BMRCL ಮೆಟ್ರೋ ದರ ಏರಿಕೆ ನಿರ್ಧಾರಕ್ಕೆ ತಾತ್ಕಾಲಿಕ ವಿರಾಮ.. ಮೆಟ್ರೋ ದರ ಏರಿಕೆ ನಿರ್ಧಾರ ಮುಂದೂಡಿಕೆ..!!

ನಮ್ಮ ಮೆಟ್ರೋ ದರ ಏರಿಕೆ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲು ಇಂದು ನಡೆಯಬೇಕಿದ್ದ BMRCL ಬೋರ್ಡ್ ಮೀಟಿಂಗ್ ಅನ್ನು ದಿಢೀರ್ ರದ್ದುಗೊಳಿಸಲಾಗಿದೆ. ಈ ಅಚಾನಕ್ ನಿರ್ಧಾರದಿಂದ ಮೆಟ್ರೋ ಪ್ರಯಾಣಿಕರು ಹಾಗೂ ಸಾರ್ವಜನಿಕರಲ್ಲಿ ಹಲವು ಅನುಮಾನಗಳು ಮೂಡಿವೆ.
ಇಂದು ಬೆಂಗಳೂರಿನ ಶಾಂತಿನಗರದಲ್ಲಿರುವ BMRCL ಕಚೇರಿಯಲ್ಲಿ ಬೋರ್ಡ್ ಸಭೆ ನಡೆಯಬೇಕಾಗಿತ್ತು.
ಆದರೆ, ಅನಿವಾರ್ಯ ಕಾರಣಗಳಿಂದಾಗಿ ಈ ಸಭೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕ್ರಿಸ್ ಗೇಲ್ ಭರ್ಜರಿ ದಾಖಲೆ ಮುರಿದ Shimron Hetmyer

ಮೆಟ್ರೋ ದರ ಏರಿಕೆ ನಿರ್ಧಾರ ಮುಂದೂಡಿಕೆ..!
ಈ ಸಭೆಯಲ್ಲಿ ನಮ್ಮ ಮೆಟ್ರೋ ದರ ಏರಿಕೆಯನ್ನು ಮುಂದುವರಿಸಬೇಕೇ, ತಿದ್ದುಪಡಿ ಮಾಡಬೇಕೇ ಅಥವಾ ರದ್ದುಗೊಳಿಸಬೇಕೇ ಎಂಬ ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗಿತ್ತು.
ಆದರೆ ಸಭೆ ರದ್ದಾದ ಕಾರಣ, ಮೆಟ್ರೋ ಟಿಕೆಟ್ ದರ ಏರಿಕೆ ಕುರಿತು ಅಂತಿಮ ತೀರ್ಮಾನವೂ ಮುಂದೂಡಿಕೆಯಾಗಿದೆ.

ಮುಂದಿನ ಸಭೆ ಯಾವಾಗ?
ಮೂಲಗಳ ಪ್ರಕಾರ, ರದ್ದಾದ ಬೋರ್ಡ್ ಮೀಟಿಂಗ್ ನಾಳೆ ನಡೆಯುವ ಸಾಧ್ಯತೆ ಇದೆ.
ಆದ್ದರಿಂದ, ಲಕ್ಷಾಂತರ ಮೆಟ್ರೋ ಪ್ರಯಾಣಿಕರು ಮುಂದಿನ ನಿರ್ಧಾರಕ್ಕಾಗಿ ಕಾದು ನೋಡುತ್ತಿದ್ದಾರೆ.
MUST WATCH : ಬೆಂಗಳೂರಲ್ಲಿ ಮತ್ತೆ RCB ಮ್ಯಾಚ್ ಭದ್ರತೆ ಬಗ್ಗೆ ಪರಮೇಶ್ವರ್ ಏನಂದ್ರು ಗೊತ್ತಾ?




