Metro ಜಟಾಪಟಿ| ʻಕಾಂಗ್ರೆಸ್ ಸರ್ಕಾರ ಖಾಲಿ ಟ್ರಂಕ್ ಸರ್ಕಾರʼ ಟ್ರಂಕ್ ಹಿಡ್ಕೊಂಡು ಬಂದ ತೇಜಸ್ವಿ ಸೂರ್ಯ ವಶಕ್ಕೆ .

ಮೆಟ್ರೋ ಪ್ರಯಾಣಿಕರಿಗೆ ಕೊನೆಗೂ ನೆಮ್ಮದಿಯ ಸುದ್ದಿ ಸಿಕ್ಕಿದೆ. ಟಿಕೆಟ್ ದರ ಏರಿಕೆಯಾಗಲಿದೆ ಎಂಬ ಆತಂಕದಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಇತ್ತ ದರ ಏರಿಕೆ ಪ್ರಸ್ತಾಪ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯನ್ನು ಟೀಕಿಸಿ ಸಂಸದ ತೇಜಸ್ವಿ ಸೂರ್ಯಇಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಟ್ರಂಕ್ ಹಿಡ್ಕೊಂಡು ಬಂದ ತೇಜಸ್ವಿ ಸೂರ್ಯ ವಶಕ್ಕೆ
ಆರ್ವಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ‘ಖಾಲಿ ಟ್ರಂಕ್’ ಕೈಯಲ್ಲಿ ಹಿಡಿದು ಆಗಮಿಸಿದ ಸಂಸದರು, ರಾಜ್ಯ ಸರ್ಕಾರದ ಖಜಾನೆ ಸ್ಥಿತಿಯನ್ನು ವ್ಯಂಗ್ಯವಾಗಿ ಪ್ರಶ್ನಿಸಿದರು.
ಆರ್ವಿ ರಸ್ತೆಯಿಂದ ನ್ಯಾಷನಲ್ ಕಾಲೇಜು Metro ನಿಲ್ದಾಣದವರೆಗೆ ಟಿಕೆಟ್ ಪಡೆದು ಟ್ರಂಕ್ ಜೊತೆಗೆ ಮೆಟ್ರೋ ಪ್ರಯಾಣಕ್ಕೆ ಮುಂದಾದ ವೇಳೆ ಪೊಲೀಸರು ಅವರನ್ನು ತಡೆದರು. ಮೆಟ್ರೋದಲ್ಲಿ ಪ್ರಯಾಣಿಸುವ ಮುನ್ನವೇ ಸಂಸದರನ್ನು ಹಾಗೂ ಅವರ ಕೈನಲ್ಲಿದ್ದ ಟ್ರಂಕ್ ಅನ್ನು ಪೊಲೀಸರು ವಶಕ್ಕೆ ಪಡೆದರು.
ಇದು ರಾಜ್ಯ ಸರ್ಕಾರದ ಪ್ರತೀಕ
ಪೊಲೀಸರ ಕ್ರಮದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ, “ನಾನು ಮುಷ್ಕರವನ್ನೂ ಮಾಡುತ್ತಿಲ್ಲ, ಪ್ರತಿಭಟನೆಯನ್ನೂ ಮಾಡುತ್ತಿಲ್ಲ. ಟಿಕೆಟ್ ಪಡೆದು ಸಾಮಾನ್ಯ ಪ್ರಯಾಣಿಕನಂತೆ ಮೆಟ್ರೋ ಪ್ರಯಾಣಕ್ಕೆ ಬಂದಿದ್ದೇನೆ.
ನನ್ನ ಕೈಯಲ್ಲಿರುವುದು ಕೇವಲ ಖಾಲಿ ಟ್ರಂಕ್ ಅಲ್ಲ, ಇದು ರಾಜ್ಯ ಸರ್ಕಾರದ ಪ್ರತೀಕ. ಸರ್ಕಾರವೇ ಹೇಳಿಕೊಂಡಂತೆ ‘ಶ್ಯಾಡೋ ಕ್ಯಾಶ್ ಸಪೋರ್ಟ್’ ನೀಡಲು ಹಣವಿಲ್ಲ, ಖಜಾನೆ ಖಾಲಿಯಾಗಿದೆ. ಅದನ್ನೇ ಈ ಟ್ರಂಕ್ ಸೂಚಿಸುತ್ತದೆ,” ಎಂದು ವ್ಯಂಗ್ಯ ವಾಡಿದರು.
ಇದನ್ನು ನೋಡಿ : ವಸಂತ ನರಸಾಪುರ ಬಳಿ ಮತ್ತೊಂದು ಅಗ್ನಿ ಅವಘಡ

ಶ್ವೇತಪತ್ರ ಹೊರಡಿಸಲು ಆಗ್ರಹ
ಮುಂದುವರೆದು ಮಾತನಾಡಿದ ಅವರು, “ಒಂದೆಡೆ ಮೆಟ್ರೋಗೆ ಹಣಕಾಸಿನ ನೆರವು ನೀಡಲು ದುಡ್ಡಿಲ್ಲ ಎನ್ನುತ್ತೀರಿ, ಮತ್ತೊಂದೆಡೆ ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ (ಟನಲ್) ನಿರ್ಮಾಣ ಮಾಡುತ್ತೇವೆ ಎನ್ನುತ್ತೀರಿ.
ರಾಜ್ಯದ ನಿಜವಾದ ಆರ್ಥಿಕ ಸ್ಥಿತಿ ಏನು ಎಂಬುದು ಜನರಿಗೆ ತಿಳಿಯಬೇಕು,” ಎಂದು ಹೇಳಿದರು. ಈ ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರ್ಕಾರ ತನ್ನ ಆರ್ಥಿಕ ಸ್ಥಿತಿಗತಿಯ ಬಗ್ಗೆ ‘ಶ್ವೇತ ಪತ್ರ’ ಹೊರಡಿಸಬೇಕು,” ಎಂದು ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಇದನ್ನು ಓದಿ : ನಟ Darshan ವಿಚಾರವಾಗಿ ಧನ್ವೀರ್ ತಿರುಗೇಟು..!




