ಸದ್ಯದಲ್ಲೇ Jana Nayagan ಚಿತ್ರ ಬಿಡುಗಡೆ ಆಗಬಹುದು ಎಂದುಕೊಂಡಿದ್ದ ಅಭಿಮಾನಗಳಿಗೆ ಬೇಸರ ಆಗಿದೆ.

ಖ್ಯಾತ ನಟ Thalapathy Vijay ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆ ಮತ್ತೆ ಮುಂದೂಡಿಕೆಯಾಗಿದೆ. ಚಿತ್ರಕ್ಕೆ ಆರಂಭದಿಂದಲೂ ಎದುರಾಗುತ್ತಿರುವ ಸೆನ್ಸಾರ್ ಮತ್ತು ಕಾನೂನು ಸಂಬಂಧಿತ ಅಡಚಣೆಗಳು ಅಭಿಮಾನಿಗಳ ನಿರೀಕ್ಷೆಗೆ ಬ್ರೇಕ್ ಹಾಕಿವೆ.
ಅಭಿಮಾನಿಗಳಿಗೆ ದೊಡ್ಡ ಶಾಕ್
ಎಲ್ಲವೂ ಯೋಜನೆಯಂತೆ ನಡೆದಿದ್ದರೆ ಈ ವರ್ಷದ ಆರಂಭದಲ್ಲೇ Jana Nayaganತೆರೆಗೆ ಬರಬೇಕಾಗಿತ್ತು. ಆದರೆ ಸೆನ್ಸಾರ್ ಸಮಸ್ಯೆ ತಲೆದೋರಿದ ಪರಿಣಾಮ ವಿವಾದ ಕೋರ್ಟ್ ಮೆಟ್ಟಿಲೇರಿತು. ಇದರಿಂದಾಗಿ ರಿಲೀಸ್ ದಿನಾಂಕ ಪದೇಪದೇ ಮುಂದೂಡಿಕೆಯಾಗುತ್ತಲೇ ಬಂದಿದೆ.

ಇದನ್ನು ಓದಿ : ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟ – ತಪ್ಪಿದ ದೊಡ್ಡ ಅನಾಹುತ!
ಸಂಸ್ಥೆ ಶಾಕಿಂಗ್ ಅಪ್ಡೇಟ್
ಇದೀಗ ಅಮೆರಿಕಾದಲ್ಲಿ ಚಿತ್ರವನ್ನು ವಿತರಿಸುತ್ತಿರುವ York Cinemas ಸಂಸ್ಥೆ ಶಾಕಿಂಗ್ ಅಪ್ಡೇಟ್ ನೀಡಿದೆ. ಏಪ್ರಿಲ್ 30ರೊಳಗೆ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ಈಗಾಗಲೇ ಟಿಕೆಟ್ ಖರೀದಿಸಿದವರು ಹಣ ಮರುಪಾವತಿ ಪಡೆದುಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ. ಅಭಿಮಾನಿಗಳ ತಾಳ್ಮೆ ಮತ್ತು ಬೆಂಬಲಕ್ಕೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.
ಸಿನಿಮಾದಲ್ಲಿ ರಾಜಕೀಯದ ಕಥಾಹಂದರ ಇದೆ
ಸದ್ಯದಲ್ಲೇ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ. ದಳಪತಿ ವಿಜಯ್ ಅವರು ಕೂಡ ತಮ್ಮದೇ ಪಕ್ಷ ಕಟ್ಟಿಕೊಂಡಿದ್ದಾರೆ. ‘ಜನ ನಾಯಗನ್’ ಸಿನಿಮಾದಲ್ಲಿರಾಜಕೀಯದ ಕಥಾಹಂದರ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವ ತನಕ ‘ಜನ ನಾಯಗನ್’ ಸಿನಿಮಾದ ಬಿಡುಗಡೆಗೆ ಅವಕಾಶ ಸಿಗುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ.

ಇದನ್ನು ನೋಡಿ : HASSAN|ಚಿನ್ನಾಭರರಣದ ಜೊತೆ ಮಹಿಳೆ ನಿಗೂಢ ನಾಪತ್ತೆ- ಆ ಮಹಿಳೆ ಎಲ್ಲಿಗೆ ಹೋಗಿರಬಹುದು..?




