
ನನ್ನ ಅವಧಿಯಲ್ಲಿ ಅಕ್ರಮ ಹಾಗೂ ಅವ್ಯವಹಾರ ನಡೆದಿಲ್ಲ. ನಾನು ಸದಸ್ಯನಾಗಿದ್ದ ಅವಧಿಯಲ್ಲಿ 15 ನೇ ಹಣಕಾಸು ಯೋಜನೆಯಡಿ 50 ಸಾವಿರ ವೆಚ್ಚದಲ್ಲಿ ಸ್ಮಶಾನದ ಸ್ವಚ್ಛತೆ ಮಾಡಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಎ.ಎಲ್ ಅಶ್ವತ್ಥಪ್ಪ ಮಧುಗಿರಿಯಲ್ಲಿ ತಿಳಿಸಿದರು.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಚಿಕ್ಕಮಾಲೂರು ಗ್ರಾಪಂನಲ್ಲಿ ಮಾತನಾಡಿದ ಅವರು , ಪಿಡಿಒ ಗ್ರಾಮ ಸ್ವಚ್ಚತೆ ಮಾಡಿಸುತಿದ್ದಾಗ ತೊಡಗಿಕೊಂಡ ಕೆಲ ಯುವಕರು ಬಂದು 2023-24 ನೇ ಸಾಲಿನಲ್ಲಿ ಮಾಡಿರುವ ಕೆಲಸಕ್ಕೆ ವಿನಾಃಕಾರಣ ಬೋಗಸ್ ಬಿಲ್ ಮಾಡಲಾಗಿದೆ ಎಂದು ಆರೋಪಿಸಿದ್ದು, ಇದು ಸತ್ಯಕ್ಕೆ ದೂರವಾಗಿದೆ ಸ್ಮಶಾನ ಅಭಿವೃದ್ಧಿ ಮಾಡಿರುವ ಬಗ್ಗೆ ನಮ್ಮ ಗ್ರಾಪಂನಲ್ಲಿ ದಾಖಲೆ ಇದೆ ಎಂದರು.

ಚಿಕ್ಕಮಾಲೂರು ಪಿಡಿಒ ದೊಡ್ಡಯ್ಯ ಸ್ವಾಮಿ ಮಾತನಾಡಿ, 2023-24 ನೇ ಸಾಲಿನಲ್ಲಿ ರಾಮಯ್ಯ ಎಂಬುವವರು ಅಧ್ಯಕ್ಷರಾಗಿದ್ದ ವೇಳೆ, ಅರಣ್ಯ ಇಲಾಖೆ ವತಿಯಿಂದ ನರೇಗಾ ಯೋಜನೆಯಡಿ, ಸರಕಾರಿ ಶಾಲೆ ಸ್ಮಶಾನದಲ್ಲಿ ನೆಟ್ಟಿದ್ದು, ಈ ಬಗ್ಗೆ ನಮ್ಮ ಗ್ರಾಪಂನಲ್ಲಿ ದಾಖಲೆ ಇದೆ. ಈ ವೇಳೆ ಅರಣ್ಯ ಇಲಾಖೆ ಇಂಜನಿಯರ್ ಬದಲಾವಣೆಯಾದ ಪರಿಣಾಮ ಬಿಲ್ ಮಾಡಲು ವಿಳಂಬವಾಗಿದೆ. ಇದೀಗಾ ಒಂದು ವರ್ಷ ಕಳೆದಿದ್ದು ಬಿಲ್ ಮಾಡಲು ಸಾಧ್ಯವಿಲ್ಲ.
ಸ್ಥಳಿಯ ಮುಖಂಡ ಕಾಂತರಾಜು ಮಾತನಾಡಿ, ಎಸ್ಸಿ.ಎಸ್ಟಿ ಸಮುದಾಯಗಳ ಕೇರಿಗಳ ಅಭಿವೃದ್ಧಿ, ಗ್ರಾಮ ನೈರ್ಮಲ್ಯ, ವಿಶೇಷಚೇತನರಿಗೆ 3% ನೀಡಬೇಕಿದ್ದ 15 ನೇ ಹಣಕಾಸು ಯೋಜನೆ ಅನುದಾನ ದುರ್ಬಳಕೆಯಾಗಿದೆ. ಕಳದ ನಾಲ್ಕು ವರ್ಷದಲ್ಲಿ 15 ನೇ ಹಣಕಾಸು ಯೋಜನೆಯಡಿ 1 ಕೋಟಿ 59 ಸಾವಿರ ಹಣ ಖರ್ಚು ಮಾಡಿದ್ದು ಯಾವುದೆ ಕರ್ಚು ಮಾಡಲಾಗಿದೆ ಎಂದು ಸಾಬಿತು ಮಾಡಲಿ.




