Bidar ನಲ್ಲಿ ಆಟವಾಡುತ್ತಿದ್ದ ವೇಳೆ ಚರಂಡಿಗೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ..

Bidar : ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಚರಂಡಿಗೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿದ ದುರ್ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಬೀದರ್ ತಾಲೂಕಿನ ಮಲ್ಲಿಕ್ಮರ್ಜಾಪುರ ಗ್ರಾಮದಲ್ಲಿ ಸಂಭವಿಸಿದೆ. ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಮೃತ ಬಾಲಕನನ್ನು ಅವಿನಾಶ್ (5) ಎಂದು ಗುರುತಿಸಲಾಗಿದೆ. ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ, ಅವನು ಅಜಾಗರೂಕತೆಯಿಂದ ಮನೆಯ ಸಮೀಪದ ಚರಂಡಿ ಕಾಲುವೆಗೆ ಬಿದ್ದಿದ್ದಾನೆ ಎನ್ನಲಾಗಿದೆ. ಬಳಿಕ ಮಗು ಸ್ಥಳದಲ್ಲೇ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಇದನ್ನು ಓದಿ : ಅಮೆರಿಕಾದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನಾಪತ್ತೆ!
ಹುಡುಕಾಟದ ನಂತರ ಪತ್ತೆ
ಶುಕ್ರವಾರ ಸಂಜೆ ಸುಮಾರು 6 ಗಂಟೆಯಿಂದ ಬಾಲಕ ಕಾಣೆಯಾಗಿದ್ದ. ಕುಟುಂಬಸ್ಥರು ಮತ್ತು ಗ್ರಾಮಸ್ಥರು ಹಲವು ಕಡೆ ಹುಡುಕಾಟ ನಡೆಸಿದರೂ ಮೊದಲಿಗೆ ಸುಳಿವು ಸಿಗಲಿಲ್ಲ. ಆದರೆ, ಬಳಿಕ ಮನೆಯ ಮುಂದಿನ ಚರಂಡಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ.
ಪೊಲೀಸ್ ಮಾಹಿತಿ
ಈ ದುರ್ಘಟನೆ ಬಗದಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : ಹಿಟಾಚಿ ಕಂಪನಿಯಿಂದ ಇದೆಂಥಾ ನಿರ್ಲಕ್ಷ್ಯ.. 3 ದಿನಗಳಿಂದ ಪ್ರತಿಭಟಿಸಿದ್ರು ಡೋಂಟ್ ಕೇರ್




