Cricket : ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧ 80 ಎಸೆತಗಳಲ್ಲಿ 175 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ.

Cricket : ಇಂಗ್ಲೆಂಡ್ ವಿರುದ್ಧ ಹರಾರೆಯಲ್ಲಿ ನಡೆದ U-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ.
19 ವರ್ಷದ ವೈಭವ್, ಈ ಪಂದ್ಯದಲ್ಲಿ 80 ಎಸೆತಗಳಲ್ಲಿ 175 ರನ್ಗಳ ಅಬ್ಬರದ ಇನ್ನಿಂಗ್ಸ್ ಆಡಿದ್ದು, 15 ಬೌಂಡರಿ ಮತ್ತು 15 ಸಿಕ್ಸರ್ಗಳನ್ನು ಬಾರಿಸಿದ್ದಾರೆ. 218.75ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ವೈಭವ್, ವಿಶ್ವಕಪ್ ಫೈನಲ್ನಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆ ಬರೆದಿದ್ದಾರೆ.
32 ಎಸೆತಕ್ಕೆ ಅರ್ಧಶತಕ ಹಾಗೂ 55 ಎಸೆತಗಳಲ್ಲಿ ಶತಕ ಬಾರಿಸಿ, ಈ ಮೂಲಕ U-19 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಬಾರಿಸಿದ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡ್ರು.
ವೈಭವ್ ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ 80 ರನ್ ಕಲೆಹಾಕಿದ್ದಾರೆ. ಈ ಶತಕದೊಂದಿಗೆ ವೈಭವ್ ಸೂರ್ಯವಂಶಿ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

7 ಪಂದ್ಯಗಳನ್ನು ಆಡಿರುವ ಅವರು 62.71ರ ಸರಾಸರಿಯಲ್ಲಿ ಒಟ್ಟು 439 ರನ್ ಬಾರಿಸಿದ್ದು, 1 ಶತಕ ಮತ್ತು 3 ಅರ್ಧಶತಕಗಳು ಸೇರಿವೆ.
ಈ 7 ಇನ್ನಿಂಗ್ಸ್ಗಳಲ್ಲಿ 41 ಬೌಂಡರಿ ಮತ್ತು 30 ಸಿಕ್ಸರ್ಗಳನ್ನು ಬಾರಿಸಿರುವುದು ಕೂಡ ದಾಖಲೆ ಸಾಧನೆಯಾಗಿದೆ. U-19 ವಿಶ್ವಕಪ್ ಫೈನಲ್ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಲ್ದೇ, ಇಂಗ್ಲೆಂಡ್ ವಿರುದ್ಧ U-19 ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆಯೂ ವೈಭವ್ ಪಾಲಾಗಿದೆ. ಇಂಗ್ಲೆಂಡ್ ವಿರುದ್ಧವೇ ತಮ್ಮ ಅತ್ಯಂತ ವೇಗದ ಶತಕವನ್ನೂ ಅವರು ಸಿಡಿಸಿದ್ದಾರೆ.
ಇದನ್ನೂ ಓದಿ : ‘ಈ ಸಲ ಕಪ್ ನಮ್ದು’ – ಹ್ಯಾಟ್ರಿಕ್ ಟ್ರೋಫಿ ಗೆದ್ದ RCB
ವೈಭವ್ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಆಟಗಾರರಾಗಿದ್ದು, ಜೊತೆಗೆ, U-19 ಏಕದಿನ ಕ್ರಿಕೆಟ್ನಲ್ಲಿ 100 ಸಿಕ್ಸರ್ಗಳನ್ನು ಬಾರಿಸಿದ ಮೊದಲ ಆಟಗಾರನಾಗಿದ್ದಾರೆ.

ವೈಭವ್ ಸೂರ್ಯವಂಶಿಯ ಈ ಅದ್ಭುತ ಪ್ರದರ್ಶನ ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ಮೂಡಿಸಿದ್ದು, ಟೀಂ ಇಂಡಿಯಾದ ಭವಿಷ್ಯ ಮತ್ತಷ್ಟು ಬೆಳಗುವ ನಿರೀಕ್ಷೆ ಮೂಡಿಸಿದೆ.
MUST WATCH : ಭರ್ಜರಿ ಬೌಲಿಂಗ್ ಮಾಡಿದ ಹೆಬ್ಬಾಳ್ಕರ್ ಕ್ಲೀನ್ ಬೋಲ್ಡ್ ಆದ ಸತೀಶ್ ಜಾರಕಿಹೊಳಿ




