Gold Silver Rate : 2-3 ದಿನದಲ್ಲಿ 600 ರೂನಷ್ಟು ಏರಿದ್ದ ಚಿನ್ನದ ಬೆಲೆ ಮಂಗಳವಾರ 85 ರೂ ಕಡಿಮೆಗೊಂಡಿದೆ. ಬೆಳ್ಳಿ ಬೆಲೆ 10 ರೂ ತಗ್ಗಿದೆ.

Gold Silver Rate : ಮಂಗಳವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ. ಚಿನ್ನದ ಬೆಲೆ ಗ್ರಾಮ್ಗೆ 85 ರೂ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಕೂಡ ಗ್ರಾಮ್ಗೆ 10 ರೂ ತಗ್ಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,44,750 ರೂ ಆಗಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,57,910 ರೂ ಆಗಿದೆ. 100 ಗ್ರಾಮ್ ಬೆಳ್ಳಿಯ ಬೆಲೆ 29,000 ರೂ ಆಗಿದೆ.
ಬೆಂಗಳೂರು ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,44,750 ರೂ ಆಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 29,000 ರೂ ಇದೆ. ಆದರೆ ತಮಿಳುನಾಡು, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ 30,000 ರೂವರೆಗೆ ದಾಖಲಾಗಿದೆ.
ಇದನ್ನೂ ಓದಿ : Weekend ನಲ್ಲಿ ಮತ್ತೇ ಚಿನ್ನ–ಬೆಳ್ಳಿ ಬೆಲೆಯಲ್ಲಿ ಏರಿಕೆ.!

ಫೆಬ್ರವರಿ10ರ ಚಿನ್ನ–ಬೆಳ್ಳಿ ದರ (ಭಾರತ)
- 24 ಕ್ಯಾರಟ್ ಚಿನ್ನ (1 ಗ್ರಾಂ): 15,791 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ): 14,475 ರೂ
- 18 ಕ್ಯಾರಟ್ ಚಿನ್ನ (1 ಗ್ರಾಂ): 11,844 ರೂ
- ಬೆಳ್ಳಿ (1 ಗ್ರಾಂ): 290 ರೂ
ಬೆಂಗಳೂರಿನ ಚಿನ್ನ–ಬೆಳ್ಳಿ ದರ
- 24 ಕ್ಯಾರಟ್ ಚಿನ್ನ (1 ಗ್ರಾಂ): 15,791 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ): 14,475 ರೂ
- ಬೆಳ್ಳಿ (1 ಗ್ರಾಂ): 290 ರೂ
ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತ ಹಾಗೂ ಡಾಲರ್ ಮೌಲ್ಯದ ವ್ಯತ್ಯಾಸದಿಂದ ಚಿನ್ನ–ಬೆಳ್ಳಿ ದರಗಳಲ್ಲಿ ಸಣ್ಣ ಮಟ್ಟದ ಬದಲಾವಣೆ ಕಂಡುಬರುತ್ತಿದ್ದು, ಚಿನ್ನ ಬೆಳ್ಳಿ ಬೆಲೆಯಲ್ಲಿ ಹಾವು ಏಣಿ ಆಟ ಆಡುತ್ತಿದೆ.
MUST WATCH : METRO ಪ್ರಯಾಣಿಕರಿಗೆ GOOD NEWS BMRCL ನಿರ್ಧಾರಕ್ಕೆ ಜನ ಪುಲ್ ಖುಷ್




