Electricity Price : ರಾಜ್ಯದ ಜನರಿಗೆ ಕರೆಂಟ್ ಶಾಕ್..! ದುಬಾರಿ ದುನಿಯಾದಲ್ಲಿ ಲೈಫ್ ಕಾಸ್ಟ್ಲಿ.

Electricity Price : ದುಬಾರಿ ದುನಿಯಾದಲ್ಲಿ ಜನರ ಲೈಫು ಮತ್ತೆ ಕಾಸ್ಟ್ಲಿ ಆಗುತ್ತಿದೆ. ದಿನದಿಂದ ದಿನಕ್ಕೆ ಎಲ್ಲಾ ರೇಟ್ಗಳು ಹೆಚ್ಚಾಗ್ತಾ ಇದ್ದು, ಜನರು ಕಂಗಾಲಾಗಿದ್ದಾರೆ. ಹಾಲು, ತರಕಾರಿ, ಮೊಟ್ಟೆ, ಚಿಕನ್, ಮಟನ್ ಆಯ್ತು ಇದೀಗ ಮತ್ತೆ ಜನರಿಗೆ ಕರೆಂಟ್ ಶಾಕ್ ಎದುರಾಗಿದೆ. ಹೌದು ಮುಂದಿನ ತಿಂಗಳಿನಿಂದ ಕರೆಂಟ್ ದರ ಏರಿಕೆ ಮಾಡುವ ಸಾಧ್ಯತೆ ಇದ್ದು ಜನರನ್ನು ಚಿಂತೆಗೀಡು ಮಾಡುತ್ತಿದೆ.

67 ಪೈಸೆ ಹೆಚ್ಚಳ?
ಸದ್ದಿಲ್ಲದೇ ಬೇಸಿಕೆ ಆರಂಭದಲ್ಲಿ ರಾಜ್ಯದ ಜನರಿಗೆ ಕರೆಂಟ್ ಶಾಕ್ ನೀಡೊಕೆ ಕೆಇಬಿ ಸಿದ್ಧತೆ ನಡೆಸಿದೆ. ಹೆಸ್ಕಾಂಗಳ ಒತ್ತಾಯಕ್ಕೆ ಮಣಿದ ಕೆಇಬಿ ವಿದ್ಯುತ್ ದರ ಪರಿಷ್ಕರಣೆಗೆ ರೆಡಿಯಾಗುತ್ತಿದೆ. ಶೀಘ್ರದಲ್ಲೇ ಕರೆಂಟ್ ಬಿಲ್ ರಾಜ್ಯದಲ್ಲಿ ಪರಿಷ್ಕರಣೆಯಾಗಲಿದೆ. ವಿದ್ಯುತ್ ದರ ಏರಿಕೆ ಸಂಬಂಧ ಅಭಿಪ್ರಾಯ ಸಂಗ್ರಹವನ್ನು ಕೂಡ ಮಾಡಲಾಗಿದೆ.
ವಿದ್ಯುತ್ ಖರೀದಿ ಸೇರಿ ಇನ್ನಿತರ ನೆಪವೊಡ್ಡಿ ಎಸ್ಕಾಂಗಳಿಂದ ದರ ಏರಿಕೆ ಪ್ರಸ್ತಾವನೆ ಮುಂದಿಟ್ಟಿದೆ. ಪ್ರತಿ ಯೂನಿಟ್ಗೆ ಸರಾಸರಿ 67 ಪೈಸೆ ಹೆಚ್ಚಳ ಮಾಡುವಂತೆ ಎಸ್ಕಾಂಗಳು ಮನವಿ ಮಾಡಿದೆ. ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದ ಬಳಿಕ ವಿದ್ಯುತ್ ಪರಿಷ್ಕರಣೆಗೆ ಕೆಇಆರ್ಸಿ ನಿರ್ಧರಿಸಲಿದೆ.
ಇದನ್ನು ಓದಿ : ಮಗಳನ್ನು ಲವ್ ಮಾಡಿ ಮದುವೆಯಾದ ಯುವಕನ ಮನೆಗೆ ಬೆಂಕಿ ಇಟ್ಟ ಮಾವ!

ವಿದ್ಯುತ್ ದರ ಏರಿಕೆ ಆಗುತ್ತಾ..?
ಜನಸಾಮಾನ್ಯರಿಗೆ ಮಾರ್ಚ್, ಏಪ್ರಿಲ್ನಿಂದ ವಿದ್ಯುತ್ ದರ ಏರಿಕೆ ಬಿಸಿ ತಟ್ಟಲಿದೆ. ಈ ಬಾರಿ ದುಬಾರಿ ವಿದ್ಯುತ್ ದರ ಏರಿಕೆ ಸಾಧ್ಯತೆ ಇದ್ದು, ಪ್ರತಿ ಯೂನಿಟ್ ಆಧಾರದ ಮೇಲೆ ವಿದ್ಯುತ್ ದರ ಏರಿಕೆ ಮಾಡಲು ಕೆಇಆರ್ಸಿ ನಿರ್ಧರಿಸಿದೆ.
ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ದರ ಏರಿಕೆ ಘೋಷಣೆ ಮಾಡುವ ಸಾಧ್ಯತೆ ಇದೆ. ಒಟ್ನಲ್ಲಿ ದುಬಾರಿ ದುನಿಯಾದಲ್ಲಿ ಜನರಿಗೆ ವಿದ್ಯುತ್ ದರ ಏರಿಕೆಗೆ ಮುಂದಾಗಿದ್ದು, ಏಪ್ರಿಲ್ನಲ್ಲಿ ವಿದ್ಯುತ್ ದರ ಏರಿಕೆ ಆಗುತ್ತಾ..? ಇಲ್ವಾ ಅನ್ನೋದನ್ನ ಕಾದುನೋಡಬೇಕಿದೆ.

ಇದನ್ನು ನೋಡಿ : BED ROOMನಲ್ಲಿ ಬುಸ್ ಬುಸ್ ನಾಗಪ್ಪ ಹಾವನ್ನು ಕಂಡು ಕುಟುಂಬಸ್ಥರು ಶಾಕ್




