ಕಠ್ಮಂಡು ಕಡೆಗೆ ಬರುತ್ತಿದ್ದ ಬಸ್ Trishuli ನದಿಗೆ ಉರುಳಿ 18 ಮಂದಿ ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಸಂಪೂರ್ಣ ವಿವರ ಇಲ್ಲಿದೆ.

Trishuli : ನೇಪಾಳದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, 18 ಮಂದಿ ಪ್ರಯಾಣಿಕರು ಸಾವನ್ನಪ್ಪಿ 27 ಮಂದಿ ಗಾಯಗೊಂಡಿದ್ದಾರೆ. ಧಾಡಿಂಗ್ ಜಿಲ್ಲೆ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ದೇಶಾದ್ಯಂತ ಆತಂಕ ಮೂಡಿಸಿದೆ.
ಅಪಘಾತವು ಸೋಮವಾರ ನಸುಕಿನ ಜಾವ ಸುಮಾರು 1:30ರ ವೇಳೆಗೆ ಗಜೂರಿ ಸಮೀಪ ನಡೆದಿದೆ. ಪೋಖರಾದಿಂದ ಕಠ್ಮಂಡು ಕಡೆಗೆ ಪ್ರಯಾಣಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ತ್ರಿಶೂಲಿ ನದಿಗೆ ಉರುಳಿದೆ. ಕಠ್ಮಂಡುವಿನಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ.
ಇದನ್ನು ಓದಿ : ಶೀಘ್ರದಲ್ಲೇ Metro ಹೊಸ ದರ ನಿಗದಿ ಸಾಧ್ಯತೆ

ತುರ್ತು ರಕ್ಷಣಾ ಕಾರ್ಯಾಚರಣೆ
ಅಪಘಾತದ ತಕ್ಷಣವೇ ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಹಾಗೂ ನೇಪಾಳ ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ನದಿಯಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆದು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.

ಮೃತರಲ್ಲಿ ಒಬ್ಬರು ನ್ಯೂಜಿಲೆಂಡ್ ಪ್ರಜೆಯಾಗಿದ್ದು, ಜಪಾನ್ ಮತ್ತು ನೆದರ್ಲೆಂಡ್ ದೇಶಗಳ ತಲಾ ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಬಸ್ ಚಾಲಕನ ಅತಿವೇಗದ ಚಾಲನೆಯೇ ದುರಂತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಜೋಡಿ ಮೇಲೆ ದರ್ಪ – ತುಮಕೂರಿನಲ್ಲಿ ನಿಲ್ಲುತ್ತಿಲ್ಲ ಅಸ್ಪೃಶ್ಯತೆ ಪದ್ಧತಿ




