
BENGALURU : ಕರುನಾಡಿನ ಹಿರಿಯ ಸಾಹಿತಿ, ತತ್ವಜ್ಞಾನಿ, ಪದ್ಮಭೂಷಣ ಹಾಗೂ ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಡಾ. ಎಸ್.ಎಲ್. ಭೈರಪ್ಪ ಅವರು ನೆನ್ನೆ ಇಹಲೋಕ ತ್ಯಜಿಸಿದ್ದಾರೆ. ಸದ್ಯ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರ ಅನುಮತಿಯೊಂದಿಗೆ ವ್ಯವಸ್ಥೆ ಮಾಡಲಾಗಿದ್ದು, ಹಲವು ಗಣ್ಯರು ದರ್ಶನ ಪಡೆಯುತ್ತಿದ್ದಾರೆ.
ಅದರಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಭೈರಪ್ಪ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
“ಭೈರಪ್ಪರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಆಶಯದೊಂದಿಗೆ ನಾನು ಶ್ರದ್ಧಾಂಜಲಿ ಸಲ್ಲಿಸಿದ್ದೇನೆ. ಅವರು ಕನಕಪುರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ್ದರು. ಅಲ್ಲಿ ನನಗೆ ಅವರ ಪರಿಚಯವಾಯಿತು. ಅವರು ಬರವಣಿಗೆಯಲ್ಲಿ ಎಂದೂ ರಾಜಿ ಆಗದವರು. ಅವರ ಕಾದಂಬರಿಗಳಿಗೆ ವಿದೇಶದಲ್ಲಿಯೂ ಬೇಡಿಕೆ ಇದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆ ಕಾರಣ,”ಎಂದು ಡಿಸಿಎಂ ಹೇಳಿದ್ದಾರೆ.




