ಯಲದಹಳ್ಳಿ, ನಿಡುವಳಲ್,ಬಿದನಗೆರೆ, ದೊಡ್ಡಗುಡಿ,ಹೊನ್ನೆನಹಳ್ಳಿ, ಹುಳಿಯಾಪುರ, ಕರೇನಹಳ್ಳಿ, ಮಾಡಿವಾಳಪಾಳ್ಯ, ಮರಿಯಪ್ಪನಪಾಳ್ಯ, ನಾರಾಯಣಕೆರೆ, ತಾವರೆಕೆರೆ, ತಿಮ್ಮನಾಯಕನಪಾಳ್ಯ,ತೊಂಡಗೆರ ಮತ್ತು ತೊಂಡಗೆರೆ ಕಾವಲ್, ಕಣಕುಪ್ಪೆ, ಜುಂಜಯ್ಯನಪಾಳ್ಯ, ದೊಡ್ಡಗೊಲ್ಲಹಳ್ಳಿ, ರಾಮಕೃಷ್ಣಪುರ, ರಾಯವಾರ, ತಿಮ್ಮಸಂದ್ರ, ಗರಗದಕುಪ್ಪೆ, ಗರಗದಕುಪ್ಪೆ ಪಾಳ್ಯ, ಜಲ್ಲೆಪಾಳ್ಯ, ಕುಡುವನಕುಂಟೆ, ಬಿಸಾಳಹಳ್ಳಿ, ಬೋವಿ ಪಾಳು, ಬೈಚೇನಹಳ್ಳಿ, ಕಾಚೇನಹಳ್ಳಿ, ಸೀಗೇಪಾಳ್ಯ, ಚಿಕ್ಕಹೊಳ್ಳಹಳ್ಳಿ ಮತ್ತು ಲಿಂಗಾಪುರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಅಧಿಕಾರಿಗಳು ಹೇಳಿದ್ದೇನು?
ಕಾಮಗಾರಿಯ ಅವಧಿಯಲ್ಲಿ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಬೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಹೆಬ್ಬೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

ಇದನ್ನು ನೋಡಿ : TUMAKURU | ಥೂ ಇವಳೆಂಥಾ ತಾಯಿ ಇರ್ಬೇಕು..?- ಐದು ದಿನದ ಮಗುವನ್ನು ಎಸೆದು ಹೋದ್ಳು




