Tumakuru : ಜ್ಯೋತಿಷಿಯೋರ್ವನ ಮಾತನ್ನು ನಂಬಿ ಮಗಳೇ ತನಗೆ ಜನ್ಮ ನೀಡಿದ ತಾಯಿಯನ್ನು ಕೊಂದಿರುವ ದಾರುಣ ಘಟನೆ ತುಮಕೂರಿನ ಶ್ರೀನಗರದಲ್ಲಿ ನಡೆದಿದೆ.

Tumakuru : ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಬೇಕಾದ್ರು ಇರಬಹುದು. ಆದ್ರೆ ಕೆಟ್ಟ ತಾಯಿ ಎಂದಿಗೂ ಇರೋದಿಲ್ಲ ಅಂತಾರೆ. ಇಂತಹ ತ್ಯಾಗಮಯಿ ತಾಯಿಯನ್ನೇ ಪಾಪಿ ಮಗಳೊಬ್ಬಳು ಕೊಂದು ಸಿನಿಮೀಯ ಕಥೆ ಕಟ್ಟಿರೋ ಮಗಳು ಈಗ ಲಾಕ್ ಆಗಿದ್ದಾಳೆ.
ಅಷ್ಟಕ್ಕೂ ಘಟನೆ ನಡೆದಿರೋದು ಎಲ್ಲಿ..?
ತುಮಕೂರು ನಗರದ ಬಂಡೇಪಾಳ್ಯ ಬಳಿಯ ಶ್ರೀನಗರದಲ್ಲಿ ಈ ಘಟನೆ ನಡೆದಿದ್ದು, 55 ವರ್ಷದ ಪುಷ್ಪಲತಾ ಕೊಲೆಯಾದ ಮೃತ ದುರ್ದೈವಿಯಾಗಿದ್ದಾರೆ. ತಾಯಿ ಪುಷ್ಪಲತಾಗೆ 55 ವರ್ಷ ವಯಸ್ಸಾಗಿದ್ದು, ಒಂದು ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡಿದ್ರು.
ಮಗಳು ಸುಚಿತ್ರಾ ಹಾಗೂ ಅಳಿಯನ ಜೊತೆ ಇದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಪುಷ್ಪಲತಾ ಮಂಡಿನೋವಿನಿಂದ ಹಾಸಿಗೆ ಹಿಡಿದಿದ್ದಳು. ಆದ್ರೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಪುಷ್ಪಲತಾ ನಿಗೂಢವಾಗಿ ಸಾವನ್ನಪ್ಪಿದ್ದು, ಇದೀಗ ಕೊಲೆಯ ರಹಸ್ಯ ಬಯಲಾಗಿದೆ.
ಹೆತ್ತ ಮಗಳೇ ತನ್ನ ಗಂಡನ ಜೊತೆ ಸೇರಿ ಹಾಸಿಗೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಹೃದಯಾಘಾತವಾಗಿದೆ ಎಂದು ಕಥೆ ಕಟ್ಟಿದ್ದಳಂತೆ. ಅಲ್ದೇ ರಾತ್ರಿ ತಾಯಿ ಪುಷ್ಪಲತಾ ಸಾವನ್ನಪ್ಪುತ್ತಿದ್ದಂತೆ ಮಧ್ಯರಾತ್ರಿ ಸಂಬಂಧಿಕರಿಗೆ ಕರೆ ಮಾಡಿದ ಮಗಳು, ತನ್ನ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ : Tumakuru ಬಳಿ ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು..!!

ತಾಯಿಯನ್ನು ಕೊಂದು ಕಥೆ ಕಟ್ಟಿದ ಮಗಳು ಲಾಕ್!
ತಾಯಿಯ ಕೊನೆ ಆಸೆಯಂತೆ ತಂದೆಯ ಪಕ್ಕವೇ ಮಣ್ಣು ಮಾಡಬೇಕು ಅಂತಾ ತುಮಕೂರು ಗ್ರಾಮಾಂತರ ಕ್ಷೇತ್ರ ಆಲಪನಹಳ್ಳಿಗೆ ತಾಯಿಯ ಮೃತದೇಹವನ್ನು ಕೊಂಡೊಯ್ದಿದ್ದಾರೆ. ಅಂತ್ಯಕ್ರಿಯೆ ವೇಳೆ ಮೃತ ಪುಷ್ಪಲತಾ ಮುಖದ ಮೇಲೆ ಗಾಯದ ಗುರುತುಗಳನ್ನು ಕಂಡ ಸಂಬಂಧಿಕರು ಅನುಮಾನಗೊಂಡು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪುಷ್ಪಲತಾ ಹೃದಯಾಘಾತದಿಂದ ಸಾವನ್ನಪ್ಪಿಲ್ಲ, ಕೊಲೆಯಾಗಿದ್ದಾರೆ ಎಂಬುದನ್ನು ಬಯಲುಮಾಡಿದ್ದಾರೆ.
ಪುಷ್ಪಲತಾರನ್ನು ಕೊಲೆ ಮಾಡಿದ್ದು, ಮತ್ಯಾರೂ ಅಲ್ಲ. ಆಕೆಯ ಮಗಳೇ ಅನ್ನೋ ಕಠೋರ ಸತ್ಯ ಬಯಲಾಗಿದೆ. ಇನ್ನು, ಒಂದು ವರ್ಷದ ಹಿಂದೆ ಮೃತ ಪುಷ್ಪಲತಾ ಗಂಡ ಬಾಬು ನಾಯಕ್ ಮೃತಪಟ್ಟಿದ್ದರು. ತಂದೆಯ ಮುದ್ದಿನ ಮಗಳಾಗಿದ್ದ ಸುಚಿತ್ರಾ, ತಂದೆಯ ಸಾವಿನಿಂದ ಚಿಂತೆಗೀಡಾಗಿದ್ದಳು.
ಇದೇ ದುಃಖದಲ್ಲಿ ಜ್ಯೋತಿಷಿಯೊಬ್ಬರನ್ನು ಭೇಟಿ ಮಾಡಿ ತನ್ನ ತಂದೆಯ ಸಾವಿನ ಬಗ್ಗೆ ಹೇಳಿಕೊಂಡಿದ್ದಾಳೆ. ಆದ್ರೆ ಜ್ಯೋತಿಷಿಯು ನಿನ್ನ ತಂದೆ ಸಾವಿಗೆ ನಿನ್ನ ತಾಯಿಯೇ ಕಾರಣ. ಅವರು ಮಾಟ ಮಂತ್ರ ಮಾಡಿಸಿದ್ದರಿಂದ ಗಂಡ ಸಾವನ್ನಪ್ಪಿದ್ದರು ಎಂದು ಹೇಳಿದ್ದರು.

