ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸ್ಥಗಿತಗೊಳಿಸುವ ಬಗ್ಗೆ ಚಿಂತನೆ: NHAI.

ಏಪ್ರಿಲ್ 1ರಿಂದ ದೇಶಾದಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟನ್ನು ಸ್ಥಗಿತಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಚಿಂತನೆ ನಡೆಸಿದೆ. ಸದ್ಯ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಗೆ ಅವಕಾಶ ಇದೆ.
UPI ಮೂಲಕ ಮಾತ್ರ ಟೋಲ್ ಪಾವತಿ
ಆದ್ರೆ ಹೊಸ ನಿಯಮ ಜಾರಿಯಾದಲ್ಲಿ ಫಾಸ್ಟ್ ಟ್ಯಾಗ್ ಅಥವಾ ಯುಪಿಐ ಮೂಲಕ ಮಾತ್ರ ಟೋಲ್ ಪಾವತಿ ಮಾಡಬೇಕಾಗುತ್ತೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲದಿದ್ದಲ್ಲಿ ಯುಪಿಐ ಮೂಲಕ 1.25% ರಷ್ಟು ಹೆಚ್ಚು ಟೋಲ್ ಭರಸಿಬೇಕು.
ಇದನ್ನು ಓದಿ : ಶಾಸಕ Byrati Basavarajಗೆ ಮತ್ತೆ ಜೈಲು! ಫೆ.26ರವರೆಗೆ ನ್ಯಾಯಾಂಗ ಬಂಧನ

ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ
ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲು ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಹೊಸ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮವು ಟೋಲ್ಗಳಲ್ಲಿ ದಟ್ಟಣೆಯನ್ನ ಕಡಿಮೆ ಮಾಡಿ, ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.
ಇದನ್ನು ನೋಡಿ : ತಾಯಿ ಎದುರೇ ಪ್ರಾಣ ಬಿಟ್ಟ ಮಗ – ನೀರಿನಲ್ಲಿ ಮುಳುಗಿ ಯುವಕ ಸಾ* | GUBBI NEWS




