ಬೆಂಗಳೂರು ಮೆಟ್ರೋ ರೈಲು ನಿಗಮ BMRCL ಇಂದು ಮಹತ್ವದ ನಿರ್ದೇಶಕರ ಮಂಡಳಿ ಸಭೆ ನಡೆಸಲಿದೆ.

ಮೆಟ್ರೋ ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮ BMRCL ಇಂದು ಮಹತ್ವದ ನಿರ್ದೇಶಕರ ಮಂಡಳಿ ಸಭೆ ನಡೆಸಲಿದೆ. ಲಕ್ಷಾಂತರ ಮೆಟ್ರೋ ಪ್ರಯಾಣಿಕರು ಸಭೆಯ ಅಂತಿಮ ನಿರ್ಧಾರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಇಂದು ಸಂಜೆ 4 ಗಂಟೆಗೆ, ಬೆಂಗಳೂರಿನ ಶಾಂತಿನಗರದಲ್ಲಿರುವ BMRCL ಕಚೇರಿಯಲ್ಲಿ ಬೋರ್ಡ್ ಮೀಟಿಂಗ್ ನಡೆಯಲಿದೆ.
ದರ ಏರಿಕೆ ಕುರಿತು ಸಾರ್ವಜನಿಕ ಆಕ್ಷೇಪ ವ್ಯಕ್ತವಾದ ಕಾರಣ, ಈ ಸಭೆಗೆ ವಿಶೇಷ ಮಹತ್ವ ದೊರೆತಿದೆ.
ಇದನ್ನು ನೋಡಿ : ವಸಂತ ನರಸಾಪುರ ಬಳಿ ಮತ್ತೊಂದು ಅಗ್ನಿ ಅವಘಡ

ಒಟ್ಟು 14 ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಚೇರ್ಮನ್ ಸೇರಿ 5 ಅಧಿಕಾರಿಗಳು .ರಾಜ್ಯ ಸರ್ಕಾರದ ಪರವಾಗಿ ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡ 5 ಅಧಿಕಾರಿಗಳು . BMRCLನ 4 ನಿರ್ದೇಶಕರು ಕೆಲವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಪ್ರಮುಖ ಅಜೆಂಡಾ – ಮೆಟ್ರೋ ದರ ಏರಿಕೆ
ಇತ್ತೀಚೆಗೆ ಮೆಟ್ರೋ ದರ ಏರಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಇದರಿಂದಾಗಿ ತಾತ್ಕಾಲಿಕ ತಡೆ ನೀಡಲಾಗಿದೆ.
ಈ ಹಿನ್ನೆಲೆ, ಸಭೆಯಲ್ಲಿ ಮೂರು ಆಯ್ಕೆಗಳು ಚರ್ಚೆಯಾಗುವ ಸಾಧ್ಯತೆ ಇದೆ:
ದರ ಏರಿಕೆಯನ್ನು ಮುಂದುವರಿಸುವುದೇ? ತಿದ್ದುಪಡಿ ಮಾಡುವುದೇ? ಸಂಪೂರ್ಣವಾಗಿ ಹಿಂಪಡೆಯುವುದೇ?

ಪ್ರಯಾಣಿಕರ ನಿರೀಕ್ಷೆ
ಸಭೆ ಮುಗಿದ ಬಳಿಕ ಮೆಟ್ರೋ ದರ ಏರಿಕೆ ಕುರಿತು ಅಂತಿಮ ತೀರ್ಮಾನ ಪ್ರಕಟವಾಗುವ ಸಾಧ್ಯತೆ ಇದೆ.
ಆದ್ದರಿಂದ, ಬೆಂಗಳೂರು ನಗರದ ಲಕ್ಷಾಂತರ ಮೆಟ್ರೋ ಪ್ರಯಾಣಿಕರು ಸಭೆಯ ಫಲಿತಾಂಶದತ್ತ ಕಾದು ನೋಡುತ್ತಿದ್ದಾರೆ.
ಇದನ್ನು ಓದಿ : ನಟ Darshan ವಿಚಾರವಾಗಿ ಧನ್ವೀರ್ ತಿರುಗೇಟು..!




