Bengaluru ನ ಆಡುಗೋಡಿಯಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ 49 ವರ್ಷದ ಅಮಲಾ ಮೃತಪಟ್ಟಿದ್ದಾರೆ.

Bengaluru ನ ಆಡುಗೋಡಿಯಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ 49 ವರ್ಷದ ಮಹಿಳೆ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತರನ್ನು ಅಮಲಾ (49) ಎಂದು ಗುರುತಿಸಲಾಗಿದೆ.
ಅಪಘಾತವು ಆಡುಗೋಡಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಬೆಳಿಗ್ಗೆ ಸುಮಾರು 11 ಗಂಟೆ ಸುಮಾರಿಗೆ ನಡೆದಿದೆ.
ಮಾಹಿತಿಯ ಪ್ರಕಾರ, ಅಮಲಾ ಅವರು ತಮ್ಮ ಮಗನೊಂದಿಗೆ ಚರ್ಚ್ಗೆ ತೆರಳಿ ವಾಪಸ್ಸು ಬರುತ್ತಿದ್ದರು. ಈ ವೇಳೆ ಆಡುಗೋಡಿಯ ಬಾಷ್ ಕಂಪನಿ ಮುಂದೆ ಎದುರಿಗೆ ಆಟೋ ಬಂದ ಹಿನ್ನೆಲೆ ಬ್ರೇಕ್ ಹಾಕಿದ್ದಾರೆ.

ಆ ಸಮಯದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಅಮಲಾ ರಸ್ತೆ ಮೇಲೆ ಬಿದ್ದಿದ್ದಾರೆ. ಬಳಿಕ ಟಿಪ್ಪರ್ ಅವರ ದೇಹದ ಮೇಲೆ ಹರಿದ ಪರಿಣಾಮ ಎರಡೂ ಕಾಲುಗಳು ಗಂಭೀರವಾಗಿ ಛಿದ್ರಗೊಂಡಿದ್ದವು.
ಇದನ್ನು ಓದಿ : Dina Bhavishya|ದಿನ ಭವಿಷ್ಯ 16 ಫೆಬ್ರವರಿ 2026
ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮಗನಿಗೆ ಸಣ್ಣ ಗಾಯ – ಬದುಕಿದ್ದೇ ಪವಾಡ
ಅಪಘಾತದಲ್ಲಿ ಅಮಲಾ ಅವರ ಮಗನಿಗೂ ಗಾಯಗಳಾಗಿದ್ದರೂ, ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾನೆ. ಸ್ಥಳೀಯರು ಇದನ್ನು ಪವಾಡವೆಂದು ಹೇಳುತ್ತಿದ್ದಾರೆ.

ಈ ಬಗ್ಗೆ ಆಡುಗೋಡಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಟಿಪ್ಪರ್ ಚಾಲಕ ಪರಾರಿ
ಅಪಘಾತದ ನಂತರ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತೆಯ ಸಹೋದರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಇದೀಗ ಆರೋಪಿಯನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ಘಟನೆ ಮತ್ತೆ ನಗರದಲ್ಲಿ ರಸ್ತೆ ಸುರಕ್ಷತೆ, ರಸ್ತೆ ಗುಂಡಿಗಳು ಮತ್ತು ಭಾರೀ ವಾಹನಗಳ ನಿಯಂತ್ರಣದ ಬಗ್ಗೆ ಪ್ರಶ್ನೆ ಎಬ್ಬಿಸಿದೆ. ಸ್ಥಳೀಯರು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ..
ಇದನ್ನು ನೋಡಿ : KSRTC NEW RULES | KSRTC ಪ್ರಯಾಣಿಕರಿಗೆ ಮತ್ತೆ ಶಾಕ್ – ಹೊಸ ಲಗೇಜ್ ರೂಲ್ಸ್ ಜಾರಿ