ಮಗಳು–ಅಳಿಯ ಪೊಲೀಸ್ ವಶಕ್ಕೆ!
ಜ್ಯೋತಿಷಿ ಮಾತು ಕೇಳಿ ತಾಯಿಯನ್ನೇ ಕೊಂದಿದ್ದಾಳೆ ಅಂತಾ ಪೊಲೀಸರ ವಿಚಾರಣೆಯಲ್ಲಿ ಮಗಳು ಸುಚಿತ್ರಾ ಕಥೆ ಕಟ್ಟಿದ್ದಾಳೆ. ಮೃತ ಪುಷ್ಪಲತಾ ಗಂಡ ಆಟೋ ಚಾಲಕರಾಗಿದ್ದು ಎರಡು ಸೈಟ್ಗಳು ಇದ್ದು, ಅದ್ರಲ್ಲಿ ಒಂದು ಸೈಟ್ನನ್ನು ಮಾರಾಟ ಮಾಡಿ ಅದ್ರಲ್ಲಿ ಬಂದಿದ್ದ ಹಣದಲ್ಲಿ ಮನೆ ಕಟ್ಟಿಸಿ, ಉಳಿದ 40 ಲಕ್ಷ ಹಣವನ್ನು ಆತನ ಗಂಡ ಬಾಬು ನಾಯಕ್, ತನ್ನ ಹೆಂಡ್ತಿ ಪುಷ್ಪಲತಾ ಹೆಸರಲ್ಲಿ ಡೆಪಾಸಿಟ್ ಇಟ್ಟಿದ್ದು.
ಆ ಹಣದ ಮೇಲೆ ಮಗಳು ಸುಚಿತ್ರಾ ಕಣ್ಣು ಬಿದ್ದಿದ್ದು, ಹಣ ಕೊಡುವಂತೆ ತಾಯಿಯೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದಳಂತೆ. ಇದೇ ಹಣದ ವಿಚಾರಕ್ಕೆ ಮಗಳು ಸುಚಿತ್ರಾ ತಾಯಿ ಪುಪ್ಪಲತಾಳನ್ನು ಕೊಂದಿದ್ದಾಳೆ ಅನ್ನೋ ಆರೋಪವೂ ಕೇಳಿ ಬಂದಿದೆ.ದೆ̤

ಸದ್ಯ ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗಳು ಹಾಗೂ ಅಳಿಯನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆ ಬಳಿಕವಷ್ಠೇ ಸತ್ಯ ಗೊತ್ತಾಗಲಿದೆ.
ಅದೇನೆ ಆಗಲಿ ಮಕ್ಕಳಿಗಾಗಿ ಎಲ್ಲವನ್ನು ತ್ಯಾಗ ಮಾಡುವ ತಾಯಿಯನ್ನೇ ಹೀನಾಯವಾಗಿ ಕೊಲೆ ಮಾಡಿದ್ದು ಮಾತ್ರ ದುರಂತ.. ತಾಯಿಯನ್ನು ಕೊಂದ ತಪ್ಪಿಗೆ ಮಗಳು ಜೈಲುಪಾಲಾಗಿದ್ದು, ತನ್ನ ಜೀವನವನ್ನೇ ಹಾಳು ಮಾಡಿಕೊಂಡಿದ್ದಾಳೆ.
MUST WATCH : ಹೆತ್ತ ತಾಯಿಯನ್ನೇ ಉಸಿರುಗಟ್ಟಿಸಿ ಕೊಂದ ಪಾಪಿ ಮಗಳು- ಅವಳು ಕಟ್ಟಿದ ಕಥೆ ಕೇಳಿದ್ರೆ ಶಾಕ್ ಆಗ್ತೀರಾ..?




