Bengaluru : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆತಂಕಕಾರಿ ಘಟನೆ ನಡೆದಿದೆ.

Bengaluru : ಪ್ರವಾಸಿಗರ ನೆಚ್ಚಿನ ತಾಣ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta Biological Park) ಆತಂಕಕಾರಿ ಘಟನೆ ನಡೆದಿದೆ. ಉದ್ಯಾನವನದ ಪುನರ್ವಸತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರ ಮೇಲೆ ಚಿರತೆ ದಿಢೀರ್ ದಾಳಿ ನಡೆಸಿದೆ.
ಘಟನೆಯ ವಿವರ
ಉದ್ಯಾನವನದ ಪಾಲಕ ಶಾಂತಪ್ಪ (48) ದಾಳಿಯಲ್ಲಿ ಗಾಯಗೊಂಡ ಸಿಬ್ಬಂದಿಯಾಗಿದ್ದಾರೆ. ಎಂದಿನಂತೆ ಶಾಂತಪ್ಪ ಪ್ರಾಣಿಗಳ ಬೋನ್ನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ನಿಯಮದಂತೆ ಸ್ವಚ್ಛತೆಗೆ ಮುನ್ನ ಚಿರತೆಯನ್ನು ಪಕ್ಕದ ಕೇಜ್ಗೆ ರವಾನಿಸಲಾಗಿತ್ತು.
ಇದನ್ನು ಓದಿ : ಅಮೆರಿಕಾದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನಾಪತ್ತೆ!

ಆದರೆ, ಶಾಂತಪ್ಪ ಅವರು ಕೇಜ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಪಕ್ಕದ ಕೇಜ್ನಲ್ಲಿದ್ದ ಚಿರತೆ ಏಕಾಏಕಿ ರೊಚ್ಚಿಗೆದ್ದು, ಎರಡು ಕೇಜ್ಗಳ ಮಧ್ಯದಲ್ಲಿದ್ದ ಕಬ್ಬಿಣದ ಮೆಷ್ ಸಂದುಗಳಲ್ಲಿ ತನ್ನ ಉಗುರುಗಳನ್ನು ತೂರಿಸಿ ಅವರ ಮೇಲೆ ಎರಗಿದೆ.
ಕೆನ್ನೆ, ಕುತ್ತಿಗೆಗೆ ಗಾಯ – Bengaluru
ಚಿರತೆಯು ಮೆಷ್ ಮೂಲಕವೇ ಶಾಂತಪ್ಪ ಅವರ ಕೆನ್ನೆ ಮತ್ತು ಕುತ್ತಿಗೆಯ ಭಾಗಕ್ಕೆ ಉಗುರಿನಿಂದ ದಾಳಿ ನಡೆಸಿದೆ. ಅದೃಷ್ಟವಶಾತ್ ಕಬ್ಬಿಣದ ಮೆಷ್ ಅಡ್ಡಿಯಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ತಕ್ಷಣವೇ ಇತರ ಸಿಬ್ಬಂದಿ ಶಾಂತಪ್ಪ ಅವರನ್ನು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.
ಇದನ್ನು ನೋಡಿ : ಹಿಟಾಚಿ ಕಂಪನಿಯಿಂದ ಇದೆಂಥಾ ನಿರ್ಲಕ್ಷ್ಯ.. 3 ದಿನಗಳಿಂದ ಪ್ರತಿಭಟಿಸಿದ್ರು ಡೋಂಟ್ ಕೇರ್




