
ಪ್ರಜಾಶಕ್ತಿ ಟಿವಿಯು ತುಮಕೂರು ಜಿಲ್ಲೆಯಲ್ಲಿ ಜನಪರವಾದ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಹಾಗೇ ಜನರ ಧ್ವನಿಯಾಗಿ, ಅವರ ನೋವಿಗೆ ಸ್ಪಂಧಿಸಿ, ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡ್ತಾ ಇದೆ. ಇದಕ್ಕೆ ಹಲವು ಇಂಪ್ಯಾಕ್ಟ್ ಗಳು ಸಂದಿವೆ. ಇತ್ತ ಶಿರಾದಲ್ಲಿಯೂ ಭ್ರಷ್ಟರ ಹುಟ್ಟಡಗಿಸುವ ಕೆಲಸ ಮಾಡಿದೆ. ಇತ್ತಿಚಿಗೆ ತಾನೇ ಸರ್ಕಾರದಿಂದ ಭಾಗ್ಯಲಕ್ಷ್ಮೀ ಬಾಂಡ್ ಮೆಚುರಿಟಿ ಆಗಿ ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ಹಣ ಬಂದಿತ್ತು. ತಾವರೆಕೆರೆ ಅಂಗನವಾಡಿ ಕೇಂದ್ರದ ಬಾಂಡ್ ಪಡೆಯಲು ಹೋದ ತಾಯಂದಿರ ಬಳಿ ಲಂಚ ಪಡೆಯುತ್ತಿದ್ದರು ಅನ್ನೋ ಸುದ್ದಿಯನ್ನು ಬಿತ್ತರಿಸಿದ್ವಿ. ಬಿತ್ತರಿಸಿದ ಕೆಲ ದಿನದಲ್ಲೇ ಇದೀಗ ಬಿಗ್ ಇಂಪ್ಯಾಕ್ಟ್ ಆಗಿದ್ದು, ಮೇಲ್ವಿಚಾರಕಿಯನ್ನು ಎತ್ತಂಗಡಿ ಮಾಡಲಾಗಿದೆ.

ಶಿರಾ ತಾಲ್ಲೂಕಿನ ತಾವರೆಕೆರೆ ಅಂಗನವಾಡಿ ಕೇಂದ್ರದ 1ರಲ್ಲಿ ಮೇಲ್ವಿಚಾರಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ಅವರು ಭಾಗ್ಯಲಕ್ಷ್ಮಿ ಹಣದ ಪಾಸ್ ಪುಸ್ತಕ ನೀಡಲು ಫಲಾನುಭವಿಯಿಂದ ಲಂಚ ಪಡೆದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಅದನ್ನು ನಿಮ್ಮ ಪ್ರಜಾಶಕ್ತಿ ಟಿವಿ ವರದಿ ಬಿತ್ತರಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿತ್ತು. ಇದೀಗ ನಿಮ್ಮ ಪ್ರಜಾಶಕ್ತಿ ಟಿವಿಯ ವರದಿಗೆ ಎಚ್ಚೆತ್ತುಕೊಂಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಮೇಲ್ವಿಚಾರಕಿಯನ್ನು ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಇದು ನಿಮ್ಮ ಪ್ರಜಾಶಕ್ತಿ ಟಿವಿಯ ಬಿಗ್ ಇಂಪ್ಯಾಕ್ಟ್.




